Advertisement

ಸರಳ ರೇಖೆ, ಬಿಗ್‌ಬಾಸ್‌ ಕೂಲ್‌ ಲೇಡಿಗೆ ಹಾವು ಹಿಡಿಯೋದು ಗೊತ್ತು!

10:52 AM Feb 08, 2017 | Harsha Rao |

ರೇಖಾ ಬಿಗ್‌ಬಾಸ್‌ನ ಕೂಲ್‌ ಲೇಡಿ.  ಕೊನೆಯ ಕ್ಷಣದವರೆಗೂ ನಿರೀಕ್ಷೆ ಮೂಡಿಸಿದವರು. “ನಂಗೆ ನಂಬಿಕೆಯಿರೋದು ರಿಸಲ್ಟ್ ಮೇಲೆ, ಸ್ಪರ್ಧಿಗಳ ಜೊತೆಗೆ ಜಗಳ ಆಡೋದ್ರಲ್ಲಲ್ಲ’ ಅಂತ ಸಮಾಧಾನದಿಂದ ಹೇಳುವ ರೇಖಾಗೆ, ಹೊರಗಿನ ಜಗತ್ತಿಗಿಂತ ಬಿಗ್‌ಬಿ ಮನೆ ಒಳಗಿನ ಜಗತ್ತೇ ಇಷ್ಟ ಆಯ್ತಂತೆ. ಪ್ರಥಮ್‌ ಬಿಗ್‌ಬಾಸ್‌ ಗೆದ್ದ ಬಗ್ಗೆಯೂ ಖುಷಿಯಿದೆ. ಬಿಗ್‌ಬಾಸ್‌ ಮನೆಯ ಕೊನೆಯ ಕ್ಷಣಗಳ ಆತಂಕ, ನಿರೀಕ್ಷೆಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ರೇಖಾ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ವಿಚಾರಗಳೂ ಇವೆ. 
*
ಒಂದಿಷ್ಟು ಅಚ್ಚರಿಗಳು 
– ರೇಖಾ ಹಾವು ಹಿಡೀತಾರೆ ಗೊತ್ತಾ?
ಚಿಕ್ಕ ಹಾವುಗಳಿಂದ ಹಿಡಿದು ದೊಡ್ಡ ದೊಡ್ಡ ಹಾವುಗಳ ತನಕ ಹೆಚ್ಚಿನ ಎಲ್ಲ ಬಗೆಯ ಹಾವುಗಳನ್ನೂ ಹಿಡಿಯೋ ಕಲೆ ರೇಖಾಗೆ ಗೊತ್ತಿದೆ. ಬಹಳ ಹಿಂದೆ ಹಾವು ಹಿಡಿಯುವ ಬಗೆಗಿನ ವರ್ಕ್‌ಶಾಪ್‌ನಲ್ಲಿ ಅವರು ಪಾಲ್ಗೊಂಡಿದ್ರು. ಬಳಿಕ ಅವರಿಗೆ ಹಾವು ಹಿಡಿಯೋದು ಸಲೀಸಾಗಿದೆ. ಎಷ್ಟೋ ಸಲ ರಸ್ತೆ ಬದಿಯಲ್ಲಿ ಓಡಾಡುವ ಹಾವುಗಳನ್ನ ಹಿಡಿದು ಸಂರಕ್ಷಣಾಲಯಕ್ಕೆ ನೀಡಿದ್ದಿದೆ. ಇದರ ಜೊತೆಗೆ ಎಷ್ಟೋ ಬಾರಿ ಗಾಯಗೊಂಡು ಬಿದ್ದಿರುವ ಪ್ರಾಣಿಗಳನ್ನೂ ರಕ್ಷಿಸಿ ಪ್ರಾಣಿದಯಾ ಸಂಘಕ್ಕೆ ನೀಡಿದ್ದಾರೆ.  

Advertisement

– ಪರ್ವತಾರೋಹಿಯೂ ಹೌದು !
ರೇಖಾಗೆ ಸಾಹಸ ಕ್ರೀಡೆಗಳಲ್ಲಿ ಮೊದಲಿಂದಲೂ ಆಸಕ್ತಿ. ಅದಕ್ಕೆ ತಕ್ಕಂಥ ಫ್ರೆಂಡ್‌ ಸರ್ಕಲ್‌ ಇದೆ. ಅವರ ಜೊತೆಗೆ ಆಗಾಗ ಟ್ರೆಕ್ಕಿಂಗ್‌ ಹೋಗೋ ಖಯಾಲಿ ಇದೆ. ಹಿಮಾಲಯ ಪರ್ವತ ಶ್ರೇಣಿಯ “ಹೂ ಕಣಿವೆ’ ಅರ್ಥಾತ್‌ ವ್ಯಾಲಿ ಆಫ್ ಫ್ಲವರ್, ಉತ್ತರ ಕಾಶಿಯ ಗಂಗೋತ್ರಿ ಸೇರಿದಂತೆ ಹಲವಾರು ಶಿಖರವನ್ನೇರಿದ್ದಾರೆ. ಬಾದಾಮಿ, ಹಂಪಿ, ಸಾವನದುರ್ಗ ಹೀಗೆ ಹಲವಾರು ಕಡೆ ಟ್ರೆಕ್‌ ಮಾಡಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದಿದ್ದೇ ಇನ್ನೊಂದಿಷ್ಟು ಟ್ರೆಕಿಂಗ್‌ ಪ್ಲೇಸ್‌ಗಳ ಲೀಸ್ಟ್‌ ರೆಡಿಯಾಗಿದೆ, ಪ್ರಂಡ್ಸ್‌ ತುದಿಗಾಗಲ್ಲಿ ಕಾಯ್ತಿದ್ದಾರೆ. 

– ಅತ್ಯುತ್ತಮ ಕ್ರೀಡಾಪಟು
ಕ್ರೀಡಾಪಟುಗಳಲ್ಲಿರುವ ಒಂದು ಗುಣ ಅಂದರೆ ಎಲ್ಲಿಗೆ ಹೋದರೂ ಅಡೆjಸ್ಟ್‌ ಆಗೋದು, ಎಂಥ ಕಠಿಣ ಹವಾಮಾನಕ್ಕೂ ಒಗ್ಗಿಕೊಳ್ಳೋದು. ಬಿಗ್‌ಬಿ ಮನೆಯಲ್ಲಿ ಸಣ್ಣ ಉದ್ವಿಗ್ನತೆಯೂ ಇಲ್ಲದೆ ಅಷ್ಟು ಸಾಮಾಧಾನವಾಗಿರಲು ಅವರು ಕ್ರೀಡಾಪಟುವಾಗಿರೋದು ಒಂದು ಮುಖ್ಯ ಕಾರಣ ಅಂತಾರೆ ರೇಖಾ. 
***
– ಕೊನೆಯ ಕ್ಷಣದವರೆಗೂ ರೇಖಾನೆ ಬಿಗ್‌ಬಾಸ್‌ ಆಗ್ತಾರೆ ಅಂತಿತ್ತು, ನಂತರ ಪ್ರಥಮ್‌ ಆದ್ರು, ಈ ಬೆಳವಣಿಗೆಗಳು ನಿಮಗೆ ಗೊತ್ತಿತ್ತಾ? ನಿಮ್ಮ ಮನಸ್ಸಲ್ಲಿ ಏನಿತ್ತು?
ಪ್ರತಿಸಲ ನಾಮಿನೇಶನ್‌ ರೌಂಡ್‌ ಬಂದಾಗಲೂ ನಾನು ಕೂಲಾಗಿಯೇ ಇರುತ್ತಿದ್ದೆ. ರಿಲ್ಯಾಕ್ಸ್‌ ಆಗಿರುತ್ತಿದ್ದೆ. ಸಾಮರ್ಥ್ಯ ಪ್ರದರ್ಶಿಸುವ ಸಂದರ್ಭದಲ್ಲಿ ನನ್ನ 100 ಪರ್ಸೆಂಟ್‌ ಕೊಟ್ಟಿರುತ್ತಿದ್ದೆನಲ್ಲ, ಹಾಗಾಗಿ ಟೆನ್ಶನ್‌ ಆಗ್ತಿರಲಿಲ್ಲ. 

– ಬಿಗ್‌ ಬಾಸ್‌ ಮನೆಯಲ್ಲಿ ಕೊನೆಯ ಹಂತದ ಟೆನ್ಶನ್‌ ಹೇಗಿತ್ತು?
ಪ್ರಥಮ್‌, ಕೀರ್ತಿ ಸಿಕ್ಕಾಪಟ್ಟೆ ಟೆನ್ಶನ್‌ ಮಾಡ್ಕೊಳ್ತಿದ್ರು. ನಾನು ಅವರಿಗೆ ತಮಾಷೆ ಮಾಡ್ತಿದ್ದೆ, ಚೆನ್ನಾಗಿ ರೇಗಿಸ್ತಿದ್ದೆ, ಡೋಂಟ್‌ ವರಿ, ಯಾಕಷ್ಟು ಟೆನ್ಶನ್‌ ಮಾಡ್ತೀರ ಅಂತ ಸಮಾಧಾನವನ್ನು ಮಾಡ್ತಿದ್ದೆ. ಆದ್ರೆ ಕೀರ್ತಿಗೆ ಶುರುವಿಂದಲೂ ಟೆನ್ಶನ್‌ ಜಾಸ್ತಿ, ಅವ° ಮುಖದಲ್ಲಿ ಮತ್ತದೇ ಆತಂಕ ಕಾಣಿ¤ತ್ತು. 

– ಪ್ರಥಮ್‌ ಬಿಗ್‌ಬಾಸ್‌ ಅಂದ್ರಿ, ಪ್ರತಿಸ್ಪರ್ಧಿ ಬಗ್ಗೆ ಅಷ್ಟು ಹೇಳ್ಳೋದು ಹೇಗೆ ಸಾಧ್ಯ ಆಯ್ತು?
ನಂಗೆ ರಿಸಲ್ಟ್ ಮೇಲೆ ನಂಬಿಕೆ. ನಾನು ಚೆನ್ನಾಗಿ ಮಾಡಿದ್ರೆ ಗೆಲ್ತಿàನಿ ಅನ್ನುವ ವಿಶ್ವಾಸ. ಜಗಳ ಆಡಿ, ಟೆನ್ಶನ್‌ ಮಾಡ್ಕೊಳ್ಳೋದೆಲ್ಲ ನಂಗೊತ್ತಿಲ್ಲ. ಪ್ರಥಮ್‌ ಬಿಗ್‌ಬಾಸ್‌ ಗೆದ್ದ ಬಗ್ಗೆ ನನಗೆ ಖುಷಿ ಇದೆ. ಅವ್ನು ತನಗೆ ಸಿಕ್ಕಿದ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸ್ತಿದ್ದಾನೆ ಅನ್ನೋದು ಹೆಮ್ಮೆ. ಅದರ ಜೊತೆಗೆ ಅವ್ನು ಪ್ರತೀ ಟಾಸ್ಕ್ನ್ನೂ ಅಷ್ಟು ಸ್ಮಾರ್ಟ್‌ ಆಗಿ ಆಡ್ತಿದ್ದ. 

Advertisement

– ಮೊದಲಿಂದ ಕೊನೆಯವರೆಗೂ ಅಷ್ಟು ಕೂಲ್‌ ಆಗಿದ್ರಿ, ಎಲ್ಲರೂ ಇದ್ರೆ ರೇಖಾ ಥರ ಇರ್ಬೇಕು ಅಂತೆಲ್ಲ ಮಾತಾಡ್ತಿದ್ರು. ನಿಮ್ಮ ಸ್ವಭಾವವೇ ಹಾಗಿರೋದು?
ಖಂಡಿತಾ, ನಾನು ಮೊದಲಿಂದಲೂ ಹಾಗೇ ಇರೋದು. ಬದುಕಿನ ಪ್ರತಿ ಕ್ಷಣವನ್ನೂ ಎನ್‌ಜಾಯ್‌ ಮಾಡ್ತೀನಿ. ಸೆಲೆಬ್ರೇಟ್‌ ಮಾಡ್ತೀನಿ. ಆ ಮನೆಯಲ್ಲಿದ್ದ ಅಷ್ಟೂ ಹೊತ್ತೂ ಖುಷಿ ಖುಷಿಯಾಗೇ ಇದ್ದೆ. ಒಂದೆರಡು ಘಟನೆಗಳಲ್ಲಿ ಮಾತ್ರ ಸ್ವಲ್ಪ ನೋವಾಗಿತ್ತು. 

– ಟಾಸ್ಕ್ ನಡೀತಿರುವಾಗ್ಲೆà ಬಿಗ್‌ಬಾಸ್‌, “ರೇಖಾ ಚೆನ್ನಾಗಿ ಜೋಕ್‌ ಮಾಡ್ತಾರೆ’ ಅಂದಿದ್ದಕ್ಕೆ ಕೂಡ್ಲೆà “ಥ್ಯಾಂಕ್ಯೂ’ ಅಂದ್ರಿ?
(ಜೋರಾಗಿ ನಗು) ಹೌದು ಹಾಗಾಗಿತ್ತು. ಆದರೂ ಅಲ್ಲಿ ನಾನು ಮಾಡಿದ್ದು ನೋಡಿ ನಾಲ್ಕು ಜನ ನಕ್ಕರಲ್ಲ, ಅಷ್ಟೇ ಸಾಕು. 

– ಫಿಸಿಕಲ್‌ ತಾಕತ್ತು ಇದ್ರೂ ರೇಖಾ ಯಾಕೋ ಅದನ್ನು ಚೆನ್ನಾಗಿ ಬಳಸ್ಕೊಳಿÉಲ್ಲ, ಇದು ಪ್ರಥಮ್‌ಗೆ ಪೂರಕ ಆಯ್ತು ಅಂತಾರಲ್ಲ?
ಹಾಗೇನಿಲ್ಲ. ನನಗೆ ಸಾಮರ್ಥ್ಯ ಇರುವಷ್ಟು ಚೆನ್ನಾಗಿಯೇ ಮಾಡಿದ್ದೀನಿ. ಆದ್ರೆ ಕಳೆದ ವರ್ಷ ನನಗೆ ಸ್ಪೈನಲ್‌ ಕಾರ್ಡ್‌ಗೆ ಏಟಾಗಿತ್ತು. ಹಾಗಾಗಿ ಸ್ವಲ್ಪ ಸಮಸ್ಯೆಯಾಗಿತ್ತು. ಆದರೂ ನನ್ನಿಂದಾದಷ್ಟು ಟಾಸ್ಕ್ಗಳನ್ನ ಚೆನ್ನಾಗಿಯೇ ಮಾಡಿದ್ದೀನಿ. 

– ಮನೆ, ಮಕ್ಕಳ ನೆನಪಾಗಿ ಆಗಾಗ ಇಮೋಶನಲ್‌ ಆಗೋದು ಸಾಮಾನ್ಯ, ರೇಖಾಗೆ ಅಂಥ ಇಮೋಶನ್‌ಗಳು ಕಾಡಿಲ್ವಾ?
ಬಹಳ ನೆನಪಾಗ್ತಿತ್ತು. ಆದರೆ, ನಾನು ಹೆಚ್ಚು ಒಂಟಿಯಾಗಿ ಕೂರಲು ಅಲ್ಲಿದ್ದ ಅಷ್ಟೂ ಜನ ಬಿಡ್ತಿರಲಿಲ್ಲ. ನನಗೆ ಮನೆ ನೆನಪಾಗ್ತಿದೆ ಅನ್ನುವ ಸಣ್ಣ ಹಿಂಟ್‌ ಸಿಕ್ಕಿದ್ರೂ ಎಲ್ಲರೂ ಎಳ್ಕೊಂಡು ಹೋಗಿ ನಗಿಸ್ತಿದ್ರು. ಅಲ್ಲಿದ್ದ ಪ್ರತಿಯೊಬ್ಬರದ್ದೂ ಅದ್ಭುತ ವ್ಯಕ್ತಿತ್ವ. ಹದಿನೈದೂ ಜನರ ಸಾಂಗತ್ಯ ಬಹಳ ಪ್ರಿಯವಾಗಿತ್ತು. 

– ಆ ಮನೆಯಿಂದ ಹೊರಬಂದ ಮೇಲೆ ಜಗತ್ತು ಹೇಗೆ ಕಂಡಿತು?
ಒಳಗಡೆ ನೆಮ್ಮದಿಯಿತ್ತು. ಹೊರಗೆ ಬಂದ ಕೂಡಲೇ ಶಬ್ಧ, ಗಲಾಟೆ, ಟ್ರಾಫಿಕ್‌ ..ಉಫ್! ಅಲ್ಲಿದ್ದ ಮೂರು ತಿಂಗಳು ಬಹಳ ಶಾಂತಿಯಿಂದಿದ್ದೆ. ಬಿಗ್‌ಬಾಸ್‌ ನಮಗೆಲ್ಲ ಮೇಷ್ಟ್ರ ಥರ ಇದ್ರು, ನಾವೆಲ್ಲ ಸ್ಕೂಲ್‌ ಹುಡುಗರ ಹಾಗಿದ್ವಿ. ಹೊರಗೆ ಬಂದಕೂಡಲೇ ನಂಗೆ ವಯಸ್ಸಾಗಿದೆ, ನನಗೆ ಫ್ಯಾಮಿಲಿ ಜವಾಬ್ದಾರಿ ಇದೆ, ನಾನು ಮಕ್ಕಳ ತಾಯಿ, ಹೆಂಡತಿ ಅನ್ನೋದೆಲ್ಲ ಮತ್ತೆ ರಿಯಲೈಸ್‌ ಆಗಿ ಬೇಜಾರಾಯ್ತು.

– ಅದ್ಸರಿ, ಮಕ್ಕಳ ರೆಸ್ಪಾನ್ಸ್‌ ಹೇಗಿತ್ತು?
ಮಗಳು ಇಡೀ ದಿನ ಅಂಟುಪುರೆಲ ಥರ ಅಂಟ್ಕೊಂಡೇ ಇರಿ¤ದುÉ. ನಾನು ಎಲ್ಲಿಗೆ ಹೊರಟರೂ ಹೋಗ್ಬೇಡಮ್ಮ ಅಂತಿದುÉ. ಮಗನಿಗೆ ತಾನು ಹುಡುಗ, ಹಾಗೆಲ್ಲ ಇರಬಾರ್ದು ಅನ್ನೋದೆಲ್ಲ ಸ್ವಲ್ಪ ತಲೆಗೆ ಬಂದಿದೆ. ಹಾಗಾಗಿ ಅವ್ನು ಸ್ವಲ್ಪ ದೊಡ್ಡವ° ಥರ ಇರೋಕೆ ಟ್ರೈ ಮಾಡ್ತಾನೆ. 

– ಹಸºಂಡ್‌ ಬಿಗ್‌ಬಾಸ್‌ನ° ಬಹಳ ಹಚೊRಂಡಿದ್ರಾ, ಕೊನೆಗೆ ಕಣ್ಣೀರು ಹಾಕಿದ್ರಲ್ಲಾ?
ಅವ್ರು ಬಿಗ್‌ಬಾಸ್‌ನ°ಲ್ಲ ಹಚೊRಂಡಿದ್ದು, ನನ್ನನ್ನು. ನಾವಿಬ್ಬರೂ ಚಿಕ್ಕವರಿಂದ ಜೊತೆಗೆ ಬೆಳೆದವರು. ಆಗಿಂದಲೂ ಅವರು ನನಗೆ ಸಪೋರ್ಟ್‌. ಮದುವೆ ಆದ್ಮೇಲೂ ನ್ಪೋರ್ಟ್ಸ್ನಲ್ಲಿ ಮುಂದುವರಿಯಲು ಬಹಳ ಪ್ರೋತ್ಸಾಹ ಕೊಟ್ಟಿದ್ರು. ಅವರೊಬ್ಬ ಒಳ್ಳೆ ಹಸ್ಬೆಂಡ್‌, ಒಳ್ಳೆಯ ಅಪ್ಪ. 

– ಜನ ಏನಂತಾರೆ ನಿಮ್ಮ ಬಗ್ಗೆ ಗೊತ್ತಾಯ್ತಾ?
ಜನರಿಗೆ ನಾನೆಷ್ಟು ಋಣಿಯಾದರೂ ಕಡಿಮೆಯೇ. ಈ ಪರಿ ಅವರು ನನ್ನ ಇಷ್ಟಪಡ್ತಾರೆ ಅಂದೊRಂಡಿರಲಿಲ್ಲ. ನಮ್ಮನೆ ಹೆಣ್ಮಕ್ಕಳೂ ನಿಮ್ಮಂಗಿರಬೇಕು ಅಂತಾರೆ, ಆ ಪ್ರೀತಿ ದೊಡ್ಡದು. ನಮ್ಮ ಅಪ್ಪ ಅಮ್ಮ ಇದನ್ನ ನೋಡಿದ್ರೆ ಖುಷಿ. ಯಾಕಂದ್ರೆ ನನ್ನ ಆ ಗುಣಗಳೆಲ್ಲ ಬಂದಿದ್ದು ಅವರಿಂದಲೇ. 

**
ಉಪ್ಪಿನ ಬೆಲೆ ಆಗ್ಲೆà ಗೊತ್ತಾಗಿದ್ದು!
– ಬಿಗ್‌ ಬಾಸ್‌ ಮನೆಯಲ್ಲಿ ನಿಮಗೆ ಬೆಸ್ಟ್‌ ಅನಿಸಿದ ಊಟ?

ಹಬ್ಬಗಳಾದಾಗ ಕೊಡ್ತಿದ್ದ ಊಟ, ಶೀತಲ್‌ ಶ್ವೇತಾ ಸೇರಿ ಮಾಡಿದ ಆಲೂ ಪರಾಠ, ಶಾಲಿನಿ ಅಡುಗೆಯೂ ಅದ್ಭುತವಾಗಿರಿ¤ತ್ತು. 

– ನಿಮ್ಮ ಮಕ್ಕಳು ಅಮ್ಮನ ಊಟ ಮಿಸ್‌ ಮಾಡ್ಕೊಳ್ಳಲ್ವಾ?
ನಮ್ಮತ್ತೆ ಬಹಳ ಚೆನ್ನಾಗಿ ಅಡುಗೆ ಮಾಡ್ತಾರೆ. ನನ್ನ ಕಾಂಟಿನೆಂಟಲ್‌ ಅಡುಗೆಗಳನ್ನು ಮಿಸ್‌ ಮಾಡಿರ್ತಾರೆ. 

– ಕುಕ್ಕಿಂಗ್‌ನಲ್ಲಿ ಆಸಕ್ತಿ ಇದ್ಯಾ?
ಬಹಳ ಇದೆ. ಬೇಕಿಂಗ್‌ ಮಾಡಲಿಕ್ಕೆ ಆಸಕ್ತಿ ಇದೆ, ಆದ್ರೆ ಯಾಕೋ ಅದು ಚೆನ್ನಾಗಿ ಬರಲ್ಲ. ಹಳೇ ಕಾಲದ ತಿಂಡಿ ಹಾಲುಬಾಯಿ, ವಡೆ ತರದ್ದು ಚೆನ್ನಾಗಿ ಮಾಡ್ತೀನಿ. 

– ಬಿಗ್‌ಬಾಸ್‌ ಮನೆಯಿಂದ ಹೊರಬಂದ ಕೂಡ್ಲೆà ತಿಂದಿದ್ದು?
ಜಾಮೂನು!

– ಬಿಗ್‌ಬಾಸ್‌ ಮನೆಯಲ್ಲಿ ತಿನ್ನಲಿಕ್ಕೆ ಕಷ್ಟವಾದ ಫ‌ುಡ್‌?
ಉಪ್ಪಿಲ್ಲದ ಅಡುಗೆಗಳು. ಉಪ್ಪಿನ ರುಚಿ ಏನು ಅಂತ ಆಗಲೇ ಗೊತ್ತಾಗಿದ್ದು. 

– ಮತ್ತೆ ಮನೆಊಟ ಹೇಗನಿಸುತ್ತೆ?
ಅಲ್ಲಿ ಮಾಡಿದ್ದು ಮನೆಊಟನೇ ಅಲ್ವಾ. ಹೊಟೇಲ್‌ ಊಟ ಮಾಡ್ಬೇಕು ಅನಿಸುತ್ತೆ.

– ಪ್ರಿಯಾ ಕೆರ್ವಾಶೆ

Advertisement

Udayavani is now on Telegram. Click here to join our channel and stay updated with the latest news.

Next