Advertisement
ಮಂಗಳವಾರ ನಗರಸಭೆಯ ಸರ್.ಎಂ.ವಿ. ಸಭಾಂಗಣದಲ್ಲಿ ನಗರದ ವಿವಿಧ ದೇವಾಲಯಗಳ ಸಮಿತಿ ಮತ್ತು ಅಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು, ಅ. 17 ರಂದುಬೆಳಗ್ಗೆ 10.30 ಕ್ಕೆ ಗ್ರಾಮ ದೇವತೆಹಳದಮ್ಮ ದೇವಾಲಯದಲ್ಲಿ ನಿವೃತ್ತ
Related Articles
Advertisement
ಸಾಗರ: ತಾಲೂಕಿನ ಕಸಬಾ ಹೋಬಳಿ ನಾಡಕಲಸಿಗ್ರಾಪಂ ವ್ಯಾಪ್ತಿಯ ಬಾಳಗೋಡು ಗ್ರಾಮದ ಸೊಪ್ಪಿನ ಬೆಟ್ಟ ಅತಿಕ್ರಮಣ ಮಾಡುತ್ತಿರುವುದು ಹಾಗೂ ಸರ್ಕಾರಿ ಗೋಮಾಳ ಒತ್ತುವರಿ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಬಾಳಗೋಡು ಗ್ರಾಮಸ್ಥರು ಉಪ ವಿಭಾಗಾ ಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.
ಬಾಳಗೋಡು ಗ್ರಾಮದ ಸರ್ವೇ ನಂ. 5ರಲ್ಲಿ 136.17 ಎಕರೆ ಸರ್ಕಾರಿ ಸೊಪ್ಪಿನ ಬೆಟ್ಟ ಪ್ರದೇಶವಿದ್ದು,ಅದನ್ನು ಗ್ರಾಮಸ್ಥರಾದ ನಾವು ಲಾಗಾಯ್ತಿನಿಂದ ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಪಕ್ಕದ ಗ್ರಾಮದ ಕೆಲವರು ಸೊಪ್ಪಿನ ಬೆಟ್ಟವನ್ನು ಒತ್ತುವರಿ ಮಾಡಿ ಅಲ್ಲಿರುವ ಮರಗಿಡಗಳನ್ನು ಕಡಿದು ಕೃಷಿ ಮಾಡುತ್ತಿದ್ದಾರೆ. ನೈಸರ್ಗಿಕವಾದ ಸೊಪ್ಪಿನ ಬೆಟ್ಟವನ್ನು ನಾಶ ಮಾಡುತ್ತಿರುವ ಅತಿಕ್ರಮಣದಾರರು ಭೂಕಬಳಿಕೆ ಮಾಡುತ್ತಿದ್ದಾರೆ.ಸೊಪ್ಪಿನ ಬೆಟ್ಟವು ಸರ್ಕಾರಿ ಜಾಗವಾಗಿದ್ದು ಗ್ರಾಮಸ್ಥರ ಹಕ್ಕಿನ ಆಸ್ತಿಯಾಗಿದೆ. ಕಂದಾಯ ಇಲಾಖೆ ಸೊಪ್ಪಿನಬೆಟ್ಟ ರಕ್ಷಣೆ ಮಾಡುವ ನಿಟ್ಟಿನಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ ಒತ್ತುವರಿದಾರರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಗ್ರಾಮಸ್ಥರಾದ ಶಿವಕುಮಾರ್, ದಾನಶೇಖರ ಗೌಡ, ಮೋಹನ್ ಗೌಡ, ದೇವರಾಜ್ ಗೌಡ, ಶೇಖರಪ್ಪ ಬಾಳಗೋಡು, ಅಮೃತೇಶ್ವರ, ಶಶಿಧರ ಗೌಡ, ರಾಜಶೇಖರ್, ಪುಟ್ಟರಾಜ್, ಪ್ರವೀಣ್, ರಮೇಶ್, ನ್ಯಾಯವಾದಿ ಕೆ.ವಿ. ಪ್ರವೀಣಕುಮಾರ್ ಇನ್ನಿತರರು ಇದ್ದರು.