Advertisement
ಕಲ್ಯಾಣಪುರ ಕೆಥೆಡ್ರಲ್, ಉಡುಪಿ ಶೋಕಮಾತಾ ಇಗರ್ಜಿ, ಪೆರಂಪಳ್ಳಿ, ಮಣಿಪಾಲ, ಯುಬಿಎಂಸಿ ಮೊದ ಲಾದ ಚರ್ಚ್‌ಗಳು, ಕ್ರಿಶ್ಚಿಯನ್ ಸಮುದಾ ಯಕ್ಕೆ ಸೇರಿದ ಶಿಕ್ಷಣ ಸಂಸ್ಥೆ, ಮಳಿಗೆ, ಮನೆಗಳನ್ನು ದೀಪಗಳಿಂದ ಅಲಂಕರಿಸಲಾಗಿದೆ. ವಿವಿಧ ಚರ್ಚ್ ಗಳಲ್ಲಿ ಗುರುವಾರ ಸಂಜೆ ಕ್ರಿಸ್ಮಸ್ ಕ್ಯಾರಲ್ಸ್, ಬಳಿಕ ಬಲಿಪೂಜೆ ನಡೆಯಿತು. ಅನಂತರ ಜನರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
Related Articles
Advertisement
ಈ ಹಿಂದೆ ಕ್ರಿಸ್ಮಸ್ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚರ್ಚ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಚರಿಸಲಾಗುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಈ ಬಾರಿ ಹಬ್ಬದ ಸಡಗರ ಕೇವಲ ಮನೆಗಳಲ್ಲಿ ಸೀಮಿತ ಗೊಂಡಿದೆ.
ಕ್ರಿಸ್ಮಸ್ ಟ್ರೀ, ಅಲಂಕಾರ :
ಕ್ರೈಸ್ತ ಸಮುದಾಯವರ ಮನೆಗಳಲ್ಲಿ ಕ್ರಿಸ್ಮಸ್ ಟ್ರೀ, ಬಣ್ಣದ ಆಲಂಕಾರಿಕ ವಸ್ತುಗಳ ಮೂಲಕ ಸಿಂಗರಿಸಲಾಗಿದೆ. ಡಿ.1ರಂದು ಕೆಲವು ಮನೆಗಳಲ್ಲಿ ನಕ್ಷತ್ರ ತೂಗುದೀಪ ಹಾಕಲಾಗಿದೆ. ಇನ್ನು ಕೆಲವರು ಮನೆ ಆವರಣ, ಗಿಡ, ಮರಗಳಿಗೆ ವಿವಿಧ ರೀತಿಯ ದೀಪಾಲಂಕಾರ ಮಾಡಿದ್ದಾರೆ.
ವಿವಿಧ ತಿಂಡಿ ತಿನಿಸು ತಯಾರಿ :
ಕ್ರಿಸ್ಮಸ್ ಹಬ್ಬದ ಸಂಭ್ರಮ ಪ್ರಾರ್ಥನೆ, ಬೋಧನೆಗೆ ಮಾತ್ರ ಸೀಮಿತವಲ್ಲ. ತಿಂಡಿ ತಿನಿಸು ತಯಾರಿಯೂ ಭರ್ಜರಿ ಆಗಿರುತ್ತದೆ. ಹಲವಾರು ಮನೆಗಳಲ್ಲಿ ಕೇಕ್, ಕರ್ಜಿಕಾಯಿ, ಕೋಡು ಬಳೆ, ಚಕ್ಕುಲಿ, ಜಾಮೂನು, ರವೆ ಉಂಡೆ, ಕರಿದ ಅವಲಕ್ಕಿ, ರೋಸ್ ಕುಕ್‌ಮ, ನಿಪ್ಪಟ್ಟು, ಕ್ಯಾರೆಟ್ ಹಲ್ವಾ, ಡೋನಟ್ಸ್, ಅಕ್ಕಿ ಮಿಠಾಯಿ ತಯಾರಿಸಿದ್ದು, ಅವು ಗಳನ್ನು ಮನೆಗೆ ಬಂದ ಬಂಧು-ಬಳಗ, ನೆರೆಹೊರೆಯವರಿಗೆ ಹಂಚಿ ಸಂಭ್ರಮಿ ಸಲು ಸಿದ್ಧತೆ ನಡೆದಿದೆ.
ಬಲಿ ಪೂಜೆ- ಸಂದೇಶ :
ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ನೆರವೇರಿಸಿ ಹಬ್ಬದ ಸಂದೇಶವನ್ನು ನೀಡಿದರು. ಉಡುಪಿ ಶೋಕಮಾತಾ ಚರ್ಚ್‌ನ ಧರ್ಮಗುರು ಫಾ| ಚಾರ್ಲ್ಸ್ ಮಿನೇಜಸ್, ಮಿಷನ್ ಕಾಂಪೌಂಡ್ ಬಳಿಯ ಬಾಸೆಲ್ ಮಿಷನ್ ಚರ್ಚ್‌ನಲ್ಲಿ ಫಾ| ಸಂತೋಷ್, ಫಾ| ಸ್ಟೀಫನ್ ಬಂಡಿ, ಫಾ| ಮಂಜುನಾಥ್ ಅವರು ಬಲಿ ಪೂಜೆ ಹಬ್ಬದ ಸಂದೇಶವನ್ನು ನೀಡಿದರು.