Advertisement

ಸರಳ ಚಿಕನ್‌ ಡ್ರೈ ರೋಸ್ಟ್‌

09:25 PM Oct 11, 2019 | mahesh |

ಬೇಕಾಗುವ ಸಾಮಗ್ರಿ
ಅರ್ಧ ಕೆಜಿ ಚಿಕನ್‌ (ಚೆನ್ನಾಗಿ ತೊಳೆದಿಟ್ಟುಕೊಳ್ಳಿ)
ಗಟ್ಟಿ ಮೊಸರು: ಒಂದು ಕಪ್‌
4 ಹಸುರು ಮೆಣಸಿನ ಕಾಯಿ: ಒಂದು ಕಪ್‌
ಬೆಳ್ಳುಳ್ಳಿ: 4
ನಿಂಬೆ:ಒಂದು
ಕರಿಬೇವು: ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌: ಒಂದು ಟೇಬಲ್‌ ಸ್ಪೂನ್‌
ಅರಶಿನ ಪುಡಿ: ಅರ್ಧ ಟೀ ಸ್ಪೂನ್‌
ಖಾರದ ಪುಡಿ: 2 ಟೀ ಸ್ಪೂನ್‌
ಕೊತ್ತಂಬರಿ ಸೊಪ್ಪು: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ಕೊತ್ತಂಬರಿ ಪೌಡರ್‌: ಅರ್ಧ ಟೀ ಸ್ಪೂನ್‌
ಗರಂ ಮಸಾಲ: ಅರ್ಧ ಟೀ ಸ್ಪೂನ್‌
ತುಪ್ಪ, ಎಣ್ಣೆ

Advertisement

ಮಾಡುವ ವಿಧಾನ
ಮಿಕ್ಸಿಂಗ್‌ ಬೌಲ್‌ಗೆ ಚೆನ್ನಾಗಿ ತೊಳೆದಿಟ್ಟ ಚಿಕನ್‌ನ್ನು ಹಾಕಿಕೊಳ್ಳಿ. ಬಳಿಕ ಚಿಕನ್‌ಗೆ ಖಾರದ ಪುಡಿ, ಅರಿಶಿನ ಪುಡಿ, ಧನಿಯಾ ಪೌಡರ್‌, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಿಂದ ನಿಧಾನಕ್ಕೆ ಕಲಸಿಕೊಳ್ಳಿ. ಬಳಿಕ ಅದಕ್ಕೆ ಒಂದು ಕಪ್‌ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅರ್ಧ ಗಂಟೆ ಮುಚ್ಚಿಡಿ. ಬಳಿಕ ಗ್ಯಾಸ್‌ ಮೇಲೆ ಪ್ರಶರ್‌ ಕುಕ್ಕರ್‌ ಇಟ್ಟು ಎರಡು ಟೀ ಸ್ಪೂನ್‌ ತುಪ್ಪ ಹಾಕಿ, ಬಳಿಕ ಎಣ್ಣೆ ಹಾಕಿ. ಎರಡೂ ಬಿಸಿಯಾದ ಬಳಿಕ ಅದಕ್ಕೆ ಚಿಕನ್‌ ಹಾಕಿ ಚೆನ್ನಾಗಿ ಕಲಸಿ. ಐದು ನಿಮಿಷ ಕಾಲ ಚೆನ್ನಾಗಿ ಬೇಯಲು ಬಿಡಿ.

ಗ್ಯಾಸ್‌ನಲ್ಲಿ ಪ್ರತ್ಯೇಕ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಚೆನ್ನಾಗಿ ಕಾದ ಅನಂತರ ಹೆಚ್ಚಿದ ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿಯನ್ನು ಎಣ್ಣೆಗೆ ಹಾಕಿ ಕೆಂಪಾಗುವ ತನಕ ಫ್ತೈ ಮಾಡಿ. ಬಳಿಕ ಸ್ವಲ್ಪ ಕರಿಬೇವಿನ ಸೊಪ್ಪು ಹಾಕಿ ಕರಿಯಿರಿ. ಬಳಿಕ ಬೇಯಿಸಿದ ಚಿಕನ್‌ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಮೇಲ್ಗಡೆಯಿಂದ ಮುಚ್ಚಿ, ಐದು ನಿಮಿಷ ಬೇಯಲು ಬಿಡಿ. ಬೆಂದ ಅನಂತರ ಮತ್ತೆ ಮಿಶ್ರಣ ಮಾಡಿ, ಮೇಲ್ಗಡೆಗೆ ಕೊತ್ತಂಬರಿ ಸೊಪ್ಪು, ಅರ್ಧ ಭಾಗ ನಿಂಬೆ ರಸ ಹಾಕಿ ಚೆನ್ನಾಗಿ ರೋಸ್ಟ್‌ ಮಾಡಿ. ಶುಚಿ ರುಚಿಯಾದ ಚಿಕನ್‌ ಡ್ರೈ ರೋಸ್ಟ್‌ ತಿನ್ನಲು ಸಿದ್ಧವಿದ್ದು, ರೊಟ್ಟಿ, ಚಪಾತಿ, ಊಟದ ಜತೆಗೆ ಸವಿದರೆ ಹೆಚ್ಚು ಟೇಸ್ಟಿಯಾಗಿರುತ್ತದೆ.

   ಸುಶೀಲಾ

Advertisement

Udayavani is now on Telegram. Click here to join our channel and stay updated with the latest news.

Next