Advertisement

ಸರಳ ಸೌಂದರ್ಯ ವರ್ಧಕಗಳು

03:07 PM May 19, 2017 | |

ಮನೆಯಲ್ಲಿಯೇ ಉಪಯೋಗಿಸಬಹುದಾದ, ತಯಾರಿಸಬಹುದಾದ ಸುಲಭ ಸರಳ ಸೌಂದರ್ಯವರ್ಧಕಗಳು ಇಲ್ಲಿವೆ.

Advertisement

ಮೊಡವೆಗೆ
ಅರಸಿನ ಹುಡಿ ಮತ್ತು ನಿಂಬೆರಸವನ್ನು ಬೆರೆಸಿ ಮೊಡವೆ ಇರುವ ಭಾಗದಲ್ಲಿ ಲೇಪಿಸಬೇಕು. 15 ನಿಮಿಷಗಳ ಬಳಿಕ ತೊಳೆಯಬೇಕು. ಹೀಗೆ ದಿನಕ್ಕೆ 2-3 ಬಾರಿ ಲೇಪಿಸಿದರೆ ಮೊಡವೆ, ಗುಳ್ಳೆಗಳು ನಿವಾರಣೆಯಾಗುತ್ತವೆ.

ಮೊಡವೆಯ ಕಲೆಗೆ
ಚಂದನದ ಪೌಡರ್‌ 1 ಚಮಚ, 2 ಚಮಚ ಶುದ್ಧ ಗುಲಾಬಿ ಜಲ ಬೆರೆಸಿ ಮುಖದಲ್ಲಿನ ಮೊಡವೆಯ ಕಲೆಗಳಿಗೆ ನಿತ್ಯ 2-3 ಬಾರಿ ಲೇಪಿಸಿದರೆ ಕಲೆಗಳು ನಿವಾರಣೆಯಾಗುತ್ತವೆ.

ಕೂದಲಿನ ಆರೈಕೆ
ಒಣ ಕೂದಲಿಗೆ ಬೆಣ್ಣೆ ಹಣ್ಣಿನ ಹೇರ್‌ಪ್ಯಾಕ್‌ ಉತ್ತಮ. ಕೂದಲು ಉದುರುವುದು, ಹೊಟ್ಟು ಹಾಗೂ ತುರಿಕೆ ಇರುವಾಗ ಕೊಬ್ಬರಿ ಎಣ್ಣೆ ಹಾಗೂ ನಿಂಬೆರಸ ಅಥವಾ ಆಲಿವ್‌ ತೈಲ ಮತ್ತು ನಿಂಬೆರಸ ಬೆರೆಸಿ ಲೇಪಿಸಿ 20 ನಿಮಿಷಗಳ ಬಳಿಕ ಸ್ನಾನ ಮಾಡಿದರೆ ಪರಿಣಾಮಕಾರಿ.

ಕೂದಲು ಸೀಳುವಿಕೆ ಉಂಟಾದಾಗ ಆಲಿವ್‌ ತೈಲ ಹಾಗೂ ಜೇನು ಬೆರೆಸಿ ಲೇಪಿಸಿದರೆ ನಿವಾರಣೆಯಾಗುತ್ತದೆ.

Advertisement

ಕೂದಲಿಗೆ ಉತ್ತಮ ಕಂಡೀಷನರ್‌ ಮೊಟ್ಟೆಯ ಬಿಳಿಭಾಗ. ಕೂದಲಿಗೆ ಉತ್ತಮ ಶ್ಯಾಂಪೂ ಸೋಪ್‌ನಟ್‌ ಪುಡಿ ದಾಸವಾಳ ಎಲೆ ಹಾಗೂ ಹೂವಿನ ರಸ ಹಾಗೂ ಹೆನ್ನಾ (ಮದರಂಗಿ ಪುಡಿಯ ಮಿಶ್ರಣ)ದಿಂದ ಸ್ನಾನ.ಕೂದಲು ಉದುರುವಿಕೆ ತಡೆಗಟ್ಟಲು ಘೃತಕುಮಾರೀ ಗಿಡದ ಎಲೆ (ಎಲೋವೆರಾದ ಎಲೆಯ ತಿರುಳು 3 ಚಮಚ, 5 ಚಮಚ ಕೊಬ್ಬರಿಎಣ್ಣೆ ಹಾಗೂ 1/2 ಚಮಚ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ 1/2 ಗಂಟೆಯ ಬಳಿಕ ಸ್ನಾನ ಮಾಡಿದರೆ ಕೂದಲು ಉದುರುವುದು ನಿವಾರಣೆಯಾಗಿ ಸೊಂಪಾಗಿ ಕೂದಲು ಬೆಳೆಯುತ್ತದೆ.

ಬಬ್ಬಲ್‌ ಬಾತ್‌
ಮೈಯ ಹಾಗೂ ಮೊಗದ ಚರ್ಮ ಸ್ನಿಗ್ಧ ಹಾಗೂ ಕಾಂತಿಯುತವಾಗಲು ಈ ಬಬ್ಬಲ್‌ ಬಾತ್‌ ಹಿತಕರ. ಅದೂ ಬೇಸಿಗೆಯಲ್ಲಿ ಬಹಳ ಪರಿಣಾಮಕಾರಿ.

ಒಂದು ಟಬ್‌ನಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು 1 ಲೀಟರ್‌ ಕೆನೆಸಹಿತ ಹಾಲನ್ನು ಬೆರೆಸಬೇಕು. ಅದಕ್ಕೆ 100 ಗ್ರಾಂ ಗುಲಾಬಿ ಪಕಳೆಗಳನ್ನು ಅಥವಾ ಮಲ್ಲಿಗೆ ಹೂವನ್ನು ಬೆರೆಸಬೇಕು. 2 ಚಮಚ ಶ್ರೀಗಂಧ ತೈಲ ಕೊನೆಯಲ್ಲಿ  ಸೇರಿಸಿ, ಸ್ವಲ್ಪ ಸೀಸಾಲ್ಟ್ ಸðಬ್‌ ಬೆರೆಸಿ ಕದಡಬೇಕು. ತದನಂತರ ಈ ಟಬ್‌ನಲ್ಲಿ, ಟಬ್‌ಬಾತ್‌ ಅಥವಾ ಅವಗಾಹ ಸ್ನಾನ ಮಾಡಿದರೆ ಮೈಮನಸ್ಸು ಉಲ್ಲಸಿತವಾಗುತ್ತದೆ. ಜೊತೆಗೆ ಚರ್ಮ ಸ್ನಿಗ್ಧ ಹಾಗೂ ಕಾಂತಿಯುತವಾಗುತ್ತದೆ.

ಮನೆಯಲ್ಲಿಯೇ ಫೇಸ್‌ಲಿಫ್ಟ್
ತಕ್ಷಣಕ್ಕೆ ಮನೆಯಲ್ಲೇ ತಯಾರಿಸಿ ಪ್ರಯೋಗಿಸಬಹುದಾದ ಫೇಸ್‌ಲಿಫ್ಟ್ ಇಂತಿದೆ.ಮೊದಲು ಐಸ್‌ನಿàರಿನಿಂದ ಮುಖ ತೊಳೆಯಬೇಕು. ತದನಂತರ ಜೇನಿನಲ್ಲಿ ಅದ್ದಿದ ಐಸ್‌ಕ್ಯೂಬ್‌ನಿಂದ ಮುಖವನ್ನು ಚೆನ್ನಾಗಿ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. 10 ನಿಮಿಷಗಳ ಬಳಿಕ ಬೀಟ್‌ ಮಾಡಿದ ಮೊಟ್ಟೆಯ ಬಿಳಿಭಾಗವನ್ನು ಮುಖಕ್ಕೆ ಲೇಪಿಸಿ ಒಣಗಲು ಬಿಡಬೇಕು. 15 ನಿಮಿಷದ ನಂತರ ಫ್ರಿಜ್‌ ನೀರಿನಲ್ಲಿ ಮುಖ ತೊಳೆದರೆ ಪರಿಣಾಮಕಾರಿ. ಹೀಗೆ ಮನೆಯಲ್ಲಿಯೇ ದೊರೆಯುವ ಹಣ್ಣು , ತರಕಾರಿ, ಹೂವು ಹಾಗೂ ಮೂಲಿಕೆಗಳಿಂದ ವಿವಿಧ ರೀತಿಯಲ್ಲಿ ನೈಸರ್ಗಿಕವಾಗಿ, ಸರಳವಾಗಿ, ಸೌಂದರ್ಯವರ್ಧಕಗಳನ್ನು , ಸೌಂದರ್ಯ ರಕ್ಷಕಗಳನ್ನು ಹಾಗೂ ಸೌಂದರ್ಯಪ್ರಸಾಧಕಗಳನ್ನು ತಯಾರಿಸಬಸುದು. ಹಾಂ! ಸುಂದರ ನಿಸರ್ಗದಲ್ಲಿ ಅಡಗಿದೆ ಎಂದೂ ಬರಿದಾಗದ ಸಹಜ ಸೌಂದರ್ಯ ಪ್ರಸಾಧಕಗಳ ಸಾಗರ!

ಡಾ| ಅನುರಾಧಾ ಕಾಮತ್

Advertisement

Udayavani is now on Telegram. Click here to join our channel and stay updated with the latest news.

Next