Advertisement

ಡಬ್ಲ್ಯುಟಿಎ ಫೈನಲ್ಸ್‌ನಿಂದ ಹಾಲೆಪ್‌ ಹೊರಕ್ಕೆ

08:48 AM Oct 20, 2018 | Team Udayavani |

ದುಬಾೖ: ಬೆನ್ನು ನೋವಿನಿಂದ ಬಳಲುತ್ತಿರುವ ಅಗ್ರ ರ್‍ಯಾಂಕಿನ ಸಿಮೋನಾ ಹಾಲೆಪ್‌ ಅವರು ಸಿಂಗಾಪುರದಲ್ಲಿ ನಡೆಯಲಿರುವ ವರ್ಷಾಂತ್ಯರದ ಡಬ್ಲ್ಯುಟಿಎ ಫೈನಲ್ಸ್‌ ಕೂಟದಿಂದ ಹಿಂದೆ ಸರಿದಿದ್ದಾರೆ. ನೋವಿನ ಸಮಸ್ಯೆಯಿಂದಾಗಿ ಹಾಲೆಪ್‌ ಕಳೆದ ತಿಂಗಳು ನಡೆದ ಚೀನಾ ಓಪನ್‌ ಆರಂಭವಾಗಿ 31 ನಿಮಿಷ ಕಳೆಯುವಷ್ಟರಲ್ಲಿ ಕೂಟ ತ್ಯಜಿಸಿದ್ದರು. ಮಾತ್ರವಲ್ಲದೇ ಈ ವಾರ ನಡೆಯುವ ಕ್ರೆಮ್ಲಿನ್‌ ಕಪ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದರು. ವರ್ಷಾಂತ್ಯದ ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದ 27ರ ಹರೆಯದ ಹಾಲೆಪ್‌ ಇದೀಗ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಕೂಟದಿಂದ ಹಿಂದೆ ಸರಿಯುವ ಭಾರವಾದ ನಿರ್ಧಾರ ತಾಳಿದ್ದಾರೆ.

Advertisement

ಹಾಲೆಪ್‌ ಹಿಂದೆ ಸರಿದ ಕಾರಣ ಹಾಲೆಂಡಿನ ಕಿಕಿ ಬರ್ಟೆನ್ಸ್‌ ಅವರು ಎಂಟನೇ ಸ್ಥಾನಿಯಾಗಿ ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಆಡುವ ಅರ್ಹತೆ ಗಳಿಸಿದ್ದಾರೆ.ಒಟ್ಟಾರೆ ಈ ವರ್ಷ ಮೂರು ಪ್ರಶಸ್ತಿ ಗೆದ್ದಿರುವ ಅವರು ವರ್ಷಾಂತ್ಯದಲ್ಲಿ ನಂಬರ್‌ ವನ್‌ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next