Advertisement

ವಿಂಬಲ್ಡನ್‌-2018: ನಂ.1 ಸಿಮೋನಾ ಹಾಲೆಪ್‌ ನಿರ್ಗಮನ

11:10 AM Jul 08, 2018 | Team Udayavani |

ಲಂಡನ್‌: ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ವಿಂಬಲ್ಡನ್‌ ಕೂಟದಿಂದ ಹೊರಬಿದ್ದಿದ್ದಾರೆ. ಶನಿವಾರದ ತೃತೀಯ ಸುತ್ತಿನ ಪಂದ್ಯದಲ್ಲಿ ತೈವಾನ್‌ನ ಶೀ ಸು ವೀ 3-6, 6-4, 7-5 ಅಂತರದಿಂದ ಹಾಲೆಪ್‌ ಹಾರಾಟವನ್ನು ಕೊನೆಗೊಳಿಸಿದರು. ವಿಶ್ವದ ನಂ. 48 ಆಟಗಾರ್ತಿ ಸು ವೀ ನಿರ್ಣಾಯಕ ಸೆಟ್‌ನಲ್ಲಿ 2-5ರ ಹಿನ್ನಡೆಯಿಂದ ಪಾರಾಗಿ ಬಂದು ಹಾಲೆಪ್‌ಗೆ ಸೋಲುಣಿಸಿದ್ದೊಂದು ಅಚ್ಚರಿ ಎನಿಸಿತು.

Advertisement

ಶುಕ್ರವಾರ ರಾತ್ರಿಯ ಸ್ಪರ್ಧೆಯಲ್ಲಿ 5 ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ಕೂಡ ಸೋಲನುಭವಿಸಿದ್ದಾರೆ. 3ನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡಿನ ಕಿಕಿ ಬರ್ಟೆನ್ಸ್‌ ಭಾರೀ ಹೋರಾಟ ನಡೆಸಿ ವೀನಸ್‌ ಅವರನ್ನು 6-2, 6-7 (5-7), 8-6 ಅಂತರದಿಂದ ಹಿಮ್ಮೆಟ್ಟಿಸಿದರು.

ನಡಾಲ್‌, ಡೆಲ್‌ ಪೊಟ್ರೊ ಮುನ್ನಡೆ
ಪುರುಷರ ವಿಭಾಗದ ನಂ.1 ಟೆನಿಸಿಗ ರಫೆಲ್‌ ನಡಾಲ್‌ 4ನೇ ಸುತ್ತು ಪ್ರವೇಶಿಸಿದ್ದಾರೆ. ಶನಿವಾರದ ಪಂದ್ಯದಲ್ಲಿ ಅವರು ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ 6 -1, 6 -2, 6 -4 ಅಂತರದ ಜಯ ಸಾಧಿಸಿದರು. 
ಆರ್ಜೆಂಟೀನಾ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಈ ಕೂಟದಲ್ಲಿ ಒಂದೂ ಸೆಟ್‌ ಕಳೆದುಕೊಳ್ಳದೆ 4ನೇ ಸುತ್ತಿಗೆ ಏರಿದರು. ತೃತೀಯ ಸುತ್ತಿನ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಬೆನೋಯಿಟ್‌ ಪೇರ್‌ ವಿರುದ್ಧ 6-4, 7-6 (4), 6-3 ಅಂತರದ ಜಯ ಒಲಿಸಿಕೊಂಡರು. 2016ರ ಫೈನಲಿಸ್ಟ್‌ ಕೆನಡಾದ ಮಿಲೋಸ್‌ ರಾನಿಕ್‌ ಕೂಡ 3ನೇ ಸುತ್ತು ದಾಟಿದ್ದಾರೆ. ಅವರು ಆಸ್ಟ್ರಿಯಾದ ಡೆನ್ನಿಸ್‌ ನೊವಾಕ್‌ ವಿರುದ್ಧ 7-6 (5), 4-6, 7-5, 6-2 ಅಂತರದಿಂದ ಗೆದ್ದು ಬಂದರು. 

Advertisement

Udayavani is now on Telegram. Click here to join our channel and stay updated with the latest news.

Next