Advertisement

4ನೇ ಸುತ್ತಿನಲ್ಲಿ ಸಿಮೋನಾ ಹಾಲೆಪ್‌

10:02 AM Jun 02, 2019 | Team Udayavani |

ಪ್ಯಾರಿಸ್‌: ಹಾಲಿ ಚಾಂಪಿಯನ್‌ ಸಿಮೋನಾ ಹಾಲೆಪ್‌ ಫ್ರೆಂಚ್ ಓಪನ್‌ ಕೂಟದ 4ನೇ ಸುತ್ತಿಗೆ ಏರಿದ್ದಾರೆ. ಶನಿವಾರದ ಪಂದ್ಯದಲ್ಲಿ ಅವರು ಲೆಸಿಯಾ ಸುರೆಂಕೊ ವಿರುದ್ಧ 6-2, 6-1 ಅಂತರದ ಸುಲಭ ಜಯ ಸಾಧಿಸಿದರು. ಇದರೊಂದಿಗೆ ಸುರೆಂಕೊ ವಿರುದ್ಧ ಆಡಿದ ಎಲ್ಲ 8 ಪಂದ್ಯಗಳಲ್ಲೂ ಹಾಲೆಪ್‌ ಜಯಿಸಿದಂತಾಯಿತು.

Advertisement

ಒಸಾಕಾ ಔಟ್
ವಿಶ್ವದ ನಂ.1 ಆಟಗಾರ್ತಿ ಜಪಾನಿನ ನವೋಮಿ ಒಸಾಕಾ ಅವರ ಹ್ಯಾಟ್ರಿಕ್‌ ಗೆಲುವಿನ ಓಟಕ್ಕೆ ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ತಡೆಯಾಗಿದ್ದಾರೆ. ಹಾಲಿ ಯುಎಸ್‌ ಓಪನ್‌ ಹಾಗೂ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿರುವ ಒಸಾಕಾ ಅವರನ್ನು ಸಿನಿಯಕೋವಾ 6-4, 6-2 ನೇರ ಸೆಟ್‌ಗಳಿಂದ ಮಣಿಸಿದರು.

ಸಿಸಿಪಸ್‌ ದಾಖಲೆ
ಸ್ಟೆಫ‌ನೆಸ್‌ ಸಿಸಿಪಸ್‌ ನೂತನ ದಾಖಲೆಯೊಂದಿಗೆ ಮುನ್ನುಗ್ಗಿದ್ದಾರೆ. 83 ವರ್ಷಗಳ ಬಳಿಕ ಗ್ರೀಕ್‌ ಟೆನಿಸಿಗನೋರ್ವ ಫ್ರೆಂಚ್ ಓಪನ್‌ ಕೂಟದ 16ರ ಸುತ್ತು ಪ್ರವೇಶಿಸಿದ ಹೆಗ್ಗಳಿಕೆ ಅವರದಾಗಿದೆ. ಸಿಸಿಪಸ್‌ ಫಿಲಿಪ್‌ ಕ್ರಜಿನೋವಿಕ್‌ ವಿರುದ್ಧ ಭಾರೀ ಹೋರಾಟ ನಡೆಸಿ 7-5, 6-3, 6-7 (5-7), 7-6 (8-6) ಅಂತರದಿಂದ ಗೆಲುವು ಕಾಣುವಲ್ಲಿ ಯಶಸ್ವಿಯಾದರು.

ಸಿಸಿಪಸ್‌ ಅವರ ಮುಂದಿನ ಎದುರಾಳಿ ಸ್ಟಾನಿಸ್ಲಾಸ್‌ ವಾವ್ರಿಂಕ ಅಥವಾ ಗ್ರಿಗರ್‌ ಡಿಮಿಟ್ರೋವ್‌.

Advertisement

Udayavani is now on Telegram. Click here to join our channel and stay updated with the latest news.

Next