Advertisement

ಮ್ಯಾಡ್ರಿಡ್‌ ಓಪನ್‌: ಹಾಲೆಪ್‌ಗೆ ಪ್ರಶಸ್ತಿ

01:26 PM May 15, 2017 | Team Udayavani |

ಮ್ಯಾಡ್ರಿಡ್‌: ಫ್ರಾನ್ಸ್‌ನ ಕ್ರಿಸ್ಟಿನಾ ಮಡೆನೋವಿಕ್‌ ಅವರನ್ನು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿದ ಸಿಮೋನಾ ಹಾಲೆಪ್‌ ಸತತ ಎರಡನೇ ವರ್ಷ ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮೂರನೇ ಶ್ರೇಯಾಂಕದ ಹಾಲೆಪ್‌ ಶ್ರೇಷ್ಠ ಮಟ್ಟದ ಟೆನಿಸ್‌ ಆಟ ಪ್ರದರ್ಶಿಸಿ 7-5, 6-7 (5), 6-2 ಸೆಟ್‌ಗಳಿಂದ 14ನೇ ಶ್ರೇಯಾಂಕದ ಮಡೆನೋವಿಕ್‌ ಅವರನ್ನು ಉರುಳಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಹಾಲೆಪ್‌ ಮೂರನೇ ಬಾರಿ ಮ್ಯಾಡ್ರಿಡ್‌ ಓಪನ್‌ನ ಫೈನಲ್‌ನಲ್ಲಿ ಆಡಿದ್ದರು. 2014ರಲ್ಲಿ ಅವರು ಫೈನಲ್‌ನಲ್ಲಿ ಮರಿಯಾ ಶರಪೋವಾಗೆ ಶರಣಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next