Advertisement

ಬುದ್ಧಗಯಾ, ಪಾಟ್ನಾ ಸ್ಫೋಟ ಕೇಸು: ಶಂಕಿತ ಸಿಮಿ ಸದಸ್ಯನ ಸೆರೆ

10:47 AM Oct 14, 2019 | sudhir |

ರಾಯ್ಪುರ: 2013ರ ಬುದ್ಧಗಯಾ ಮತ್ತು ಪಾಟ್ನಾ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ನಿಷೇಧಿತ ಸಿಮಿ ಸಂಘಟನೆಯ ಶಂಕಿತ ಕಾರ್ಯಕರ್ತ ಅಜರುದ್ದೀನ್‌ ಅಲಿಯಾಸ್‌ ಅಜರ್‌ ಅಲಿಯಾಸ್‌ ಕೆಮಿಕಲ್‌ ಅಲಿ ಎಂಬಾತನನ್ನು ಶನಿವಾರ ಛತ್ತೀಸ್‌ಗಡ ಪೊಲೀಸರು ಬಂಧಿಸಿದ್ದಾರೆ.

Advertisement

ಸೌದಿ ಅರೇಬಿಯಾದಿಂದ ವಾಪಸಾದ ಅಲಿ (32) ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯು³ರದವನಾದ ಅಲಿಯನ್ನು ಕಳೆದ 6 ವರ್ಷಗಳಿಂದಲೂ ಪೊಲೀಸರು ಹುಡುಕುತ್ತಿದ್ದರು. ಬುದ್ಧಗಯಾ ಹಾಗೂ ಪಾಟ್ನಾ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರರಿಗೆ ಆಶ್ರಯ ನೀಡಿರುವ ಆರೋಪ ಅಲಿ ಮೇಲಿದೆ. 2013ರ ಡಿಸೆಂಬರ್‌ನಲ್ಲಿ ರಾಯು³ರ ಪೊಲೀಸರು ಸಿಮಿ ಸ್ಲಿàಪರ್‌ ಸೆಲ್‌ ಮುಖ್ಯಸ್ಥ ಉಮರ್‌ ಸಿದ್ದಿಕಿ ಸೇರಿದಂತೆ 17 ಮಂದಿಯನ್ನು ಬಂಧಿಸಿದ್ದರು. ಅದೇ ಸಂದರ್ಭದಲ್ಲಿ ಅಲಿ ಪೊಲೀಸರ ಕಣ್ತಪ್ಪಿಸಿ ನಕಲಿ ಪಾಸ್‌ಪೋರ್ಟ್‌ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ. ಶನಿವಾರ ಆತ ಹೈದರಾಬಾದ್‌ಗೆ ಆಗಮಿಸುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್‌ಗಡ ಪೊಲೀಸರು, ಹೈದರಾಬಾದ್‌ ಎಟಿಎಸ್‌ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಅಲಿಯನ್ನು ಬಂಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next