ಹೊಸದಿಲ್ಲಿ : ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಈಗಲೂ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣ ಅದನ್ನು ಕೇಂದ್ರ ಸರಕಾರ ಇನ್ನೂ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ.
ಸಿಮಿ ಸಂಘಟನೆ ದೇಶಾದ್ಯಂತ ಅನೇಕ ಉಗ್ರ ಕೃತ್ಯಗಳಲ್ಲಿ ಶಾಮೀಗಿದ್ದುದು ಬಹಿರಂಗವಾಗಿತ್ತು.
ಸಿಮಿ ನಡೆಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಕೂಡಲೇ ನಿಂತ್ರಿಸುವುದು ಅಗತ್ಯವಾಗಿದೆ. ತಲೆಮರೆಸಿಕೊಂಡಿರುವ ಅದರ ಸದಸ್ಯರು ಮತ್ತೆ ಸಂಘಟಿತರಾಗುವುದನ್ನು ತಡೆಯಬೇಕಾಗಿದೆ; ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಿಮಿ ಸಂಘಟನೆ ದೇಶದ ಮತ ನಿರಪೇಕ್ಷ ಸ್ವರೂಪವನ್ನು ಹಾಳು ಗೆಡಹುವ ಮತು ಜನರಲ್ಲಿ ಕೋಮು ದ್ವೇಷವನ್ನು ಹಬ್ಬಿಸುವಲ್ಲಿ ನಿರತವಾಗಿರುವುದರಿಂದ ಅದನ್ನು ಇನ್ನೂ ಐದು ವರ್ಷಗಳ ಅವಧಿಗೆ ನಿಷೇಧಿಸುವ ಅಗತ್ಯವಿದೆ ಎಂದು ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ.