Advertisement
ಒಟ್ಟು ಹನ್ನೆರಡು ರಾಶಿಗಳಿವೆ. ಇದರಲ್ಲಿ ಹತ್ತು ರಾಶಿಗಳಲ್ಲಿ ಎರಡು ರಾಶಿಗಳಿಗೆ ಒಂದು ಗ್ರಹದಂತೆ ಐದು ಗ್ರಹಗಳು ಹಂಚಿಕೊಂಡಿವೆ. ಕಟಕ ಹಾಗೂ ಸಿಂಹ ರಾಶಿಗೆ ಅಧಿಪತಿ ಕ್ರಮವಾಗಿ ಚಂದ್ರ ಮತ್ತು ಸೂರ್ಯ. ಇವರಿಗೆ ಒಂದೊಂದೇ ರಾಶಿಗಳನ್ನು ಹಂಚಲಾಗಿದೆ. ಕಟಕ ರಾಶಿಗೆ ಅಧಿಪತಿ ಚಂದ್ರ. ಚಂದ್ರನಿಗೆ ಉತ್ಛ ರಾಶಿ ಹಾಗೂ ಮೂಲ ತ್ರಿಕೋಣಸ್ಥಾನ ವೃಷಭ ರಾಶಿಯಾಗುತ್ತದೆ. ನೀಚ ಸ್ಥಾನ ವೃಶ್ಚಿಕ ರಾಶಿ. ರೋಹಿಣಿ, ಹಸ್ತಾ ಹಾಗೂ ಶ್ರವಣ ನಕ್ಷತ್ರಗಳು ಚಂದ್ರನ ನಕ್ಷತ್ರಗಳು. ಚಂದ್ರನಿಗೆ ಲಗ್ನದಿಂದ ನಾಲ್ಕನೇ ಮನೆಯಲ್ಲಿ ದಿಕºಲ. ಚಂದ್ರನು ತಾಯಿಯನ್ನು ಸೂಚಿಸುತ್ತಾನೆ. ಜಾತಕದಲ್ಲಿ ಚಂದ್ರನು ಚೆನ್ನಾಗಿದ್ದರೆ ಅಂಥವರಿಗೆ ತಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಅಂದರೆ ತಾಯಿಯ ಪ್ರೀತಿ, ಬೆಂಬಲ, ತಾಯಿಯ ಸಹಕಾರ, ತಾಯಿಯಿಂದ ಆಸ್ತಿ ಲಾಭ, ತಾಯಿಯಿಂದ ಹಣಕಾಸಿನ ನೆರವು ಮುಂತಾದ ಲಾಭಗಳು ಹೇರಳವಾಗಿರುತ್ತವೆ. ಚಂದ್ರನು ಮುಖದ ಅಂದವನ್ನೂ ಸೂಚಿಸುತ್ತಾನೆ. ಜಾತಕದಲ್ಲಿ ಚಂದ್ರನು ಒಳ್ಳೆಯ ಮನೆಯಲ್ಲಿ ಅಂದರೆ ತನ್ನದೇ ನಕ್ಷತ್ರಗಳಾದ ರೋಹಿಣಿ, ಹಸ್ತಾ, ಶ್ರವಣಗಳಲ್ಲಿ ಅಥವಾ ಉತ್ಛರಾಶಿಯಾದ ವೃಷಭದಲ್ಲಿ ಗುರುವಿನ ರಾಶಿಯಾದ ಧನುಸ್ಸು ಮೀನದಲ್ಲಿ ಅಥವಾ ಸೂರ್ಯನ ರಾಶಿಯಾದ ಸಿಂಹದಲ್ಲಿ ಇದ್ದರೆ ಅಂಥವರು ನೋಡಲು ಅಂದವಾಗಿ ಆಕರ್ಷಕವಾಗಿ ಇರುತ್ತಾರೆ. ಆದರೆ ಚಂದ್ರನು ಶನಿ ಅಥವಾ ರಾಹುವಿನ ಜೊತೆ ಯುತಿ ಯೋಗದಲ್ಲಿ ಇದ್ದರೆ ಅಥವಾ ಶನಿ ಹಾಗೂ ರಾಹುವಿನ ದೃಷ್ಟಿ ಚಂದ್ರನ ಮೇಲಿದ್ದರೆ ಇಂಥ ಜಾತಕದವರ ಮುಖ ಅಂದವಾಗಿರುವುದಿಲ್ಲ. ಮುಖದ ಮೇಲೆ ಕಲೆಗಳು, ಮೊಡವೆಗಳು ಇದ್ದು ಮುಖದ ಅಂದ ಕೆಡಿಸಿರುತ್ತದೆ.
Related Articles
Advertisement
ಸೂರ್ಯ ಸಿಂಹರಾಶಿಗೆ ಅಧಿಪತಿ. ಮೂಲ ತ್ರಿಕೋಣವೂ ಸೂರ್ಯನಿಗೆ ಸಿಂಹ ರಾಶಿಯೇ ಆಗಿರುತ್ತದೆ, ಉತ್ಛ ರಾಶಿ ಮೇಷವಾದರೆ ನೀಚ ರಾಶಿ ತುಲಾ. ಸೂರ್ಯನಿಗೆ ಹತ್ತನೇ ಮನೆ ದಿಕºಲ. ಕೃತ್ತಿಕಾ, ಉತ್ತರಫಾಲ್ಗುಣಿ ಹಾಗೂ ಉತ್ತರಾಷಾಢ ಇವು ಸೂರ್ಯನ ನಕ್ಷತ್ರಗಳು. ಸೂರ್ಯನಿಗೆ ಶತ್ರು ಶನಿ, ರಾಹು ಹಾಗೂ ಶುಕ್ರ. ಯಾರ ಜಾತಕದಲ್ಲಿ ಸೂರ್ಯ ಉತ್ಛನಾಗಿರುವನೋ ಅಂಥವರು ಜೀವನದಲ್ಲಿಯೂ ಉನ್ನತವಾಗಿ ಬದುಕುತ್ತಾರೆ. ಇಂಥವರು ಯಾರಿಗೂ ತಲೆಬಾಗರು. ಸೂರ್ಯ ಉತ್ಛನಾಗಿರುವ ಜಾತಕದವರು ಕೊಂಚ ಅಹಂಕಾರಿಗಳು ಆಗಿರಬಹುದು. ಶಿರೋ ಭಾನು ಎನ್ನುತ್ತಾರೆ ಅವರನ್ನು. ಅಂದರೆ ಸೂರ್ಯನು ಜಾತಕದಲ್ಲಿ ಚೆನ್ನಾಗಿಲ್ಲದಿದ್ದರೆ ಅವರಿಗೆ ತಲೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತದೆ. ಮೈಗ್ರೇನ್, ತಲೆ ನೋವು, ಚಿಕ್ಕ ವಯಸ್ಸಿಗೇ ಕನ್ನಡಕ ಧರಿಸುವುದು, ಕಣ್ಣಿನ ದೋಷಗಳು, ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಇವೆಲ್ಲಾ ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಬರುವಂಥದ್ದು. ಜಾತಕದಲ್ಲಿ ಸೂರ್ಯನು ಶನಿ ದೃಷ್ಟಿಗೆ ತುತ್ತಾಗಿದ್ದರೆ ಅಂಥವರು ತಂದೆಯಿಂದ ದೂವಿರುತ್ತಾರೆ ಅಥವಾ ತಂದೆಗೆ ವಿರೋಧಿಗಳಾಗಿರುತ್ತಾರೆ. ಸೂರ್ಯನಿಗೆ ರಾಹು ದೃಷ್ಟಿ ಇದ್ದರೆ ಅಂಥವರಿಗೆ ಸಂಕಲ್ಪ ಶಕ್ತಿ ಕಡಿಮೆ ಇರುತ್ತದೆ. ಸೂರ್ಯ ಕುಜ ಜಾತಕದಲ್ಲಿ ಒಟ್ಟಿಗೆ ಇದ್ದರೆ ಅಪರಿಮಿತ ಬಲ. ಸೂರ್ಯ-ಗುರು ಜಾತಕದಲ್ಲಿ ಒಟ್ಟಿಗೆ ಇದ್ದರೆ ಅಂಥವರು ದೇವರಲ್ಲಿ ಭಕ್ತಿಯುಳ್ಳವರಾಗಿರುತ್ತಾರೆ. ಧರ್ಮದರ್ಶಿಗಳು ಅಥವಾ ದೇವಾಲಯಗಳ ಮುಖ್ಯಸ್ಥರೂ ಆಗಿರುತ್ತಾರೆ. ಸೂರ್ಯ ಅಪಾರ ಶಕ್ತಿವಂತ. ಗ್ರಹಗಳ ರಾಜ. ಇಂಥ ಸೂರ್ಯ ಗುರುನೊಟ್ಟಿಗೆ ಯಾರ ಜಾತಕದಲ್ಲಿ ಇರುತ್ತಾನೋ ಅವರು ಧರ್ಮ ಬೀರಿಗಳಾಗಿರುತ್ತಾರೆ. ಸಾತ್ವಿಕೆಯ ಶಕ್ತಿ ಅಪಾರವಾಗಿರುತ್ತದೆ. ಧರ್ಮಬೋಧಕರೂ ಆಗಿರುತ್ತಾರೆ. ಸೂರ್ಯ ಹತ್ತನೆ ಮನೆಯಲ್ಲಿದ್ದರೆ ಅದು ದಿಕºಲ. ಸೂರ್ಯ ಇಲ್ಲಿ ಅಪಾರ ಬಲಶಾಲಿ. ಇಂಥವರು ಒಂದು ದೊಡ್ಡ ಸಂಸ್ಥೆಯ ಸ್ಥಾಪಕರಾಗಿರುತ್ತಾರೆ. ಅವರು ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಅದರಲ್ಲಿ ಅವರೇ ನಾಯಕರು. ಅವರಿಗೆ ಅಪಾರ ಮನೋಬಲ ಹಾಗೂ ಅವರು ಸ್ವಾಭಿಮಾನಿಗಳಾಗಿರುತ್ತಾರೆ. ಒಂದೇ ಅಲ್ಲ ಹಲವಾರು ಸಂಸ್ಥೆಗಳ ಒಡೆಯರೂ ಆಗಿರಬಹುದು. ರಾಜಕೀಯ ನಾಯಕರೂ ಆಗಬಹುದು. ಸೂರ್ಯ ಜಾತಕದಲ್ಲಿ ಚೆನ್ನಾಗಿದ್ದರೆ ಮಾತ್ರವೇ ರಾಜಕೀಯ ರಂಗದಲ್ಲಿ ಉತ್ತಮ ಭವಿಷ್ಯ ಇರುತ್ತದೆ.
ಸೂರ್ಯನ ಅನುಗ್ರಹವಿದ್ದರೆ ರಾಜ ವೈಭವಸೂರ್ಯ ಉತ್ಛ ರಾಶಿಯಲ್ಲಿರುವಾಗ ಅಂದರೆ ಏಪ್ರಿಲ್ 14 ರಿಂದ ಮೇ 14ರ ಒಳಗೆ ಹುಟ್ಟಿದವರು ಬದುಕಿರುವವರೆಗೂ ತುಂಬಾ ಶ್ರೇಷ್ಠಮಟ್ಟದಲ್ಲಿಯೇ ಬದುಕುತ್ತಾರೆ. ತುಂಬಾ ಕೀರ್ತಿ, ಪ್ರಸಿದ್ಧಿಗಳನ್ನು ಗಳಿಸುತ್ತಾರೆ. ತಮ್ಮ ಕ್ಷೇತ್ರದಲ್ಲಿ ಅದ್ವಿತೀಯರಾಗಿರುತ್ತಾರೆ. ಉದಾ: ಕನ್ನಡ ಕಂಠೀರವ ಡಾ. ರಾಜ್ ಕುಮಾರ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹೀಗೆ ಪಟ್ಟಿ ಬೆಳೆಯುತ್ತದೆ. ಸೂರ್ಯ ಉನ್ನತ ಅಧಿಕಾರವನ್ನು, ಆಡಳಿತ ಕ್ಷೇತ್ರವನ್ನೂ, ರಾಜಕಾರಣವನ್ನೂ ಪ್ರತಿನಿಧಿಸುತ್ತಾನೆ. ಹೀಗಾಗಿ ಸೂರ್ಯ ಯಾರ ಜಾತಕದಲ್ಲಿ ಬಲವಾಗಿರುತ್ತಾನೋ ಅವರು ಎಂದಿಗೂ ಇನ್ನೊಬ್ಬರ ಹಂಗಿನಲ್ಲಿ, ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಿಲ್ಲ. ಮಾಡಿದರೂ ಅದು ಅಲ್ಪಕಾಲ ಮಾತ್ರ. ತಮ್ಮದೇ ಒಂದು ವ್ಯಾಪಾರ ಅಥವಾ ಸಂಸ್ಥೆಯನ್ನು ಪ್ರಾರಂಭಿಸಿ ಯಶಸ್ಸು ಕಾಣುತ್ತಾರೆ. ಸೂರ್ಯ ತಂದೆಯನ್ನು ಪ್ರತಿನಿಧಿಸುವುದರಿಂದ ಸೂರ್ಯ ಜಾತಕದಲ್ಲಿ ಬಲವಾಗಿದ್ದರೆ ತಂದೆಯಿಂದ ಲಾಭ, ಸಹಕಾರ, ಬೆಂಬಲ, ಪಿತ್ರಾರ್ಜಿತ ಆಸ್ತಿ ಸಿಗುವುದು ಮುಂತಾದ ಲಾಭಗಳಿರುತ್ತವೆ. ತಂದೆಯ ವೃತ್ತಿಯನ್ನು ಪರಂಪರಾಗತವಾಗಿ ಮುಂದುವರೆಸಿಕೊಂಡು ಹೋಗಲೂ ಸೂರ್ಯನ ಅನುಗ್ರಹವೇ ಕಾರಣವಾಗಿರುತ್ತದೆ. ಸೂರ್ಯ ನಿಷ್ಕಳಂಕ ಹೀಗಾಗಿ ಸೂರ್ಯನ ಅನುಗ್ರಹ ಹೊಂದಿರುವವರು ಸುಳ್ಳು, ಕಪಟ, ಮೋಸ ಕೊಳಕು ಇಂಥವೆಲ್ಲ ಸಹಿಸುವುದಿಲ್ಲ. ಸೂರ್ಯನ ಅನುಗ್ರಹ ರಾಜ ವೈಭವವನ್ನೂ, ಉನ್ನತ ಅಧಿಕಾರವನ್ನೂ ಕೀರ್ತಿ, ಸಂಪತ್ತನ್ನೂ ಪ್ರಸಿದ್ಧಿಯನ್ನು ಸಾಮಾಜಿಕ ಗೌರವವನ್ನೂ ತಂದುಕೊಡುತ್ತದೆ. ವೀಣಾ ರಾವ್