Advertisement

ಹಳ್ಳಿಯ ಶಾಲೆ ಬೆಳ್ಳಿ ಪದಕ

11:35 AM Jan 21, 2017 | |

   ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರೆಲ್ಲ ಈ ಪ್ರೌಢಶಾಲೆಗೆ ಒಮ್ಮೆ ಭೇಟಿ ನೀಡಬೇಕು. ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಹುದಹುದು ಎನ್ನದಿದ್ದರೆ ಹೇಳಿ! 20016 ನೇ ಸಾಲಿನ ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದೇಗೌಡ ಹೆಸರಿನ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಪ್ರೌಢಶಾಲೆ ಪ್ರಶಸ್ತಿ ಪಡೆಯುವ ಮೂಲಕ ಮೂಲೆಯಲ್ಲಿನ ಹಳ್ಳಿಯೊಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ. 

Advertisement

    ಶಿಕ್ಷಕರ ನಿಸ್ವಾರ್ಥ ಸೇವೆ, ಶಿಕ್ಷಣ  ಪ್ರೇಮ, ಊರವರ ಸಹಾಯ-ಸಹಕಾರ ಸೇರಿದರೆ ಸರ್ಕಾರಿ ಶಾಲೆಯೊಂದು ಹೇಗೆ ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂಬುದಕ್ಕೆ ಉತ್ತರವಾಗಿ ನಿಲ್ಲುತ್ತದೆ ಈ ಪ್ರೌಢಶಾಲೆ.

    ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬೆಟಗೇರಿ ಗ್ರಾಮದ ಈ ವ್ಹಿ.ವ್ಹಿ.ಡಿ ಸರ್ಕಾರಿ ಶಾಲೆ 2006ನೇ ಸಾಲಿನ ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದೇಗೌಡ ಹೆಸರಿನ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಪ್ರೌಢಶಾಲೆ ಪ್ರಶಸ್ತಿ ಪಡೆದುಕೊಂಡಿದೆ. 

    ಬೆಟಗೇರಿ ಒಂದು ಹಳ್ಳಿಯಾದರೂ ಇಂದು ಸುತ್ತಲಿನ ಹತ್ತೂರಿನ ವ್ಯಾಪಾರ ವಹಿವಾಟದ ಕೇಂದ್ರ ಸ್ಥಳವಾಗಿ ಪ್ರಗತಿಯ ಹೆಜ್ಜೆಯನ್ನಿಟ್ಟಿದೆ. ಕಲೆ-ಸಾಹಿತ್ಯ-ಸಂಸ್ಕೃತಿಗೆ ಬಹುದೊಡ್ಡ ಹೆಸರಾದ ಹಳ್ಳಿ. ಆನಂದ ಕಂದ ಕಾವ್ಯನಾಮದಿಂದ ಖ್ಯಾತರಾದ ಬೆಟಗೇರಿ ಕೃಷ್ಣಶರ್ಮರ ಜನ್ಮಸ್ಥಳ.     ಇಲ್ಲಿಯ ವ್ಹಿ.ವ್ಹಿ.ಡಿ ಸರ್ಕಾರಿ ಪ್ರೌಢಶಾಲೆ ಇಂಗ್ಲೀಷ್‌ ಎಲ್‌ ಅಕ್ಷರದ ಆಕಾರದಲ್ಲಿ ಸುಂದರ, ಭವ್ಯವಾದ ಕೊಠಡಿಗಳನ್ನು ಹೊಂದಿದೆ. ಶಾಲೆಯ ಮುಂದಿನ ಕೈದೋಟದಲ್ಲಿ ಹಲವು ಜಾತಿಗಳ ಬಣ್ಣ ಬಣ್ಣದ ಹೂಗಳು. ತೋಟದ ರಕ್ಷಣೆಗಾಗಿಯೇ ನಿರ್ಮಿಸಿದ ಹೂಬಳ್ಳಿಯ ಬೇಲಿ. ಉದ್ಯಾನದಲ್ಲಿ ಸಿಮೆಂಟ್‌ನಿಂದ ತಯಾರಾದ ಬಗೆಬಗೆಯ ಪ್ರಾಣಿಗಳು, ಜಿಂಕೆ, ಮೊಲ, ನವಿಲು, ಉಡಾವಣೆಗೆ ಸಜಾjಗಿರುವ ರಾಕೆಟ್‌… ಸ್ತಂಭ ಗಡಿಯಾರ, ಸಾಹಿತಿಗಳ ಕಲಾಕೃತಿಗಳು, ವಿಶಾಲವಾದ ಆಟದ ಮೈದಾನ.  ಶಾಲೆಯ ಆವರಣದ ಸುತ್ತ ಹಚ್ಚು ಹಸಿರಿನಿಂದ ಕಂಗೊಳಿಸುವ ಸುಮಾರು 500 ಗಿಡಗಳು. ಆ ಗಿಡಗಳಿಗೆ ನೇತು ಹಾಕಿದ, ಶಾಲಾ ಮುಂಭಾಗದ ಕಟ್ಟಡಕ್ಕೆ ಬರೆಯಲಾದ ವಿವಿಧ ಮಾಹಿತಿ ಫ‌ಲಕಗಳು. ಮಧ್ಯದಲ್ಲಿ ಸುಂದರ ರಂಗಸಜ್ಜಿಕೆ. ನೋಡಲೆರಡು ಕಣ್ಣು ಸಾಲದು. ಮಕ್ಕಳಿಗೆ ಶಾಲೆಗೆ ಬರುವುದೆಂದರೆ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಅನುಭವ.

Advertisement

  35 ವರ್ಷಗಳ ಹಿಂದೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಬಿಟ್ಟರೆ ಬೇರೆ ಶೈಕ್ಷಣಿಕ ಸೌಲಭ್ಯ ಇರಲಿಲ್ಲ. ಗ್ರಾಮಸ್ಥರ ಹಾಗೂ ಶಿಕ್ಷಣ ಪ್ರೇಮಿಗಳ ಅವಿರತ ಪ್ರಯತ್ನದ ಫ‌ಲವಾಗಿ 1977 ರಲ್ಲಿ ಆರಂಭವಾಗಿದ್ದು ಈ ಸರ್ಕಾರಿ ಪ್ರಾಢಶಾಲೆ. ಆರಂಭದಲ್ಲಿ ಹಲವಾರು ಏಳುಬೀಳುಗಳನ್ನು ಕಾಣುತ್ತ ಕುಂಟುತ್ತಲೇ ಹೆಜ್ಜೆ ಹಾಕಿದ ಈ ಶಾಲೆ, 1994ರಲ್ಲಿ  ಶ್ರೀ ಶೈಲ ಕರಿಕಟ್ಟಿ ಅವರು ಮುಖ್ಯ ಪ್ರಾಧ್ಯಾಪಕರಾಗಿ ಬಂದಾಗ ಸುಧಾರಣೆ ಕಂಡಿತು. ಸುತ್ತ ಹತ್ತೂರಿನ ಗಮನ ಸೆಳೆಯಿತು. 1999ರಲ್ಲಿ ಈ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಂದ  ಜಿ.ಬಿ. ಬಳಿಗಾರ ಅವರ ದಕ್ಷ ಆಡಳಿತ ಇವತ್ತು ಶಾಲೆಯನ್ನು ರಾಜ್ಯಮಟ್ಟದಲ್ಲಿ ಮೊದಲು ನಿಲ್ಲಿಸುವಂತೆ ಮಾಡಿದೆ. ಎಲ್ಲ ಪ್ರೌಢಶಾಲೆಗಳಿಗಿಂತ ವಿಭಿನ್ನವಾಗಿ ಹೆಜ್ಜೆ ಹಾಕಿ, ಶೈಕ್ಷಣಿಕ, ನೈತಿಕ ಗುಣಮಟ್ಟ ಹೆಚ್ಚುವಂತೆ ಮಾಡಿದೆ. ಹಳ್ಳಿ ಶಾಲೆಯೊಂದರ ಹೆಸರು ನಾಡಿನಲ್ಲಿ ಹೆಸರು ಮಾಡಿದೆ ಎಂದರೆ ಅದಕ್ಕೆ ಆ ಊರವರ ಸಹಕಾರ ಖಂಡಿತ ದೊಡ್ಡದಾಗಿರಬೇಕು.

    ಊರಿನಿಂದ ಅರ್ಧ ಕಿ.ಮೀ ದೂರವಿರುವ ಈ ಶಾಲೆಗೆ ಗ್ರಾಮದ ದಾನಿಗಳಾದ ದೇಯನ್ನವರ ಬಂಧುಗಳು ಹಾಗೂ ಬಳಿಗಾರ ಅವರು ಕೊಟ್ಟ ಸುಮಾರು ಹನ್ನೊಂದು ಎಕರೆ ಭೂಮಿಯಿಂದ ಇವತ್ತ ಶಾಲೆಯ ಸುತ್ತ ನಂದನವನ ಸೃಷ್ಟಿಸಲು ಸಾಧ್ಯವಾಗಿದೆ. 

  ಮಾಹಿತಿ ಯೋಜನೆಯ ಅಡಿಯಲ್ಲಿ ಗಣಕ ಯಂತ್ರದ ಬೋಧನಾ ಸೌಲಭ್ಯ ಪಡೆದ ಜಿಲ್ಲೆಯ ಗ್ರಾಮೀಣ ವಲಯದ ಮೊದಲ ಸರ್ಕಾರಿ ಪ್ರೌಢಶಾಲೆ ಇದೆ. ಸಧ್ಯಕ್ಕೆ  660 ಮಕ್ಕಳು ಓದುತ್ತಿರುವ ಈ ಶಾಲೆಯಲ್ಲಿ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುತ್ತದೆ. ನ್ಯೂಟನ್‌ ವಿಜಾnನ ಕೇಂದ್ರ, ವೃತ್ತಿ ಮಾರ್ಗದರ್ಶನ ಕೇಂದ್ರ, ಶಾಲೆಯ ಮುಂದೆ ಸರ್‌ ಜಗದೀಶಚಂದ್ರ ಬೋಸ್‌ ಕೈತೋಟ, ಡಾ|| ಅಬ್ದುಲ್‌ ಕಲಾಂ ಉದ್ಯಾನ ವನ ಸೇರಿದಂತೆ ಉತ್ತಮ ಗ್ರಂಥಾಲಯ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಹೊಂದಿರುವುದು ಸರ್ಕಾರಿ ಶಾಲೆ ಎಂದರೆ ನಂಬಲಾಗದು.

        ಬೇರೆ ಬೇರೆ ಶಾಲೆಗಳಿಂದ ನುರಿತ ಅಧ್ಯಾಪಕರನ್ನು ಕರೆಸಿ, ಅವರಿಂದ ಪಠ್ಯದ ವಿಶೇಷ ಪಾಠ ಹೇಳಿಸುವ ಪರಿಪಾಠವಿದೆ ಇಲ್ಲಿ. ರಜಾದಿನಗಳಲ್ಲಿಯೂ ಶಿಕ್ಷಕರು ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಬಗ್ಗೆ ಹೇಳಿಕೊಡುವುದು ಅವರ ಸೇವಾ ದಕ್ಷತೆ. ಶಿಕ್ಷಣ ಪ್ರೇಮಕ್ಕೆ ಸಾಕ್ಷಿ$.

    ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀûಾ ಮಂಡಳಿಯಿಂದ ಸತತ ಎರಡು ಬಾರಿ ಅಭಿನಂದಾನಾ ಪತ್ರ ಪಡೆದಿದ್ದ ಬೆಟಗೇರಿ ಶಾಲೆ, ಈಗ ರಾಜ್ಯದ ಅತ್ಯುತ್ತಮ ಶಾಲೆಯ ಪಟ್ಟ ಗಳಿಸಿಕೊಂಡಿದೆ.  ಈ ಪಟ್ಟ ಸುಮ್ಮನೇ ಸಿಕ್ಕಿದ್ದಲ್ಲ. ಅದಕ್ಕಾಗಿ ಮಣ್ಣು ಹೊತ್ತವರು ಬಹಳ ಮಂದಿ. ಶಿಕ್ಷಕರು-ಮುಖ್ಯೋಪಾಧ್ಯಾಯರ ಸತತ ಶ್ರಮ, ಮಕ್ಕಳ ಕಲಿಕೆಯ ಆಸಕ್ತಿ-ಹಂಬಲ, ಊರವರ ಸಹಕಾರ, ತಂದೆ-ತಾಯಿಗಳ ಪ್ರೋತ್ಸಾಹ ಎಲ್ಲವೂ ಇಲ್ಲಿ ಕೆಲಸ ಮಾಡಿವೆ. 

  ಈ ಬೆಟಗೇರಿ ವ್ಹಿ.ವ್ಹಿ.ಡಿ ಸರಕಾರಿ ಪ್ರೌಢ ಶಾಲೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದು, ಮಾದರಿ ಸರಕಾರಿ ಪ್ರೌಢ ಶಾಲೆಯಾಗುವಲ್ಲಿ ಸ್ಥಳೀಯ ಶಿಕ್ಷಣ ಪ್ರೇಮಿಗಳ, ಗ್ರಾಮಸ್ಥರ ಹಾಗೂ ಶಾಲೆಯ ಶಿಕ್ಷಕ-ಸಿಬ್ಬಂದಿ ವರ್ಗದವರ ಸಹಾಯ-ಸಹಕಾರ ನೀಡಿದ್ದು ಅವಿಸ್ಮರಣೀಯ ಅಂತ ನೆನಪಿಸಿಕೊಳ್ಳುತ್ತಾರೆ  ಗೋಕಾಕ ವಲಯದ ಬಿಇಓ ಜಿ.ಬಿ ಬಳಿಗಾರ.  

 ಒಟ್ಟಾರೆ ಊರು ಒಂದು ಗೂಡಿದರೆ ಏನು ಬೇಕಾದರೂ ಮಾಡಬಹುದು ಅನ್ನೋದನ್ನು  ಬೆಟಗೇರಿ ಗ್ರಾಮ ಶಾಲೆ ಕಟ್ಟಿ ಸಾಧಿಸಿ ತೋರಿಸಿದೆ.

ಅಡಿವೇಶ ಮುಧೋಳ ಬೆಟಗೇರಿ

Advertisement

Udayavani is now on Telegram. Click here to join our channel and stay updated with the latest news.

Next