Advertisement
ಜತೆಗೆ,ಅಷ್ಟು ಸುಲಭವಾಗಿ ಮುಖ್ಯಮಂತ್ರಿಯಾಗಲು ನಿಮ್ಮನ್ನೆಲ್ಲ ಬಿಡುತ್ತಾರೆಂದು ತಿಳಿದುಕೊಳ್ಳಬೇಡಿ. ನಾನು ಅನುಭವಿಸಿದ್ದನ್ನು ಹೇಳುತ್ತಿದ್ದೇನೆ.ನಾವು ಎರಡನೇ ದರ್ಜೆಯಲ್ಲಿದ್ದೇವೆ.ಮೊದಲ ದರ್ಜೆಗೆ ಹೋಗೋಕೆ ನಮ್ಮನ್ನು ಬಿಡುವುದಿಲ್ಲ,ಆದರೆ, ಪ್ರಯತ್ನ ಬಿಡಬಾರದು ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ದೇವೇಗೌಡರನ್ನು ಸನ್ಮಾನಿ ಸುವಾಗಹಾರ ಹಾಕಿದ ಶಿವಕುಮಾರ್ ಅವರು ಗೌಡರ ಕಾಲು ಮುಟ್ಟಿ ನಮಸ್ಕರಿಸಿದ್ದು ವಿಶೇಷ. ನಂತರ ತಮ್ಮ ಭಾಷಣದಲ್ಲಿ ದೇವೇಗೌಡರನ್ನು ಹೊಗಳಿದ ಡಿ.ಕೆ.ಶಿವಕುಮಾರ್,ದೇವೇಗೌಡರು ಸಾಧನೆ ಮಾಡಿ ಪ್ರಧಾನಿ ಸ್ಥಾನ ಪಡೆದರು. ಇದು ಅಷ್ಟು ಸುಲಭದ ಅಲ್ಲ.ಅವರು ಅಷ್ಟು ದೊಡ್ಡ ಸ್ಥಾನ ಅಲಂಕರಿಸಲು ಎಷ್ಟು ಉಳಿ ಏಟು ತಿಂದಿರ ಬಹುದು, ಎಷ್ಟೆಲ್ಲಾ ತೊಂದರೆ ಎದುರಿಸಿದ್ದಾರೋ ಅವರಿಗೇ ಗೊತ್ತು, 50 ವರ್ಷದ ರಾಜ ಕಾರಣದಲ್ಲಿ ಎಷ್ಟೆಲ್ಲಾ ಸಮಸ್ಯೆ ಅನುಭವಿಸಿರಬೇಕು ಎಂದು ಹೇಳಿದರು.
Related Articles
Advertisement
ಕಾರ್ಯಕ್ರಮದಲ್ಲಿ ವಸತಿ ಎಂ.ಕೃಷ್ಣಪ್ಪ , ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಿವೃತ್ತ ಉಪಲೋಕಾಯುಕ್ತ ನ್ಯಾ. ಚಂದ್ರಶೇಖರಯ್ಯ, ಕೆಇಆರ್‌ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ, ಫೌಂಡೇಷನ್ ಅಧ್ಯಕ್ಷ ಡಾ.ವೈ.ಕೆ.ಪುಟ್ಟಸೋಮೇಗೌಡ, ಕಾರ್ಯದರ್ಶಿ ಎನ್.ಸಂಪಂಗಿ ಇತರರು ಉಪಸ್ಥಿತರಿದ್ದರು.
ಜೀವನದ ಕೊನೆಯ ದಿನಗಳಲ್ಲಿ ಒಕ್ಕಲಿಗ ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚಿಸುತ್ತಿದ್ದೇನೆ. ಕಾವೇರಿ ಕಣಿವೆ ವ್ಯಾಪ್ತಿಯ ಪ್ರದೇಶದಲ್ಲಿನ ಎರಡೂವರೆ ಕೋಟಿ ಜನರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ.-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ