Advertisement
2017ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ದೇವಸ್ಥಾನದ ಆಭರಣಗಳ ಬಗ್ಗೆ ಆಡಿಟ್ ನಡೆಸಲಾಗಿತ್ತು. ಆಗಲೇ ಆಭರಣ ನಾಪತ್ತೆಯಾಗಿರುವುದು ತಿಳಿದುಬಂದಿತ್ತು. ಆದರೆ, ಆ ವಿಚಾರ ಮಾತ್ರ ಬಹಿರಂಗ ಆಗಿರಲಿಲ್ಲ. ಬುಧವಾರದಂದು, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ನ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಜಿ. ಭಾನುಪ್ರಕಾಶ್ ರೆಡ್ಡಿ ಅವರು, 2017ರ ಆಡಿಟಿಂಗ್‌ನ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ, ಆಭರಣಗಳ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಇದಕ್ಕೆ ಟಿಟಿಡಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್, ಪ್ರಕರಣದ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ನಾಪತ್ತೆಯಾದ ಕಿರೀಟ 5.4 ಕೆ.ಜಿ. ತೂಕವಿದ್ದು, 2002ರಲ್ಲಿ ಭಕ್ತರೊಬ್ಬರು ಅದನ್ನು ದೇಣಿಗೆ ನೀಡಿದ್ದರು. ಅದರ ಇಂದಿನ ಮಾರುಕಟ್ಟೆ ಬೆಲೆ 6.50 ಲಕ್ಷ ರೂ. ಆಗಿದೆಯಾದರೂ ದೇವರ ಕಿರೀಟವಾದ್ದರಿಂದ ಅದರ ಮೌಲ್ಯ ಅಗಾಧವಾಗಿದೆ ಎನ್ನಲಾಗಿದೆ.
Advertisement
ತಿಮ್ಮಪ್ಪನ ಬೆಳ್ಳಿ ಕಿರೀಟ ನಾಪತ್ತೆ!
11:30 PM Aug 28, 2019 | mahesh |
Advertisement
Udayavani is now on Telegram. Click here to join our channel and stay updated with the latest news.