ಬಂಕಾಪುರ: ಇಲ್ಲಿನ ಲಯನ್ಸ್ ನವಭಾರತ ವಿದ್ಯಾಸಂಸ್ಥೆ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ|ಆರ್.ಎಸ್. ಅರಳೆಲೆಮಠ ನೇತೃತ್ವದಲ್ಲಿ 25 ಸದಸ್ಯರನ್ನು ಹೊಂದಿ ಸೇವಾ ಮನೋಭಾವನೆ ಪ್ರತೀಕವಾಗಿ 1994ರಲ್ಲಿ ಪ್ರಾರಂಭಗೊಂಡ ಈ ಶಿಕ್ಷಣ ಸಂಸ್ಥೆ ರಜತ ಮಹೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿದೆ.
ಸಂಸ್ಥೆ ಜಿ.ಐ. ಸಜ್ಜನಗೌಡರ ಅಧ್ಯಕ್ಷತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಎಲ್‌ಕೆಜಿ 17 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಶಾಲೆ 2002ರಲ್ಲಿ ಬಸ್ ನಿಲ್ದಾಣ ಸಮೀಪ ಒಂದೂವರೆ ಏಕರೆ ಸ್ವಂತ ಜಾಗೆಯಲ್ಲಿ 8 ಸುಸಜ್ಜಿತ ಕೊಠಡಿ ನಿರ್ಮಿಸಿ 7ನೇ ವರ್ಗ ವರೆಗೆ ಶಿಕ್ಷಣ ನೀಡಲಾರಂಭಿಸಿತು.
2013-14 ರಲ್ಲಿ ಪ್ರೌಢಶಾಲೆಯಾಗಿ ಬಡ್ತಿಹೊಂದಿದ ಈ ಶಾಲೆ 22 ನುರಿತ ಶಿಕ್ಷಕ ವೃಂದದವರನ್ನು ಹೊಂದಿದ್ದು, 700 ವಿದ್ಯಾರ್ಥಿಗಳ ಸಂಖ್ಯಾಬಲದೊಂದಿಗೆ ಇಂದು ಮುನ್ನಡೆಯುತ್ತಲಿದೆ. 17 ವಿಶಾಲ ಕೊಠಡಿ ಪ್ರತೇಕ ಸ್ಮಾರ್ಟ್‌ಕ್ಲಾಸ್,ಅಭಾಕಸ್, ಸ್ಟಾಪ್ ರೂಂ, ಕಚೇರಿ, ವಿಶಾಲ ಆಟದ ಮೈದಾನ, ಶಾಲಾ ಸುತ್ತಲು ಗೀಡ, ಮರ, ಉದ್ಯಾನವನ ಹೊಂದಿರುವದರಿಂದ ಶಿಕ್ಷಣ ಸಂಸ್ಥೆ ಪರಿಸರ ಪ್ರೇಮ ಮೆರೆಯುತ್ತಿದೆ.
ಹಳೆಯ ವಿದ್ಯಾರ್ಥಿಗಳೊಂದಿಗೆ ತನ್ನ ವೈಭವದ ರಜತ ಮಹೋತ್ಸವ, ವಾರ್ಷಿಕ ಸ್ನೇಹ ಸಮ್ಮೇಳನ, ವಿದ್ಯಾರ್ಥಿಗಳಿಂದ ಗುರು ವಂದನಾ ಕಾರ್ಯಕ್ರಮ ಫೆ. 7 ಮತ್ತು 8 ರಂದು ಹಮ್ಮಿಕೊಳ್ಳಲಾಗಿದೆ.
ಫೆ. 7 ಬೆಳಗ್ಗೆ 10 ಗಂಟೆಗೆ ಗುರು ವಂದನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಆರ್.ಎಸ್. ಅರಳೆಲೆಮಠ ವಹಿಸುವರು. ಉದ್ಘಾಟಕರಾಗಿ ಜಿಲ್ಲಾ ಲಯನ್ಸ್ ಗೌವರ್ನರ್ ಮೋನಿಕಾ ಸಾವಂತ, ಮುಖ್ಯ ಅತಿಥಿಗಳಾಗಿ ವಿಪ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಬಸವರಾಜ ಬೊಮ್ಮಾಯಿ, ಜನಪದ ಸಾಹಿತಿ ಡಾ| ಶಂಭು ಬಳಿಗಾರ ಸೇರಿದಂತೆ ಮತ್ತಿತರರು ಆಗಮಿಸುವರು.
ಫೆ. 8 ರಂದು ಬೆಳಗ್ಗೆ 10ಗಂಟೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಧ್ಯಕ್ಷತೆಯನ್ನು ಲಯನ್ಸ್ ನವಭಾರತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಕೆ.ಎಂ.ಬಮ್ಮನಹಳ್ಳಿ ವಹಿಸಲಿದ್ದು, ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಶಾಬಿರಾಬಿ ಯಲಗಚ್ಚ, ಬಿಇಒ ಶಿವಾನಂದ ಹೆಳವರ, ಪಿಎಸ್‌ಐ ಸಂತೋಷ ಪಾಟೀಲ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಸೇರಿದಂತೆ ಮತ್ತಿತರ ಗಣ್ಯ ಮಾನ್ಯರು ಆಗಮಿಸುವರು.
ಸದಾಶಿವ ಹಿರೇಮಠ