Advertisement

ರಾಮಮಂದಿರಕ್ಕೆ ಅರ್ಪಿಸಲಿರುವ ಬೆಳ್ಳಿ ಇಟ್ಟಿಗೆ ಅ.6ರಂದು ದಾವಣಗೆರೆಗೆ ಆಗಮನ

03:42 PM Oct 04, 2020 | keerthan |

ದಾವಣಗೆರೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮ ಮಂದಿರಕ್ಕೆ ಸಮರ್ಪಿಸಲು ಸಿದ್ಧವಾಗಿರುವ 15 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆಯನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಅ. 6ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದರು.

Advertisement

ಅವರು ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಮಾಹಿತಿ ನೀಡಿದರು. ಬೆಳ್ಳಿ ಇಟ್ಟಿಗೆ ಅ.6ರಂದು ಬೆಳಿಗ್ಗೆ 10.30ಕ್ಕೆ ನಗರದ ವೆಂಕಟೇಶ್ವರ ವೃತ್ತದಲ್ಲಿ ಆಗಮಿಸಲಿದೆ. ಇಟ್ಟಿಗೆಯನ್ನು ಶ್ರೀರಾಮ ರಥದಲ್ಲಿಟ್ಟು ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಪುಷ್ಪಾರ್ಚನೆ ಮಾಡುವರು. ಬಳಿಕ ಪ್ರಮುಖ ಬೀದಿಗಳಲ್ಲಿ ರಥದ ಮೆರವಣಿಗೆ, ಬೈಕ್ ರ್ರ್ಯಾಲಿ ನಡೆಯಲಿದೆ ಎಂದರು.

ಇದನ್ನೂ ಓದಿ:“ಸನಾತನ ಧರ್ಮ ಸಂಸ್ಕೃತಿ ಮರೆಯಬೇಡಿ’: ಶ್ರೀ ಶಿವಾನಂದ ಭಾರತೀ ಸ್ವಾಮೀಜಿ ಸಲಹೆ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಸಮರ್ಪಿಸಲು 11 ಲಕ್ಷ ರೂ. ಗಳಲ್ಲಿ ಬೆಳ್ಳಿ ಇಟ್ಟಿಗೆಯನ್ನು ಕೊಲ್ಲಾಪುರದಲ್ಲಿ ತಯಾರಿಸಲಾಗಿದೆ. ಇಟ್ಟಿಯಲ್ಲಿ ಶ್ರೀರಾಮನ ಚಿತ್ರ, ಮಂದಿರ ಕೆತ್ತನೆ ಮಾಡಿಸಲಾಗಿದೆ. ನಗರಕ್ಕೆ ಶ್ರೀರಾಮ ರಥಯಾತ್ರೆ ಬಂದ (1990ರಲ್ಲಿ) ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಎಂಟು ಜನರ ಹೆಸರನ್ನು ಇಟ್ಟಿಗೆ ಮೇಲೆ ಬರೆಸಲಾಗಿದೆ. ಸ್ವಾಗತ ಕಾರ್ಯಕ್ರಮ ಬಳಿಕ ಇಟ್ಟಿಗೆಯನ್ನು ಸುರಕ್ಷಿತವಾಗಿಟ್ಟು ರಾಷ್ಟ್ರೀಯ ಮುಖಂಡರ ಸಲಹೆ ಮೇರೆಗೆ ಅದನ್ನು ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಯಶವಂತರಾವ್ ಜಾಧವ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next