Advertisement
ಇದೇ ವ್ಯವಸ್ಥೆಯನ್ನು ಪುನಃ ಆರಂಭಿಸಲಾಗಿದೆ. ಆದರೆ, ತಾಂತ್ರಿಕದೋಷ ಕಾರಣ ಕೆಲವು ಗೊಂದಲಗಳಿಗೆ ಕಾರಣವಾಗಿದೆ. ಆನ್‌ಲೈನ್ ಮೂಲಕ ಹಣ ಪಾವತಿಸಲಾಗದ ರೀಲರ್‌ಗಳ ಪರಿಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಬೆಳೆಗಾರರು ಹರಾಜು ಮೊತ್ತಕ್ಕೆ ಒತ್ತಾಯಿಸಿದ ಘಟನೆ ನಡೆಯಿತು.
Related Articles
Advertisement
ಜಾರಿ ದಿನದಂದೇ ಗೊಂದಲ : ರಾಜ್ಯದ ರೇಷ್ಮೆ ಮಾರುಕಟ್ಟೆಗಳ ಸುಧಾರಣಾ ಕ್ರಮದ ಭಾಗವಾಗಿ ಸರ್ಕಾರ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ ವಿದ್ಯುನ್ಮಾನ ತೂಕ ವ್ಯವಸ್ಥೆ, ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದ್ದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹರಾಜು ಪ್ರಕ್ರಿಯೆ ಮುಗಿದ ನಂತರ ಹರಾಜಾದ ರೇಷ್ಮೆ ಗೂಡನ್ನು ತೂಕಹಾಕಲಾಗುತ್ತದೆ. ಈ ಮೊದಲು ತೂಕ ಹಾಕಿದ ನಂತರಹರಾಜು ಮೊತ್ತವನ್ನು ನಿರ್ಧರಿಸಿ ರೀಲರ್‌ಗಳಿಗೆ ತಿಳಿಸಲಾಗುತ್ತಿತ್ತು. ತದ ನಂತರ ರೀಲರ್‌ಗಳು ಬೆಳೆಗಾರರಿಗೆ ಚೆಕ್, ನಗದು ಇತ್ಯಾದಿ ಮೂಲಕ ಹಣ ಪಾವತಿಸುತ್ತಿದ್ದರು.ಆದರೆ ಈ ಪದ್ಧತಿಯಲ್ಲಿ ವಿಶ್ವಾಸದ ಮೇಲೆ ಗೂಡು ಕೊಟ್ಟ ನಂತರ ಹರಾಜು ಮೊತ್ತ ಪಾವತಿಯಾಗದೆ ತೊಂದರೆಅನುಭವಿಸಿದ ಪ್ರಸಂಗಗಳು ನಡೆದಿದ್ದವು. ಹೀಗಾಗಿ ರೀಲರ್ ಗಳು ಹರಾಜಿನಲ್ಲಿ ಭಾಗವಹಿಸುವ ಮುನ್ನ ಗೂಡುಮಾರುಕಟ್ಟೆ ಉಪನಿರ್ದೇಶಕರ ಬ್ಯಾಂಕ್ ಖಾತೆಗೆ ಹಣವನ್ನು ಚೆಕ್, ನಗದು ಮೂಲಕ ಜಮೆ ಮಾಡಿ ಹರಾಜಿನಲ್ಲಿ ಭಾಗವಹಿಸುವ ವ್ಯವಸ್ಥೆ ಜಾರಿಯಾಗಿತ್ತು. 2 ವರ್ಷಗಳ ಹಿಂದೆ ಉಪನಿರ್ದೇಶಕರ ಖಾತೆಯಿಂದ ಲಕ್ಷಾಂತರ ರೂ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಿರಲೇ ಇಲ್ಲ. ಈ ಕಹಿ ಘಟನೆ ರಾಮನಗರ ಮಾರುಕಟ್ಟೆಗೆ ಕಪ್ಪು ಚುಕ್ಕೆಯಾಗಿತ್ತು.ಹೀಗಾಗಿ ರಾಜ್ಯ ಸರ್ಕಾರ ವಿದ್ಯುನ್ಮಾನ ತೂಕ, ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆ ಸುಧಾರಣೆಗೊಳಿಸಿ ಫೆ.7ರಿಂದ ಜಾರಿ ಮಾಡಲು ನಿರ್ಧರಿಸಿದೆ.
ಸರ್ಕಾರ ವ್ಯವಸ್ಥೆ ಮಾಡಬೇಕಿದೆ : ಇಡೀ ಏಷ್ಯಾದಲ್ಲೇ ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿಅತಿ ಹೆಚ್ಚು ವಹಿವಾಟು ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಳೆಗಾರರು ಇಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಹರಾಜಿಗೆ ಬರುತ್ತಾರೆ. ಇತ್ತೀಚಿನಲ್ಲಿ ದಾಖಲೆ ಮೊತ್ತಕ್ಕೆ ರೇಷ್ಮೆಗೂಡುಹರಾಜು ಆಗುತ್ತಿದೆ. ತೀರಾ ಇತ್ತೀಚೆಗೆ ಕೆ.ಜಿ.ಗೂಡಿಗೆ 1043 ರೂ. ಹರಾಜು ಆಗಿದೆ. ಇತಿಹಾಸದಲ್ಲೇ ಇದು ಅತಿ ಹೆಚ್ಚು ಹರಾಜು ಮೊತ್ತ. ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯನ್ನು ವಿಶ್ವದರ್ಜೆಗೆ ಏರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಚನ್ನಪಟ್ಟಣದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಮುಂದಾಗಿದೆ. ಆದರೆ ತಾಂತ್ರಿಕದೋಷ ತಲೆ ದೋರಿದಂತೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ರೀಲರ್‌ಗಳು ಮತ್ತು ರೇಷ್ಮೆ ಬೆಳೆಗಾರರು ಒತ್ತಾಯಿಸಿದ್ದಾರೆ.
ಇ-ಪೇಮೆಂಟ್, ಇ-ವೇಮಂಟ್ ವ್ಯವಸ್ಥೆಯಲ್ಲಿ ಭಾಗವಹಿಸಲು ರೀಲರ್‌ಗಳ ಕಡೆಯಿಂದ ಅಭ್ಯಂತರವೇನಿಲ್ಲ. ಆದರೆ ತಾಂತ್ರಿಕದೋಷಗಳಿಗೂ ರೀಲರ್‌ಗಳನ್ನೇ ಬೊಟ್ಟುಮಾಡುವುದು ಸರಿಯಲ್ಲ. ರೈತರ ಹಿತಕ್ಕೆ ರೀಲರ್ ಗಳು ಸ್ಪಂದಿಸುತ್ತಿದ್ದೇವೆ. – ಮುಹೀಬ್ ಪಾಷಾ, ಅಧ್ಯಕ್ಷರು ರೀಲರ್‌ಗಳ ಸಂಘ, ರಾಮನಗರ
ಮಾರುಕಟ್ಟೆಯಲ್ಲಿ ಸೋಮವಾರದಿಂದ ಆನ್ ಲೈನ್‌ಪೇಮೆಂಟ್ ಜಾರಿಗೆ ತರಲಾಗಿತ್ತು. ಆದರೆ, ಬ್ಯಾಂಕ್ ಸರ್ವರ್, ತಾಂತ್ರಿಕ ಸಮಸ್ಯೆವುಂಟಾಗಿದೆ. –ಮಾರಪ್ಪ, ಉಪನಿರ್ದೇಶಕ, ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ರಾಮನಗರ
ಆನ್‌ಲೈನ್ ಪೇಮೆಂಟ್‌ನಲ್ಲಿ ತಾಂತ್ರಿಕ ದೋಷಕಾಣಿಸಿಕೊಂಡಿದೆ. ಹಾಗಾಗಿ ಯಥಾಸ್ಥಿತಿಯಲ್ಲಿಗೂಗಲ್ ಪೇ ಹಾಗೂ ಪೋನ್ ಪೇ, ಹಣ ನೀಡುವ ಮೂಲಕ ವ್ಯವಹಾರ ಮಾಡಲಾಗಿದೆ. – ರವಿ, ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ, ರಾಮನಗರ