Advertisement
ರೇಷ್ಮೆಯು ಫ್ಯಾಷನ್ ಲೋಕದಲ್ಲಿ ತನ್ನದೇ ಆಕರ್ಷಣೆಯಿದೆ. ರೇಷ್ಮೆಯ ನೂಲುಗಳು, ಅನಾದಿಕಾಲದಿಂದಲೂ ಸೌಂದರ್ಯದ ರಾಯಭಾರಿಗಳಾಗಿವೆ. ರೇಷ್ಮೆ ಎಂದಾಕ್ಷಣ ಐಷಾರಾಮಿ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದರೆ, ಆ ನೂಲಿನ ಜಾದೂ ಕೇವಲ ಸೀರೆಗಷ್ಟೇ ಸೀಮಿತವಾದುದಲ್ಲ.
Related Articles
Advertisement
ಸರಳ ಸುಂದರ ಬಳೆಗಳುರೇಷ್ಮೆ ದಾರದ ಬಳೆಗಳು ನೋಡಲು ಸರಳವಾದರೂ ಅಂದವಾಗಿ ಕಾಣುತ್ತದೆ. ಇದಕ್ಕೆ ರೇಷ್ಮೆ ದಾರಗಳ ಜೊತೆಗೆ ಬಾಲ್‌ಚೈನ್‌ಗಳನ್ನು ವಕ್ರವಾಗಿ ಸುತ್ತುವುದರಿಂದ ನೋಡಲು ಸುಂದರವಾಗಿ ಕಾಣುತ್ತದೆ. ಇವನ್ನು ದಿನನಿತ್ಯ ಬಳಸಬಹುದಾಗಿದೆ. ಕಣ್ಮನ ಸೆಳೆವ ಇಯರ್ ರಿಂಗ್ಸ್
ಇದಕ್ಕೆ ಬಾಲ್‌ಚೈನ್‌ಗಳಿಗಿಂತ ಸ್ಟೋನ್‌ಗಳು, ಕ್ರಿಸ್ಟಲ್‌ಗಳು, ಹಾಫ್ ಪರ್ಲ್ಗಳು ಮೊದಲಾದವುಗಳನ್ನು ರೇಷ್ಮೆ ದಾರಗಳ ಜೊತೆ ಪೋಣಿಸುತ್ತಾರೆ. ಕಿವಿ ಓಲೆಗಳಲ್ಲಿರುವ ನಾನಾ ವಿಧದಲ್ಲಿನ ಜುಮುಕಿ ಮತ್ತು ಸ್ಟ್ರಡ್‌ಗಳನ್ನು ರೇಷ್ಮೆ ದಾರಗಳಿಂದ ಮಾಡಿರುತ್ತಾರೆ. ಇದರಿಂದ ಮಾಡಿದ ಜುಮುಕಿಗಳಿಗೆ ಬೇಡಿಕೆ ಹೆಚ್ಚಾಗುತ್ತಿವೆ. ಇದು ಮದುವೆ ಹಾಗೂ ಸಮಾರಂಭಗಳಲ್ಲಿ ಅತಿಶಯವಾಗದಂಥ ಲುಕ್ ನೀಡುತ್ತದೆ. ಅತ್ಯಾಕರ್ಷಕ ಬ್ರೇಸ್‌ಲೆಟ್ಸ್
ರೇಷ್ಮೆ ನೂಲಿನಿಂದ ತಯಾರಿಸಿದ ಬ್ರೇಸ್‌ಲೆಟ್‌ಗಳಿಗೆ ಮಣಿಗಳನ್ನು ಹಾಕುವುದರಿಂದ ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಈ ಮಣಿಗಳನ್ನು ವುಡನ್ ಬೀಡ್ಸ್‌ಗಳಿಂದ ತಯಾರಿಸುತ್ತಾರೆ. ಇದು ನೋಡಲು ಅದ್ದೂರಿಯಾಗಿ ಕಾಣುತ್ತದೆ. ಇತ್ತೀಚೆಗೆ ಬಂದ ಈ ಆಭರಣಗಳು ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯವಾಗಿದೆ. ಸೆಲೆಬ್ರಿಟಿಯರೂ ಇವಕ್ಕೆ ಮನಸೋತಿದ್ದಾರೆ. ಪ್ರಶಸ್ತಿ ಸಮಾರಂಭಗಳಲ್ಲಿ, ಕಾರ್ಯಕ್ರಮಗಳಲ್ಲಿ ರೇಷ್ಮೆ ನೂಲಿನ ಆಭರಣಗಳನ್ನು ಧರಿಸಿ ಮಿಂಚುತ್ತಿದ್ದಾರೆ. ಇದನ್ನು ಸ್ವತಃ ಮನೆಯಲ್ಲಿಯೇ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಿಕೊಳ್ಳಬಹುದು. ಇವೆಲ್ಲದರ ಜೊತೆಗೆ ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ರಾಖೀ ಮಾಡಲೂ ಈ ದಾರಗಳನ್ನು ಬಳಸಲಾಗುತ್ತಿದೆ. ರೇಷ್ಮೆ ನೂಲಿನಿಂದ ತಯಾರಿಸಿದ ರಾಖೀಗಳು ನೋಡಲು ತುಂಬಾ ಮುದ್ದು ಮುದ್ದು. ನಿಧಿ ಹೆಗಡೆ, ಕಾಗೇರಿ