Advertisement

ರೇಷ್ಮೆ ಬೆಲೆ ಏರಿಕೆ: ಸಂಕಷ್ಟದಲ್ಲಿ ನೇಯ್ಗೆ ಉದ್ಯಮ

05:31 PM Feb 17, 2020 | Suhan S |

ದೊಡ್ಡಬಳ್ಳಾಪುರ : ರೇಷ್ಮೆ ಬೆಲೆ ಏರಿಕೆ ಹಾಗೂ ಮಾರುಕಟ್ಟೆಯ ವೈಪರೀತ್ಯಗಳಿಂದಾಗಿ ರೇಷ್ಮೆ ನಗರಿಗೆ ಸ್ವಾಗತ ಎಂದು ಕಮಾನು ಮೂಲಕ ಊರಿಗೆ ಸ್ವಾಗತಿಸುತ್ತಿದ್ದ ದೊಡ್ಡಬಳ್ಳಾಪುರ ನಗರದಲ್ಲೀಗ, ರೇಷ್ಮೆ ಬಟ್ಟೆ ತಯಾರಿಕೆ ಕುಸಿಯುತ್ತಿದ್ದು, ನೇಕಾರರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ.

Advertisement

ಬೆಲೆ ಏರಿಕೆ : ಇತ್ತೀಚೆಗೆ ಮಳೆ ಅಭಾವ, ಕೃಷಿ ಚಟುವಟಿಕೆಗಳ ಹಿನ್ನಡೆಯಿಂದಾಗಿ ಅಸರ್ಮಕ ರೇಷ್ಮೆಪೂರೈಕೆಯಿಂದಾಗಿ ರೇಷ್ಮೆ ಬೆಲೆ ದಿನೇ ದಿನೇ ಏರುತ್ತಿದೆ. ಪ್ರಸ್ತುತ ದೇಸೀ ಕಚ್ಚಾ ರೇಷ್ಮೆ ಬೆಲೆ ಒಂದು ಕೆಜಿಗೆ 3,800 ಆಗಿದೆ. ಸಿದ್ಧ ರೇಷ್ಮೆ ಬೆಲೆ 4,200 ಇದೆ. ಈಗಾಗಲೇ ಉದ್ಯಮ ಸಂಕಷ್ಟ ಎದುರಿಸುತ್ತಿದ್ದು, ಸಣ್ಣ ನೇಕಾರರು ರೇಷ್ಮೆ ಬಟ್ಟೆಗಳನ್ನು ನೇಯುವುದನ್ನು ಬಿಟ್ಟಿದ್ದಾರೆ. ರೇಷ್ಮೆ ಬಟ್ಟೆ ತಯಾರಿಸುವವರು ಬೆರಳೆಣಿಕೆ ಮಂದಿಯಾಗಿದ್ದು, ಅವರೂ ವಿದಾಯ ಹೇಳುವ ಪರಿಸ್ಥಿತಿಯಲ್ಲಿದ್ದಾರೆ. ರೇಷ್ಮೆ ಬಟ್ಟೆ ತಯಾರಿಕೆಗೆ ಇಡೀ ದೇಶದಲ್ಲಿಯೇ ಹೆಸರು ಗಳಿಸಿದ್ದ ದೊಡ್ಡಬಳ್ಳಾಪುರದಲ್ಲಿ ಸುಮಾರು 20 ಸಾವಿರ ಮಗ್ಗಗಳಿವೆ. ರೇಷ್ಮೆ ಸೇರಿದಂತೆ ಕೃತಕ ರೇಷ್ಮೆ, ಪಾಲಿಯೆಸ್ಟರ್‌ ಬಟ್ಟೆಗಳು ಇಲ್ಲಿ ತಯಾರಾಗುತ್ತಿವೆ. ಪಾಲಿಯೆಸ್ಟರ್‌ ಹಾಗೂ ಕೃತಕ ನೂಲು ಬೆಲೆಗಳೂ ಸಹ ಈ ಹಿಂದಿಗಿಂತ ಹೆಚ್ಚಾಗಿವೆ. ಈಗ ಗಗನಕ್ಕೇರಿದ ರೇಷ್ಮೆ ಬೆಲೆ, ನೇಯ್ದ ಬಟ್ಟೆಗೆ ಸೂಕ್ತ ಮಾರುಕಟ್ಟೆ ಬೆಲೆ ಇಲ್ಲದೇ ನೇಯ್ಗೆ ಉದ್ಯಮ ತತ್ತರಿಸುತ್ತಿರುವ ಪರಿಸ್ಥಿತಿ ಉದ್ಬವಿಸಿದೆ. ಸಾಧಾರಣವಾಗಿ ಒಂದು ಕೆಜಿಗೆ 3ಸಾವಿರ ರೂ.ಗಳಿದ್ದ ಕಚ್ಚಾ ರೇಷ್ಮೆ ಬೆಲೆ ಈಗ 4 ಸಾವಿರ ಮುಟ್ಟಿದೆ. ಆದರೆ ಇದಕ್ಕೆ ಪೂರಕವಾಗಿ ಬಟ್ಟೆ ಬೆಲೆ ಮಾತ್ರ ಹೆಚ್ಚಾಗಿಲ್ಲದೇ ನೇಕಾರರು ನಷ್ಟ ಅನುಭವಿಸುವಂತಾಗಿದೆ.

ರೇಷ್ಮೆ ಉತ್ಪಾದನೆಯ ಮಾಹಿತಿ : ನಮ್ಮ ದೇಶ ರೇಷ್ಮೆ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಪ್ರದೇಶಾನುಸಾರವಾಗಿ ದೇಶದಲ್ಲಿ ಪ್ರಮುಖವಾಗಿ ಮೂರು ತಳಿಯ ರೇಷ್ಮೆ ತಯಾರಾಗುತ್ತಿದೆ. ದೇಶದಲ್ಲಿ ಹೆಚ್ಚು ಹಿಪ್ಪು ನೇರಳೆ ರೇಷ್ಮೆ ಶೆ.72 ರಷ್ಟು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಬೆ„ವೋಲ್ಟಿàನ್‌ 4,613 ಮೆಟ್ರಿಕ್‌ ಟನ್‌, ಮಿಶ್ರ ತಳಿ ರೇಷ್ಮೆ 15,865 ಮೆಟ್ರಿಕ್‌ ಟನ್‌ ಸೇರಿ 20,478 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆಯಾಗುತ್ತಿದೆ.

ಉಳಿದಂತೆ ಟಸ್ಸಾರ್‌ 2,819 ಮೆಟ್ರಿಕ್‌ ಟನ್‌, ಎರಿ ಸ್ಪನ್‌ ಸಿಲ್ಕ್ 5,060 ಮೆಟ್ರಿಕ್‌ ಟನ್‌, ಮುಗಾ ರೇಷ್ಮೆ 166 ಮೆಟ್ರಿಕ್‌ ಟನ್‌ ಸೇರಿ ಒಟ್ಟು 28,523 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆಯಾಗುತ್ತಿದೆ. ಕರ್ನಾಟಕ ರೇಷ್ಮೆ ಕೃಷಿಗೆ ತನ್ನದೇ ಆದ ಚರಿತ್ರೆ ಹೊಂದಿದೆ. ದೇಶದ ಒಟ್ಟು ರೇಷ್ಮೆ ಉತ್ಪಾದನೆಯ ಶೇಕಡ 55 ರಷ್ಟನ್ನು ರಾಜ್ಯ ಒಂದೇ ಉತ್ಪಾದಿಸುತ್ತಿದೆ. ರಾಜ್ಯದಲ್ಲಿ 15 ಸಾವಿರ ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆಯಾಗುತ್ತಿದೆ.ರೇಷ್ಮೆ ಕೃಷಿ ಮುಖ್ಯವಾಗಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅಂದರೆ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸುತ್ತಮುತ್ತಲ ಪ್ರದೇಶ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿಯೂ ರೇಷ್ಮೆ ಕೃಷಿಗೆ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ ವಾರ್ಷಿಕ 28.5ಸಾವಿರ ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆಯಾಗುತ್ತಿದ್ದರೂ ಬೇಡಿಕೆಯ ಪ್ರಮಾಣ ಉತ್ಪಾದನೆಗಿಂತ ಅಧಿಕವಾಗಿ ಬೆಳೆಯುತ್ತಿದೆ. ಚೀನಾದಿಂದ ಸೂಮಾರು 5 ಸಾವಿರ ಮೆಟ್ರಿಕ್‌ ಟನ್‌ ರೇಷ್ಮೆ ಆಮದು ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ರೇಷ್ಮೆ ಮಂಡಲಿ ಹೆಚ್ಚು ರೇಷ್ಮೆ ಬೆಳೆಯಲು ಯೋಜನೆಗಳನ್ನು ರೂಪಿಸಿದೆಯಾದರೂ ಗುಣಮಟ್ಟದ ರೇಷ್ಮೆಗೆ ಹೆಚ್ಚಿನ ಒತ್ತು ನೀಡಬೇಕಿದೆ.

ರೇಷ್ಮೆ ಬೆಲೆ ಏರಿಕೆಗೆ ಕಾರಣ : ಸಾಧಾರಣವಾಗಿ ಮಾರ್ಚ್‌ ವೇಳೆಗೆ ರೇಷ್ಮೆ ಬೆಲೆ ಕಡಿಮೆಯಾಗುತ್ತದೆ. ಆದರೆ ಬರ, ನೀರಿನ ಸಮಸ್ಯೆ ಮೊದಲಾಗಿ ಕೃಷಿ ಉತ್ಪಾದನೆ ವೆಚ್ಚ ಹೆಚ್ಚಾಗುತ್ತಿರುವುದರ ಪರಿಣಾಮ ರೇಷ್ಮೆ ಬೆಲೆ ಇಳಿಮುಖವಾಗುವುದು ಅನುಮಾನ ಎನ್ನಲಾಗಿದೆ. ಗುಣಮಟ್ಟದ ರೇಷ್ಮೆ ನೀಡಿ:ನಮ್ಮ ದೇಶೀ ರೇಷ್ಮೆ ಎಳೆ ಇತರ ದೇಶಗಳ ರೇಷ್ಮೆಗಿಂತ ಗಟ್ಟಿತನ ಉಳಿಸಿಕೊಂಡಿರುವುದರಲ್ಲಿ ಎರಡು ಮಾತಿಲ್ಲ. ಆದರೆ ದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟು ರೇಷ್ಮೆ ಉತ್ಪಾದನೆ ಯಾಗುತ್ತಿಲ್ಲ. ಗುಣಮಟ್ಟದ ಬೆ„ವೊಲ್ಟಿàನ್‌ ತಳಿ ರೇಷ್ಮೆ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ನೇಕಾರರಿಗೆ ಕಡಿಮೆ ಬೆಲೆಯಲ್ಲಿ ರೇಷ್ಮೆಯನ್ನು ನೀಡಿದರೆ ಉದ್ಯಮ ಉಳಿಯುತ್ತದೆ ಎನ್ನುತ್ತಾರೆ ನೇಕಾರರು.

Advertisement

ದೇಶದಲ್ಲೇ ಕರ್ನಾಟಕಕ್ಕೆ ಎರಡನೇ ಸ್ಥಾನ :  ನಮ್ಮ ದೇಶ ರೇಷ್ಮೆ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಪ್ರದೇಶಾನುಸಾರವಾಗಿ ದೇಶದಲ್ಲಿ ಪ್ರಮುಖವಾಗಿ ಮೂರು ತಳಿಯ ರೇಷ್ಮೆ ತಯಾರಾಗುತ್ತಿದೆ. ದೇಶದಲ್ಲಿ ಹೆಚ್ಚು ಹಿಪ್ಪು ನೇರಳೆ ರೇಷ್ಮೆ ಶೆ.72 ರಷ್ಟು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಬೆ„ವೋಲ್ಟಿನ್‌ 4,613 ಮೆಟ್ರಿಕ್‌ ಟನ್‌, ಮಿಶ್ರ ತಳಿ ರೇಷ್ಮೆ 15,865 ಮೆಟ್ರಿಕ್‌ ಟನ್‌ ಸೇರಿ 20,478 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆಯಾಗುತ್ತಿದೆ. ಉಳಿದಂತೆ ಟಸ್ಸಾರ್‌ 2,819 ಮೆಟ್ರಿಕ್‌ ಟನ್‌, ಎರಿ ಸ್ಪನ್‌ ಸಿಲ್ಕ್ 5,060 ಮೆಟ್ರಿಕ್‌ ಟನ್‌, ಮುಗಾ ರೇಷ್ಮೆ 166 ಮೆಟ್ರಿಕ್‌ ಟನ್‌ ಸೇರಿ ಒಟ್ಟು 28,523 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆಯಾಗುತ್ತಿದೆ.

ಉದ್ಯಮಕ್ಕೆ ಸಂಕಷ್ಟ  : ರೇಷ್ಮೆ ಬೆಲೆ ವಿಪರೀತ ಏರಿಕೆಯಾಗಿದೆ. ಆದರೆ ಏರಿಕೆಯಾದ ರೇಷ್ಮೆ ಬೆಲೆಗೆ ಪೂರಕವಾಗಿ ಬಟ್ಟೆಗೆ ಬೆಲೆ ಸಿಗುತ್ತಿಲ್ಲ ಎನ್ನುವುದು ನೇಕಾರರ ಅಳಲು.ನೇಕಾರಿಕೆಯನ್ನು ಅವಲಂಬಿಸಿರುವ ಹುರಿಮಿಷನ್‌, ರೇಷ್ಮೆ ಬಣ್ಣ ಮಾಡುವ ಮಾಲೀಕರು ಹಾಗೂ ಕಾರ್ಮಿಕರಿಗೂ ಆತಂಕವುಂಟಾಗಿದೆ. ರೇಷ್ಮೆ ಬೆಲೆ ಹೆಚ್ಚಾದ ಕಾರಣ ಬಣ್ಣ ಮಾಡುವ ಕೆಲಸವೂ ಕಡಿಮೆಯಾಗುತ್ತಿದೆ ಎಂದು ರೇಷ್ಮೆ ಬಣ್ಣ ಮಾಡುವ ಪಾಪಯ್ಯ ಹೇಳುತ್ತಾರೆ. ಇದರೊಂದಿಗೆ ಇಂದಿನ ಆಧುನಿಕ ಯುಗದ ನವನವೀನ ಬಟ್ಟೆ ವಿನ್ಯಾಸಗಳು ಕಡಿಮೆ ಬೆಲೆಯನ್ನು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೆಚ್ಚಿನ ಬೆಲೆಯ ರೇಷ್ಮೆ ಬಟ್ಟೆ ಖರೀದಿಸಲು ಗ್ರಾಹಕರು ಬರುತ್ತಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಮೇಲೆ ನೇಯ್ಗೆ ಉದ್ಯಮದ ಮೇಲೆ ಪ್ರಭಾವ ಬಿದ್ದಿದ್ದು, ಲಾಭ ಕಾಣದಿದ್ದರೂ ತೆರಿಗೆ ಪಾವತಿಸುವ ಸ್ಥಿತಿ ಬಂದೊದಗಿದೆ.

ಸಿದ್ಧ ರೇಷ್ಮೆ ಒಂದು ಗ್ರಾಂಗೆ 5 ರೂಗಳಾಗಿದ್ದು ,ರೇಷ್ಮೆ ಚಿನ್ನದಂತಾಗಿದೆ.ಕಚ್ಚಾ ಮಾಲಿನ ಬೆಲೆ ಹೆಚ್ಚಾದರೂ ನೇಯ್ದ ಬಟ್ಟೆಗೆ ಸೂಕ್ತ ಬೆಲೆ ಸಿಕ್ಕರೆ ಪರವಾಗಿಲ್ಲ. ಕಲ್ಕತ್ತಾದ ಮಾರುಕಟ್ಟೆ ತೀವ್ರ ಕುಸಿತ ಕಂಡಿರುವುದು ಬಟ್ಟೆ ಬೆಲೆ ಕುಸಿಯಲು ಕಾರಣವಾಗಿದೆ. ರೇಷ್ಮೆ ಸೀರೆ ಮಾರುಕಟ್ಟೆಯಲ್ಲೂ, ಮಾರಾಟವಿಲ್ಲದೇ ಸಹಸ್ರಾರು ಸೀರೆಗಳು ದಾಸ್ತಾನು ಸೇರುತ್ತಿವೆ. ಒಂದು ಉತ್ತಮ ಮಟ್ಟದ ರೇಷ್ಮೆ ಸೀರೆಗೆ ಸುಮಾರು 150 ರೂ. ನಷ್ಟವಾಗುತ್ತಿದೆ  ಎಸ್‌.ಪ್ರಕಾಶ್‌.ರೇಷ್ಮೆ ನೇಕಾರ

 

 –ಡಿ.ಶ್ರೀಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next