Advertisement

ಹೊಸ ಮಾರ್ಗಸೂಚಿ ಪ್ರಕಟ

12:24 PM Sep 11, 2020 | Suhan S |

ರಾಮನಗರ: 2020-21ನೇ ಸಾಲಿನ ರೇಷ್ಮೆ ಗೂಡಿಗೆ ಪ್ರೋತ್ಸಾಹಧನ ಪಡೆಯಲು ರೇಷ್ಮೆ ಗೂಡು ಬೆಳೆಗಾರರು ಹಲವಾರು ದಾಖಲೆಗಳನ್ನು ನೀಡಲು ಸಾಧ್ಯವಾಗದ ಕಾರಣ ಬೆಳೆಗಾರರ ಮನವಿ ಪರಿಗಣಿಸಿ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ನೂತನ ಮಾರ್ಗ ಸೂಚಿಗಳ ಸುತ್ತೋಲೆ ಹೊರಡಿಸಿದ್ದಾರೆ.

Advertisement

ನೂತನ ಮಾರ್ಗಸೂಚಿ ಅನ್ವಯ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಲಭ್ಯವಿರುವ ಹರಾಜು ದಾಖಲೆಗಳ ಅನ್ವಯ ಮಾರಾಟವಾದ ರೇಷ್ಮೆ ಗೂಡಿಗೆ (ಕಳಪೆ ಗೂಡು ಮತ್ತು ಇತರೆ ರಾಜ್ಯಗಳ ರೇಷ್ಮೆ ಬೆಳೆಗಾರರ ರೇಷ್ಮೆ ಗೂಡು ಹೊರತುಪಡಿಸಿ) ಪ್ರತಿ ಕೆ.ಜಿ.ಮಿಶ್ರತಳಿ ರೇಷ್ಮೆ ಗೂಡಿಗೆ 30 ರೂ, ದ್ವಿತಳಿ ರೇಷ್ಮೆ ಗೂಡಿಗೆ ತಲಾ ಕೆ.ಜಿ.ಗೆ 50 ರೂ., ನಂತೆ ಪ್ರೋತ್ಸಾಹ ಧನ ವಿತರಿಸಲು ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪ್ರತಿ 100 ರೋಗ ರಹಿತ ಮೊಟ್ಟೆ/ ಜಾಕಿ ಹುಳುಗಳಿಗೆ ಗೂಡಿನ ಇಳುವರಿ ಕುರಿತು ನಿಗದಿಪಡಿಸಿರುವ ಮಾನದಂಡಗಳಿಗೆ 1.4.2020 ರಿಂದ 30.09.2020ರ ಅವಧಿಗೆ ಮಾತ್ರ ವಿನಾಯ್ತಿ ನೀಡಲಾಗಿದೆ ಎಂದು ಸಹ ಆಯುಕ್ತರು ತಾವು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

 ಏಕೆ ಈ ಬದಲಾವಣೆ?: ಕೋವಿಡ್‌ 19 ಲಾಕ್‌ಡೌನ್‌ ಕಾರಣ ರೇಷ್ಮೆ ಗೂಡಿನಧಾರಣೆಗಳು ತೀವ್ರ ಕುಸಿತವುಂಟಾಗಿತ್ತು. ಬೆಳೆಗಾರರು ಸರ್ಕಾರದ ಮೊರೆ ಹೋಗಿದ್ದರು. ಮನವಿಗೆ ಸ್ಪಂದಿಸಿದ 2020- 21ನೇ ಸಾಲಿಗೆ ರಕ್ಷಣಾತ್ಮಕ ದರಕ್ಕೆ ಬದಲಾಗಿ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿತು. ಆದರೆ, ಈ ಪ್ರೋತ್ಸಾಹಧನ ಪಡೆಯಲು ರೇಷ್ಮೆ ಬೆಳೆಗಾರರು ಜಾಕಿ

ಕೇಂದ್ರಗಳಲ್ಲಿ ಪಡೆದ ಮೊಟ್ಟೆ,ಮಾರುಕಟ್ಟೆ ಹರಾಜು ಚೀಟಿ ಹಾಜರು ಪಡಿಸಲು ಸೂ ಚಿಸಲಾಗಿತ್ತು. ಆದರೆ ಬಹುತೇಕ ರೈತರಬಳಿ ಈ ಚೀಟಿ ಇಲ್ಲ. ಅಲ್ಲದೇ, ಚಾಕಿ ಸಾಕಣೆ ಕೇಂದ್ರಗಳು, ಮಾರುಕಟ್ಟೆಗಳಿಗೆ ಪುನಃ ಭೇಟಿ ಕೊಟ್ಟು ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ರೇಷ್ಮೆ ಬೆಳೆಗಾರರು ಮಾರ್ಗಸೂಚಿಗಳ ಬದಲಾವಣೆಗೆ ಮನವಿ ಮಾಡಿದ್ದರು. ಬೆಳೆಗಾರರ ಪರಿಸ್ಥಿತಿ ಅರ್ಥಮಾಡಿಕೊಂಡ ಆಯುಕ್ತರು, ಮಾರುಕಟ್ಟೆಯಲ್ಲಿ ಲಭ್ಯವಿರುವ ಹರಾಜು ದಾಖಲೆ ಅನ್ವಯ ಪ್ರೋತ್ಸಾಹ  ಧನ ವಿತರಣೆಗೆ ಆದೇಶ ಹೊರಡಿಸಿದ್ದಾರೆ. ಆಯುಕ್ತರ ಈ ಸುತ್ತೋಲೆ ಬಗ್ಗೆ ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಗೌತಂ, ಕಾರ್ಯದರ್ಶಿ ರವಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next