ದೇಶದ ವಿವಿಧೆಡೆಯ ಕಲಾಕಾರ, ಕೈಮಗ್ಗ ಪರಿಣಿತರ “ಸಿಲ್ಕ್ ಆ್ಯಂಡ್ ಕಾಟನ್’ ಬಟ್ಟೆಗಳ ಉತ್ಸವ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿನ ಹೆಸರಾಂತ ಕುಶಲಕರ್ಮಿಗಳು, ಕೈಮಗ್ಗದವರು ಬಹಳ ಮುತುವರ್ಜಿ ವಹಿಸಿ ಸಿದ್ಧಪಡಿಸಿದ ವಿಶೇಷ ವಿನ್ಯಾಸ ಮತ್ತು ಗುಣಮಟ್ಟದ ವಸ್ತ್ರಗಳು ವೀಕ್ಷಣೆಗೆ ಲಭ್ಯವಿರುತ್ತವೆ.
ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಗಳಂತೆ ಇರುವ ಪ್ರತಿಭಾವಂತ ಕುಶಲಕರ್ಮಿಗಳು ಹತ್ತಿ ಮತ್ತು ರೇಷ್ಮೆ ದಾರಗಳನ್ನು ಬಳಸಿ, ಕೈಮಗ್ಗದಿಂದ ಹೆಣಿಗೆ ಮಾಡಿದ ಸೀರೆ ಮತ್ತಿತರ ಅಪರೂಪದ ವಸ್ತ್ರಗಳು ಇಲ್ಲಿ ಪ್ರದರ್ಶಿತವಾಗಲಿವೆ. ಮೇಳವು ಜೂನ್ 17ರಿಂದ 25ರ ವರೆಗೆ ನಡೆಯಲಿದೆ. ಹ್ಯಾಂಡ್‌ಲೂಮ್‌ಗಳು, ರೇಷ್ಮೆ ಮತ್ತು ಹತ್ತಿ, ಶುದ್ಧ ರೇಷ್ಮೆ ಸೀರೆಗಳು, ಆಭರಣಗಳು, ಹಿತ್ತಾಳೆ ವಸ್ತುಗಳು, ತಂಜಾವೂರು ಪೇಂಟಿಂಗ್ ಇತ್ಯಾದಿ 60ಕ್ಕೂ ಹೆಚ್ಚು ಮಳಿಗೆಗಳು ಮತ್ತು ಭಾರತದಾದ್ಯಂತದ 80ಕ್ಕೂ ಹೆಚ್ಚು ಕುಶಲಕರ್ಮಿಗಳು ಪಾಲ್ಗೊಳ್ಳಲಿದ್ದಾರೆ.
ಬೆಳ್ಳಿ ಆಭರಣ, ಸೆಣಬಿನ ಚಪ್ಪಲಿಗಳೂ ಇಲ್ಲಿವೆ. ಪಲ್ಲುಗಳು ಸೆಣಬು ಮತ್ತು ಚಿನ್ನದ ಕೈರಿಸ್‌ಗಳಿಂದ ಅಲಂಕೃತಗೊಂಡಿರುತ್ತವೆ. ಉಡುಗೊರೆ ಉತ್ಪನ್ನಗಳು ಮೇಳದಲ್ಲಿ ಯಥೇತ್ಛವಾಗಿರಲಿವೆ.
ಎತ್ತಿನ ಗಾಡಿಯ ಜಾಲಿ ಮತ್ತು ವಿವಿಧ ಆಕಾರದ ಆಕರ್ಷಕ ತೈಲ ಅಳತೆಗಳು, ಜಾಲಿ ಕುಸುರಿಯೊಂದಿಗಿನ ನಾಣ್ಯದ ಪೆಟ್ಟಿಗೆಗಳು ಮತ್ತು ಅಡಿಕೆ ಕತ್ತರಿಗಳ ಸಹಿತ ಪ್ರಾಚೀನ ಮಾದರಿಯ ಹಿತ್ತಾಳೆ ಪಾತ್ರೆಗಳ ಸಂಗ್ರಹವಿದೆ. ಕ್ಯಾನ್‌ವಾಸ್ ಮೇಲಿನ ಪೇಂಟಿಂಗ್‌ಗಳು ಇನ್ನೊಂದು ಆಕರ್ಷಣೆಯಾಗಿದೆ. ಪೆಂಡೆಂಟ್‌ಗಳು, ಬಳೆಗಳು, ಪದಕಗಳು, ಮತ್ತು ಹೇರ್ ಪಿನ್‌ಗಳ ಶ್ರೇಣಿ, ಜತೆಗೆ ಮುತ್ತಿನ ಆಭರಣ ಮತ್ತು ಕುಂಕುಮ ಡಬ್ಬಿಗಳ ಶ್ರೇಣಿ ಇರುತ್ತದೆ.
ಎಲ್ಲಿ?: ಚಿತ್ರಕಲಾ ಪರಿಷತ್,ಕುಮಾರಕೃಪಾ ರಸ್ತೆ
ಯಾವಾಗ?: ಜೂ.17 ರಿಂದ
ಜೂ.25 ಸಂಪರ್ಕ: 9964365282