Advertisement

ಕ್ವಾ. ಫೈನಲ್‌ ಗೆ ಸ್ವಿಟೋಲಿನಾ, ಸಬಲೆಂಕಾ

02:33 AM Aug 02, 2019 | Team Udayavani |

ಕ್ಯಾಲಿಫೋರ್ನಿಯಾ: ಅಗ್ರ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಮತ್ತು ದ್ವಿತೀಯ ಶ್ರೇಯಾಂಕದ ಅರಿನಾ ಸಬಲೆಂಕಾ ಇಲ್ಲಿ ನಡೆಯುತ್ತಿರುವ ‘ಸಿಲಿಕಾನ್‌ ವ್ಯಾಲಿ ಕ್ಲಾಸಿಕ್‌’ ಟೆನಿಸ್‌ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ.

Advertisement

ಸ್ವಿಟೋಲಿನಾ ಉಕ್ರೇನಿನ ದರಿಯಾ ಸಬಲೆಂಕಾ ಅವರನ್ನು 6-3, 6-1 ನೇರ ಸೆಟ್‌ಗಳಿಂದ ಮಣಿಸಿದರು. ಕ್ವಾರ್ಟರ್‌ ಫೈನಲ್ನಲ್ಲಿ ಇವರ ಎದುರಾಳಿ ಗ್ರೀಕ್‌ನ ಮರಿಯಾ ಸಕ್ಕರಿ. ಇನ್ನೊಂದು ಪಂದ್ಯದಲ್ಲಿ ಸಕ್ಕರಿ 4-6, 6-4, 6-2ರಿಂದ ಜಪಾನಿನ ಯುವ ಆಟಗಾರ್ತಿ ಮಾಯೊ ಹಿಬಿ ಅವರನ್ನು ಹಿಮ್ಮೆಟ್ಟಿಸಿದರು.

ಕಳೆದ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಸ್ವಿಟೋಲಿನಾ ನೇರ ಸೆಟ್‌ಗಳಿಂದ ಸಕ್ಕರಿಗೆ ಸೋಲುಣಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಸಕ್ಕರಿ ಕಾಯುತ್ತಿದ್ದಾರೆ.

ಬೆಲರೂಸ್‌ನ ಅರಿನಾ ಸಬಲೆಂಕಾ 6-3, 6-3ರಿಂದ ಕೊಕೊ ವಾಂಡೆವೇಗ್‌ ವಿರುದ್ಧ ಜಯ ಸಾಧಿಸಿದರು. ಸಬಲೆಂಕಾ ಎದುರಾಳಿ ಸ್ಪೇನಿನ ಕಾರ್ಲಾ ಸೂರೆಜ್‌ ನವಾರೊ. ಅವರು ಬೆಥನಿ ಮಾಟೆಕ್‌ ಸ್ಯಾಂಡ್ಸ್‌ಗೆ 3-6, 6-1, 6-2 ಅಂತರದ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next