Advertisement

ಸೈಲೆಂಟ್‌ ಸಂಡೇ!

12:37 PM Jul 20, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ರವಿವಾರ ಬಹುತೇಕ ಜನ ಹೊರಗೆ ಬಾರದಿರುವ ಹಿನ್ನೆಲೆಯಲ್ಲಿ ಮೂರನೇ ವಾರದ ಸಂಡೇ ಲಾಕ್‌ಡೌನ್‌ ಬಹುತೇಕ ಯಶಸ್ವಿಯಾಯಿತು.

Advertisement

ನಿತ್ಯ ನಾನಾ ಕಾರಣಗಳಿಂದ ಓಡಾಡುತ್ತಿದ್ದ ಜನ ರವಿವಾರ ಮಾತ್ರ ರಸ್ತೆಯಲ್ಲಿ ಸುಳಿಯಲಿಲ್ಲ. ಇದರಿಂದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಇನ್ನು ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ಕೂಡ ಮುಚ್ಚಿದ್ದರಿಂದ ವ್ಯಾಪಾರ ವಹಿವಾಟು ಇರಲೇ ಇಲ್ಲ. ಬಹುತೇಕ ವಾಹನ ಸಂಚಾರ ಕಡಿಮೆಯಾಗಿತ್ತು. ಇದರಿಂದ ಪೊಲೀಸರಿಗೂ ಯಾವುದೇ ಕೆಲಸ ಇಲ್ಲದಂತಾಗಿತ್ತು. ಬಹುತೇಕ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಅಡ್ಡಿಗಟ್ಟುವ ಮೂಲಕ ಸಂಚಾರ ಬಂದ್‌ ಮಾಡಲಾಗಿತ್ತು. ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಕೂಡ ಇರಲಿಲ್ಲ. ವಾಹನ ಸವಾರರು ಕೆಲವೆಡೆ ಖುದ್ದು ಬ್ಯಾರಿಕೇಡ್‌ ಅಡ್ಡ ಸರಿಸಿ ಪ್ರಯಾಣಿಸಿದ್ದು ಕಂಡು ಬಂತು. ಬಿಡಾಡಿ ದನಗಳು ವಶಕ್ಕೆ: ಇದೇ ಅವಕಾಶವನ್ನು ಬಳಸಿಕೊಂಡ ಪೊಲೀಸ್‌ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಟ್ಟರು. ಸುಮಾರು 34 ಜಾನುವಾರುಗಳನ್ನು ಹಿಡಿದು ಸಾಗಿಸಲಾಯಿತು.

ವಾರಸುದಾರರಿಗೆ ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಮತ್ತೆ ಮತ್ತೆ ಬೀದಿಗೆ ಬಿಡುತ್ತಿರುವುದು ಸರಿಯಲ್ಲ. ಇದರಿಂದ ವಾಹನ ಸವಾರರಿಗೆ ಅನಗತ್ಯ ತೊಂದರೆಯಾಗುತ್ತದೆ. ಅಪಘಾತಗಳು ಸಂಭವಿಸಿ ಸವಾರರ ಜೀವಕ್ಕೆ ಆಪತ್ತು ಬರಲಿದೆ. ಈ ಬಾರಿ ವಶಪಡಿಸಿಕೊಂಡ ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಮರಳಿ ನೀಡುವುದಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next