Advertisement

ಬಸ್‌ ಚಾಲಕನ ಮೌನ ಪ್ರತಿಭಟನೆ!

02:40 AM Jun 27, 2018 | Team Udayavani |

ಪುತ್ತೂರು: ಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವುದು ಸಾಮಾನ್ಯ. ಆದರೆ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕ್‌ ಮಾಡಿದ್ದರೆ ಮಾತ್ರ ಕೋಪ ಒತ್ತರಿಸಿ ಬರುವುದು. ಇಂತಹ ಒಂದು ಸಂದರ್ಭಕ್ಕೆ ಮಂಗಳವಾರ ಪುತ್ತೂರು ಪೇಟೆ ಸಾಕ್ಷಿಯಾಯಿತು. ಕಾರನ್ನು ಮುಖ್ಯ ರಸ್ತೆಯಲ್ಲೇ ಪಾರ್ಕ್‌ ಮಾಡಿ, ಚಾಲಕ ಹೋಗಿದ್ದರು. KSRTC ಬಸ್‌ ಗೆ ಮುಂದೆ ಹೋಗಲು ಸ್ಥಳವೇ ಇಲ್ಲದಂತಾಗಿತ್ತು. ಹಾರ್ನ್ ಹೊಡೆದು, ಗದ್ದಲ ಸೃಷ್ಟಿಸಬಹುದಿತ್ತು. ಚಾಲಕ ಅದಾವುದನ್ನೂ ಮಾಡದೆ ಬಸ್‌ ಎಂಜಿನ್‌ ಆಫ್ ಮಾಡಿ, ಸುಮ್ಮನೆ ಕುಳಿತರು. ಬಸ್‌ ಹಿಂಬದಿ ವಾಹನಗಳ ಸರತಿ ಸಾಲು ಬೆಳೆಯುತ್ತಾ ಸಾಗಿತು. ಅಷ್ಟು ಹೊತ್ತಿಗೆ ಕಾರಿನ ಚಾಲಕ ಓಡೋಡಿ ಬಂದು ಕಾರನ್ನು ತೆರವು ಮಾಡಿದರು. ಬಳಿಕ ಬಸ್‌ ಮುಂದೆ ಸಾಗಿತು. ಟ್ರಾಫಿಕ್‌ ನಲ್ಲಿ ಸಿಲುಕಿದ್ದ ವಾಹನಗಳ ಸಾಲೂ ಕರಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next