Advertisement

ಸಚಿವ ಸ್ಥಾನ ನೀಡಲು ಒತ್ತಾ ಯಿಸಿ ಮೌನ ಮೆರವಣಿಗೆ

05:02 PM Jun 11, 2018 | Team Udayavani |

ಧಾರವಾಡ: ಸಮ್ಮಿಶ್ರ ಸರಕಾರದಲ್ಲಿ ಎಚ್‌.ಕೆ. ಪಾಟೀಲ್‌, ರಾಮಲಿಂಗಾರೆಡ್ಡಿ ಹಾಗೂ ಎಸ್‌.ಆರ್‌. ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ರಡ್ಡಿ ಸಮಾಜ ಹಾಗೂ ಅವರ ಅಭಿಮಾನಿ ಬಳಗದ ವತಿಯಿಂದ ನಗರದಲ್ಲಿ ರವಿವಾರ ಮೌನ ಪ್ರತಿಭಟನೆ ನಡೆಸಲಾಯಿತು. ನಗರದ ಕಡಪಾ ಮೈದಾನದಿಂದ ಆರಂಭಗೊಂಡ ಮೆರವಣಿಗೆ ಆಲೂರು ವೆಂಕಟರಾವ್‌ ವೃತ್ತದ ವರೆಗೆ ಸಾಗಿತು. ಬಳಿಕ ವೃತ್ತದಲ್ಲಿ ಜಮಾಯಿಸಿದ್ದ ಜನರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

Advertisement

ಪಾಲಿಕೆ ಸದಸ್ಯ ರಘು ಲಕ್ಕಣ್ಣವರ ಮಾತನಾಡಿ, ಎಚ್‌.ಕೆ. ಪಾಟೀಲ್‌, ಎಸ್‌.ಆರ್‌. ಪಾಟೀಲ್‌, ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಮೈತ್ರಿ ಸರಕಾರದ ಸಚಿವ ಸಂಪುಟದಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗಿದೆ. ನಮ್ಮ ನಾಯಕರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಡಾ| ಗೌಡರ್‌, ಡಾ| ಎಚ್‌.ಸಿ. ಮಕಣಿ, ಎಸ್‌. ಎಸ್‌. ಕಣವಿ, ಸಂದೀಪ, ಮಹಾವೀರ ಜೈನ, ಪ್ರತಾಪ ಚೌಹಾಣ ಮೊದಲಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next