Advertisement

Sikkim: ಕಳಪೆ ಗುಣಮಟ್ಟವೇ ಅಣೆಕಟ್ಟು ಕೊಚ್ಚಿ ಹೋಗಲು ಕಾರಣ: ಸಿಕ್ಕಿಂ ಸಿಎಂ

12:46 PM Oct 06, 2023 | Team Udayavani |

ಗ್ಯಾಂಗ್ಟಕ್: ಚುಂಗ್‌ತಾಂಗ್ ಅಣೆಕಟ್ಟು ಕೊಚ್ಚಿ ಹೋಗಲು ಕಳಪೆ ಗುಣಮಟ್ಟದ ಕಾಮಗಾರಿಯೇ ಕಾರಣ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಹೇಳಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿದ ಮುಖ್ಯಮಂತ್ರಿ, ಲ್ಹೋನಕ್ ಸರೋವರದಲ್ಲಿನ ಮೇಘಸ್ಫೋಟದಿಂದ ತೀಸ್ತಾ ನದಿಯಲ್ಲಿನ ಹಠಾತ್ ಪ್ರವಾಹಕ್ಕೆ ಕಾರಣವಾಯಿತು, ತೀಸ್ತಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಂತೆ ನೀರಿನ ಹರಿವು ಚುಂಗ್‌ತಾಂಗ್ ಅಣೆಕಟ್ಟಿನ ಕಡೆಗೆ ತಿರುಗಿದೆ ಈ ವೇಳೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾದಂತೆ ಅಂಡೆಕಟ್ಟಿನ ಗುಣಮಟ್ಟ ಕಳಪೆಯಾಗಿದ್ದ ಪರಿಣಾಮ ನೀರಿನ ಒತ್ತಡ ತಡೆಯಲಾಗದೆ ಕೊಚ್ಚಿ ಹೋಗಿದೆ ಇದರಿಂದ ಹೆಚ್ಚಿನ ಮಟ್ಟದಲ್ಲಿ ಅವಾಂತರ ಸೃಷ್ಟಿಯಾಗಿದೆ. ಒಂದು ವೇಳೆ ಆಣೆಕಟ್ಟು ಒಡೆಯದೇ ಇದ್ದಲ್ಲಿ ಹೆಚ್ಚಿನ ಪ್ರಮಾಣದ ಅಪಾಯ ಕಡಿಮೆ ಮಾಡಬಹುದಿತ್ತು ಎಂದರು.

ಆಣೆಕಟ್ಟು ಒಡೆದ ಪರಿಣಾಮ ಹೆಚ್ಚಿನ ಪ್ರಮಾಣದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಯಿತು ಜೊತೆಗೆ ಸಾಕಷ್ಟು ಹಾನಿ ಸಂಭವಿಸಿತು ಎಂದಿದ್ದಾರೆ.

ಭೀಕರ ಪ್ರವಾಹದಿಂದ ರಾಜ್ಯದ ಉತ್ತರ ಭಾಗದ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ ಎಂದು ಹೇಳಿದರು.

13 ಸೇತುವೆಗಳು ನಾಶ:
ಪ್ರವಾಹದಿಂದಾಗಿ ರಾಜ್ಯದಲ್ಲಿ ಒಟ್ಟು 13 ಸೇತುವೆಗಳು ನಾಶವಾಗಿದ್ದು, ಮಂಗನ್ ಜಿಲ್ಲೆಯೊಂದರಲ್ಲೇ ಎಂಟು ಸೇತುವೆಗಳು ಕೊಚ್ಚಿ ಹೋಗಿವೆ. ಗ್ಯಾಂಗ್‌ಟಾಕ್‌ನಲ್ಲಿ ಮೂರು ಮತ್ತು ನಾಮ್ಚಿಯಲ್ಲಿ ಎರಡು ಸೇತುವೆಗಳು ನಾಶವಾಗಿವೆ.

Advertisement

ಶೋಧ ಕಾರ್ಯ ಮುಂದುವರಿಕೆ:
ಬುರ್ಡಾಂಗ್ ಪ್ರದೇಶದಿಂದ ನಾಪತ್ತೆಯಾಗಿದ್ದ 23 ಸೇನಾ ಸಿಬ್ಬಂದಿಗಳಲ್ಲಿ, ಏಳು ಮಂದಿಯ ಮೃತದೇಹಗಳನ್ನು ವಿವಿಧ ಪ್ರದೇಶಗಳಿಂದ ಪತ್ತೆಹಚ್ಚಲಾಗಿದ್ದು, ಇದರಲ್ಲಿ ಒಬ್ಬರನ್ನು ರಕ್ಷಿಸಲಾಗಿದೆ ಮತ್ತು ಉಳಿದ 15 ಮಂದಿ ಸೇನಾ ಸಿಬ್ಬಂದಿಗಳ ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Leo: ‘ಲಿಯೋ’ ಟ್ರೈಲರ್ ಅಬ್ಬರ… ವಿಜಯ್ ಅಭಿಮಾನಿಗಳಿಂದ ಚಿತ್ರಮಂದಿರದ ಆಸನಗಳು ಧ್ವಂಸ

Advertisement

Udayavani is now on Telegram. Click here to join our channel and stay updated with the latest news.

Next