Advertisement

ಇಂದು ದೋವಲ್‌ರಿಂದ ಚೀನ ಎನ್‌ಎಸ್‌ಎ ಭೇಟಿ

08:30 AM Jul 28, 2017 | Team Udayavani |

ಬೀಜಿಂಗ್‌/ಹೊಸದಿಲ್ಲಿ: ಭಾರತ ಮತ್ತು ಚೀನ ನಡುವೆ ಡೋಕ್ಲಂ ಗಡಿ ತಂಟೆ ನಡುವೆಯೇ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ಚೀನ ಪ್ರವಾಸ ಕೈಗೊಂಡಿದ್ದಾರೆ. ಬ್ರಿಕ್ಸ್‌ ರಾಷ್ಟ್ರಗಳ ಸಮ್ಮೇಳನದ ನಡುವೆ ದೋವಲ್‌ ಚೀನ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾಂಗ್‌ ಜೇಚಿ ಜತೆ ಮಾತುಕತೆ ನಡೆಸಿದರು. ಈ ವೇಳೆ ಸಿಕ್ಕಿಂ ವ್ಯಾಪ್ತಿಯಲ್ಲಿ ಉಂಟಾಗಿರುವ ಗಡಿ ತಂಟೆ ಬಗ್ಗೆ ಚರ್ಚೆಯಾಗಿದೆಯೇ ಎಂಬ ವಿಚಾರದ ಬಗ್ಗೆ ತತ್‌ಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ. ಎರಡೂ ರಾಷ್ಟ್ರಗಳ ಎನ್‌ಎಸ್‌ಎಗಳ ನಡುವಿನ ಅಧಿಕೃತ ಭೇಟಿ ಶುಕ್ರವಾರ ನಡೆಯಲಿದೆ. ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನೂ ಅವರು ಭೇಟಿಯಾಗಲಿದ್ದಾರೆ.  ಹೊಸದಿಲ್ಲಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ತಂಟೆ ಬಗೆಹರಿಸಲು ಮಾರ್ಗಗಳು ಇವೆ ಎಂದಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next