Advertisement

ಸಿಕ್ಖ್ ಮಹಿಳೆ ಸಾಧನೆ

10:19 AM May 21, 2018 | Harsha Rao |

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ ನಗರ ಪೊಲೀಸ್‌ ಇಲಾಖೆ (ಎನ್‌ವೈಪಿಡಿ)ಗೆ ರುಮಾಲು ಧರಿಸಿದ ಸಿಕ್ಖ್ ಮಹಿಳೆಯೊಬ್ಬರ ನೇಮಕವಾಗಿದೆ. 

Advertisement

ಎನ್‌ವೈಪಿಡಿಯ “ಆ್ಯಕ್ಸಿಲರಿ ಪೊಲೀಸ್‌ ವಿಭಾಗದ ಅಧಿಕಾರಿಯಾಗಿ ಸಿಕ್ಖ್ ಮಹಿಳೆ ಗುಸೋìಚ್‌ ಕೌರ್‌ ನೇಮಕವಾಗಲಿದ್ದಾರೆ. ಇತರರು ಕೂಡ ಕಾನೂನು ಪಾಲನೆಯ ಕರ್ತವ್ಯಕ್ಕೆ ಸೇರಿ ಕೊಳ್ಳಲು ಇದೊಂದು ಪ್ರೇರಣೆಯಾಗಲಿದೆ ಎಂದು ಅಮೆರಿಕದಲ್ಲಿರುವ “ಸಿಕ್ಖ್ ಅಧಿಕಾರಿಗಳ ಒಕ್ಕೂಟ’ ಟ್ವೀಟ್‌ ಮಾಡಿ, ಫೋಟೋ ಬಿಡುಗಡೆ ಮಾಡಿದೆ. ಕೌರ್‌ ಮತ್ತು ಇತರ ಅಧಿಕಾರಿಗಳು ನ್ಯೂಯಾರ್ಕ್‌ ನಗರ ಪೊಲೀಸ್‌ ಅಕಾಡೆಮಿ ಯಿಂದ ತರಬೇತಿ ಪಡೆದು ತೇರ್ಗಡೆಯೂ ಆಗಿದ್ದಾರೆ. ನ್ಯೂಯಾರ್ಕ್‌ ನಗರ ಪೊಲೀಸ್‌ ಆಯುಕ್ತ ಜೇಮ್ಸ್‌ ಒ ನಿಲ್‌ 2016ರಲ್ಲಿ ನೀಡಿದ ಮಾಹಿತಿ ಪ್ರಕಾರ ಸಿಕ್ಖ್ ಸಮುದಾಯದ 160 ಮಂದಿ ವಿವಿಧ ಹಂತಗಳಲ್ಲಿ ಅಧಿಕಾರಿಗಳಾಗಿದ್ದಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹದೀìಪ್‌ ಸಿಂಗ್‌ ಪುರಿ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next