Advertisement

ಕನಕದಾಸರಿಂದ ಉಡುಪಿ ಕೃಷ್ಣನಿಗೆ ಮಹತ್ವ

09:28 PM Dec 31, 2019 | Team Udayavani |

ಪಿರಿಯಾಪಟ್ಟಣ: ಶೂದ್ರ ಸಮಾಜಗಳು ಸ್ವಾಭಿಮಾನದ ಸೂಜಿಗಳಾಗದಿದ್ದರೆ ಉಳಿಗಾಲವಿಲ್ಲ ಎಂದು ಶಿವಯೋಗಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು. ಪಟ್ಟಣದ ಗೋಣಿಕೊಪ್ಪಲು ರಸ್ತೆಯ ಜೂನಿಯರ್‌ ಕಾಲೇಜಿನಲ್ಲಿ ಕುರುಬರ ಸಂಘದಿಂದ ಆಯೋಜಿಸಿದ್ದ 532 ನೇ ಕನಕ ಜಯಂತಿ ಹಾಗೂ ಕುವೆಂಪು ಜಯಂತಿಯಲ್ಲಿ ಮಾತನಾಡಿದರು.

Advertisement

ಸ್ವಾರ್ಥಕ್ಕೆ ಕೈಮುಗಿಯುವ ಜನ ಕನಕರನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಳಂಬ ತೋರುತ್ತಿದ್ದಾರೆ. ಕೇವಲ ಮಾತು ಕೇಳಿಸಿಕೊಂಡು ಮನೆ ಸೇರುವುದರಿಂದ ಯಾವುದೇ ಸಮಾಜವು ಆಳುವ ವರ್ಗವಾಗುವುದಿಲ್ಲ. ಉಡುಪಿ ಕೃಷ್ಣನಿಗೆ ಮಹತ್ವ ಹೆಚ್ಚಾಗಿದ್ದು ಕನಕದಾಸರಿಂದ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದಲ್ಲಿ ಕನಕದಾಸರ ಕೀರ್ತನೆಗಳಿವೆ. ಆದ್ದರಿಂದ ಯಾರೂ ಜಾತಿಯ ನಿಟ್ಟಿನಲ್ಲಿ ಕೆಲಸ ಮಾಡಬೇಡಿ.

ಎಲ್ಲಾ ಮಹನೀಯರು ಸಮಾಜದ ಒಳಿತಿಗಾಗಿ ದುಡಿದಿದ್ದಾರೆ. ಅವರೆಲ್ಲರ ಉದ್ದೇಶ ಒಂದೇ ಅದು ಮೌಡ್ಯತ್ವವನ್ನು ಹೊಡೆದೋಡಿಸುವುದಾಗಿದೆ ಎಂದರು. ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ, 25 ವರ್ಷಗಳ ಹಿಂದೆ ಕುರುಬರು ಎಂದು ಹೇಳಿಕೊಳ್ಳಲು ಅಂಜುತ್ತಿದ್ದ ನಾವುಗಳು ಇಂದು ಸ್ವಾಭಿಮಾನಿಗಳಾಗಿರುವುದು ಹೆಮ್ಮಯ ಸಂಗತಿ. ಇತಿಹಾಸ ಮತ್ತು ಪುರಾಣಗಳಲ್ಲಿ ಕುರುಬರ ಹೆಜ್ಜೆ ಗುರುತುಗಳಿವೆ ಎಂದರು.

ಕರ್ನಾಟಕಕ್ಕೆ ಒಂದು ಇತಿಹಾಸವಿದ್ದರೆ, ಸಾಂಸ್ಕೃತಿಕ ನಗರಿ ಮೈಸೂರಿಗೆ ಒಂದು ಇತಿಹಾಸವಿದೆ. ಅದರಲ್ಲೂ ಪಿರಿಯಾಪಟ್ಟಣ ನನಗೆ ಹಾಗೂ ಸಿದ್ದಾರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ಪಡೆಯಲು ಸಹಕಾರಿಯಾದ ಪುಣ್ಯಭೂಮಿ. ಅಂದು ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರ ಬಂದಾಗ ಅವರನ್ನು ಕಾಂಗ್ರೆಸ್‌ಗೆ ಸೇರಿಸಲು ಪಂಚ ಪಾಂಡವರಲ್ಲಿ ಬೀಮನಂತೆ ಮುಂದೆ ಬಂದವರು ನಮ್ಮ ಹಿರಿಯಣ್ಣ ಕೆ.ವೆಂಕಟೇಶ್‌ ಎಂದು ಸ್ಮರಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿದ್ದ ಜಾತೀಯತೆ ಮೌಡ್ಯ ಮತ್ತು ಅಂಧಕಾರವನ್ನು ಹೋಗಲಾಡಿಸಲು ಕನಕದಾಸರು ಕೀರ್ತನೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡರು ಎಂದರು. ಪ್ರಗತಿಪರ ಚಿಂತಕ ಪೊ.ನಿಖೀತ್‌ ರಾಜ್‌, ಇಂದು ದೇಶವು ಉಡುಪಿ ಕೃಷ್ಣ ಮಠದತ್ತ ತಿರುಗಿದೆ. ಆದರೆ ಅಂದೇ ಉಡುಪಿಯ ಕೃಷ್ಣ ಮಠ ಕನಕರತ್ತ ತಿರುಗಿತ್ತು. ಒ

Advertisement

ಮ್ಮೆ ಉಡುಪಿಗೆ ಬಂದಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರು ಕನಕರ ಚಮತ್ಕಾರವನ್ನು ಹಾಡಿ ಹೊಗಳಿದ್ದರು ಎಂದು ನೆನೆದರು. ಪಟ್ಟಣದ ಎಪಿಎಂಸಿ ಆವರಣದಿಂದ ವಿವಿಧ ಕಲಾ ತಂಡಗಳ ಪೂರ್ಣಕುಂಭ ಮೇಳ ಹಾಗೂ ಮೆರವಣಿಗೆ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಲ್ಲಿಲೇಖ್ಯ ಮಠದ ಚನ್ನಬಸವ ಸ್ವಾಮೀಜಿ, ಕಗ್ಗುಂಡಿ ಹರಳಯ್ಯ ಮಠದ ಸ್ವಾಮೀಜಿ, ಕೆ.ವೆಂಕಟೇಶ್‌, ಸಿ.ಎಚ್‌. ವಿಜಯಶಂಕರ್‌, ಶಾಸಕ ಕೆ. ಮಹದೇವ್‌ ಮಾತನಾಡಿದರು.

ಈ ವೇಳೆ ಜಿಪಂ ಸದಸ್ಯಯರಾದ ಸಿ.ಮಣಿ, ಕೌಶಲ್ಯ, ಮಾಜಿ ಸದಸ್ಯ ಡಿ.ಎ.ಜವರಪ್ಪ, ಎಸ್‌.ಎ.ಶಿವಣ್ಣ, ಕುರುಬರ ಸಂಘದ ಅಧ್ಯಕ್ಷ ವಿ.ಜೆ.ಅಪ್ಪಾಜಿಗೌಡ, ಕಾರ್ಯದರ್ಶಿ ಎಂ.ಎಂ.ರಾಜೇಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಜಯಕುಮಾರ್‌, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಮಿ, ಮುಖಂಡರಾದ ನಿಲಂಗಾಲ ಜಯಣ್ಣ, ಲಕ್ಷ್ಮಣ, ಪುಟ್ಟರಾಜು, ಬೀಮಣ್ಣ, ರೈತಪರ ಹೋರಾಟಗಾರ ಶ್ರೀನಿವಾಸ್‌ ಆರ್‌.ತುಂಗ, ದೊರೆಕೆರೆ ನಾಗೇಂದ್ರ, ಹರಿಲಾಪುರ ಗಣೇಶ್‌, ಗುರುಮೂರ್ತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next