Advertisement

ದೇವಸ್ಥಾನದ ಮಹತ್ವ

05:40 AM Dec 22, 2018 | |

1. ದೇವಸ್ಥಾನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ ದೇವತೆಯ ಬಗ್ಗೆ ನಮ್ಮ ಭಕ್ತಿಭಾವವು ಹೆಚ್ಚಾಗಲು ಸಹಾಯವಾಗುತ್ತದೆ.

Advertisement

2. ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮುಂತಾದ ಧಾರ್ಮಿಕ ವಿಧಿಗಳ ಸಮಯದಲ್ಲಿ ಹಾಗೂ ಆರತಿಯ ಸಮಯದಲ್ಲಿ ದೇವತೆಯ ಪತ್ರಕಗಳು (ದೇವತೆಯ ಸೂಕ್ಷ್ಮಾತಿ ಸೂಕ್ಷ್ಮ ಚೈತನ್ಯಕಣಗಳು) ದೇವತೆಯ ಮೂರ್ತಿಯ ಕಡೆಗೆ ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಇಂಥ ಸಮಯದಲ್ಲಿ ನಾವು ದೇವಸ್ಥಾನದಲ್ಲಿ ಉಪಸ್ಥಿತರಿದ್ದರೆ ನಮಗೆ ಆ ಪತ್ರಕಗಳಿಂದ ಲಾಭವಾಗುತ್ತದೆ.

3. ಸ್ವಯಂಭೂ ಅಥವಾ ಜಾಗೃತ ದೇವಸ್ಥಾನಗಳಲ್ಲಿ (ಉದಾ. 12 ಜ್ಯೋತಿರ್ಲಿಂಗಗಳು) ಹಾಗೂ ಸಂತರು ಕಟ್ಟಿಸಿರುವ ದೇವಸ್ಥಾನಗಳಲ್ಲಿ ಶಕ್ತಿ ಮತ್ತು ಚೈತನ್ಯದ ಪ್ರಮಾಣವು ಹೆಚ್ಚಿರುವುದರಿಂದ ಇಂಥ ದೇವಸ್ಥಾನಗಳ ದರ್ಶನಕ್ಕೆ ಹೋದರೆ ನಮಗೆ ಹೆಚ್ಚಿನ ಲಾಭವಾಗುತ್ತದೆ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ “ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?’)

Advertisement

Udayavani is now on Telegram. Click here to join our channel and stay updated with the latest news.

Next