Advertisement

ಎರಡೂ ಕೈಗಳಿಂದ ಬರೆದು ಜಾಹ್ನವಿ ದಾಖಲೆ!

09:23 PM Dec 29, 2021 | Team Udayavani |

ಭೋಪಾಲ: ಬಲಗೈ ಜೊತೆಗೆ ಎಡಗೈನಲ್ಲೂ ಏಕಕಾಲದಲ್ಲಿ ಬರೆಯುವ ಮೂಲಕ ಮಧ್ಯಪ್ರದೇಶದ ಜಬಲ್ಪುರದ ಯುವತಿ ಜಾಹ್ನವಿ ರಾಮ್ತೆಕರ್ ವಿಶ್ವ ದಾಖಲೆಯ ಜತೆಗೆ ಹಾರ್ವರ್ಡ್‌ ವರ್ಲ್ಡ್ ರೆಕಾರ್ಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

Advertisement

ನವದೆಹಲಿಯ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸವನ್ನು ಅವರು ಮಾಡುತ್ತಿದ್ದಾರೆ. ಅವರು 10ನೇ ತರಗತಿಯಲ್ಲಿದ್ದಾಗ ಅನಾರೋಗ್ಯದಿಂದಾಗಿ ಬಲಗೈನಲ್ಲಿ ಬರೆಯುವುದು ಸಾಧ್ಯವಾಗುತ್ತಿರಲಿಲ್ಲವಂತೆ. ಆದರೆ ಪರೀಕ್ಷೆ ಹತ್ತಿರವಿದ್ದ ಹಿನ್ನೆಲೆಯಲ್ಲಿ ಆಕೆ ಎಡಗೈನಲ್ಲೇ ಬರೆಯುವುದನ್ನು ಅಭ್ಯಾಸ ಮಾಡಿ, ಪರೀಕ್ಷೆ ಬರೆದು ಪಾಸ್‌ ಆಗಿದ್ದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ಹಿನ್ನೆಲೆ:  ಮಾರ್ಚ್‌ನಲ್ಲಿ ಜೆಇಇ ಪರೀಕ್ಷೆ?

ನಂತರ ಎರಡೂ ಕೈನಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿದ್ದಾರೆ. ಕೇವಲ ಬರೆಯುವುದು ಮಾತ್ರವಲ್ಲದೆ ಎರಡೂ ಕೈಗಳಲ್ಲಿ ಚಿತ್ರವನ್ನೂ ಬಿಡಿಸುವ ಹಿಡಿತ ಅವರಿಗೆ ಇದೆ. ಇತ್ತೀಚೆಗೆ 1 ನಿಮಿಷದಲ್ಲಿ ಎರಡೂ ಕೈಗಳಲ್ಲಿ ಏಕಕಾಲದಲ್ಲಿ ಒಟ್ಟು 36 ಸಹಿ ಹಾಕಿದ್ದು, ಅದು ಹಾರ್ವ್‌ರ್ಡ್‌ ವರ್ಲ್ಡ್ ರೆಕಾರ್ಡ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next