Advertisement

ಸಹಿ ತಂದ ಆಪತ್ತು; ಹೆಂಡ್ತಿ ಕಥೆ, ಗಂಡನ ಕಾಸು

06:15 AM Apr 20, 2018 | |

“ಇದು ಜಿದ್ದಾಜಿದ್ದಿಯ ಕಥೆ’
– ಹೀಗೆಂದು ಒಂದು ಕ್ಷಣ ಮೌನವಾದರು ಗುರು ಮದೆÉàಸರ. ತಮ್ಮ ಚೊಚ್ಚಲ ನಿರ್ದೇಶನದ “ಸಿಗ್ನೇಚರ್‌’ ಚಿತ್ರದ ಬಗ್ಗೆ ಮಾಹಿತಿ ನೀಡಲು ತಮ್ಮ ತಂಡದೊಂದಿಗೆ ಮಾಧ್ಯಮದ ಮುಂದೆ ಬಂದಿದ್ದರು. ಅನೇಕ ವರ್ಷಗಳಿಂದ ಚಿತ್ರಗಳಿಂದ ಕೆಲಸ ಮಾಡಿದ ಅನುಭವವಿರುವ ಗುರು ಈಗ “ಸಿಗ್ನೇಚರ್‌’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಮಯೂರಿ ಈ ಸಿನಿಮಾದ ನಾಯಕಿ. ರಂಜಿತ್‌ ಎಂಬ ಹೊಸ ಮುಖ ನಾಯಕ. 

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗುರು, “ಇದು ಕಾಲ್ಪನಿಕ ಜಗತ್ತಿನ ಚಿತ್ರ. ಒಂದು ಸಹಿಯಿಂದ ಶೂನ್ಯದಲ್ಲಿ ಇದ್ದವನು ಮೇಲಕ್ಕೆ ಎತ್ತರಕ್ಕೆ ಬೆಳೆಯಬಹುದು. ಅದೇ ಸಹಿಯಿಂದ ಎತ್ತರದಲ್ಲಿದ್ದವನು ಪಾತಾಳಕ್ಕೂ ಬೀಳಬಹುದು. ಇದೊಂದು ರೀತಿ ಜಿದ್ದಾಜಿದ್ದಿ ಕಥೆ. ಜಿಲ್ಲಾಧಿಕಾರಿ ಮತ್ತು ಮಾಜಿ ಮುಖ್ಯಮಂತ್ರಿಯ ನಡುವೆ ಕಥೆ ಸಾಗುತ್ತದೆ. ಒಂದು ಸಹಿಯಿಂದ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಒಂದೇ ಹಂತದಲ್ಲಿ ಕುಂದಾಪುರದ ಮಂದಾರ್ತಿಯಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ವಿವರ ಕೊಟ್ಟರು.

ಚಿತ್ರದಲ್ಲಿ ಮಯೂರಿ ನಾಯಕಿ. ಇಲ್ಲಿ ಅವರು ಸೋನಾ ಎಂಬ ಮಾಜಿ ಸಿಎಂ ಮಗಳಾಗಿ ನಟಿಸುತ್ತಿದ್ದಾರೆ. ಜೀವನದಲ್ಲಿ ಸಂಗಾತಿ ಬಂದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಮತ್ತು ಅದನ್ನು ಹೇಗೆ ನಿಭಾಹಿಸುತ್ತಾಳೆ ಎಂಬ ಅಂಶದೊಂದಿಗೆ ಪಾತ್ರ ಸಾಗುತ್ತದೆಯಂತೆ. ಚಿತ್ರದಲ್ಲಿ ನಿರ್ಮಾಪಕರ ಮಗಳು ಬೇಬಿ ಮಾನ್ಯಾಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಂಜಿತ್‌ ನಾಯಕರಾಗಿ ನಟಿಸುತ್ತಿದ್ದು, ಇಲ್ಲಿ ಅವರು ಮಧ್ಯಮ ವರ್ಗದ ಹುಡುಗನಾಗಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ ವಿ. ಮನೋಹರ್‌ ಸಂಗೀತ ನೀಡುತ್ತಿದ್ದಾರೆ. “ಚಿತ್ರದ ಶೀರ್ಷಿಕೆ ತುಂಬಾ ಸೊಗಸಾಗಿದೆ. ಇದನ್ನು ನೆನಪನ್ನು ಮೂಡಿಸುವ ಸಹಿ ಎಂದಾದರೂ ಕರೆಯಬಹುದು. ಈಗ ಚಿತ್ರರಂಗ ಸಾಕಷ್ಟು ಬದಲಾಗಿದೆ. ಪ್ರೇಕ್ಷಕರು ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತಿದ್ದಾರೆ. ಒಂದು ಸಣ್ಣ ತಪ್ಪಾದರೂ ಅದನ್ನು ಎತ್ತಿ ತೋರಿಸುತ್ತಾರೆ. ಈ ಅಂಶಗಳನ್ನು ನಿರ್ದೇಶಕರು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ ಒಳ್ಳೆಯ ಸಿನಿಮಾ ಬರುತ್ತದೆ. ಒಬ್ಬ ನಿರ್ಮಾಪಕ ಗೆದ್ದರೆ ಅನೇಕರಿಗೆ ಅವಕಾಶ ಸಿಗುತ್ತದೆ’ ಎಂದರು. ಚಿತ್ರವನ್ನು ಕುಂದಾಪುರ ಮೂಲದ ಭಾಸ್ಕರ್‌ ಪೂಜಾರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅವರ ಪತ್ನಿ ಪೂರ್ಣಿಮಾ ಭಾಸ್ಕರ್‌ ಅವರ ಕಥೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next