Advertisement

ಶೀಘ್ರದಲ್ಲೇ ಸಿಗಂದೂರು ಉಳಿಸಿ ಬೃಹತ್‌ ಹೋರಾಟ

06:30 PM Nov 27, 2020 | Suhan S |

ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸರ್ಕಾರ ರಚಿಸಿರುವ ಸಲಹಾ ಸಮಿತಿ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರದ್ದುಗೊಳಿಸುವಂತೆಆಗ್ರಹಿಸಿ ಶೀಘ್ರದಲ್ಲೇ ಪಕ್ಷಾತೀತ, ಜಾತ್ಯತೀತವಾಗಿ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಿಗಂದೂರು ಉಳಿಸಿ ಹೋರಾಟ ಸಮಿತಿ ಉಪಾಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಸರ್ಕಾರ ಹಠಮಾರಿ ನಿಲುವು ತೆಗೆದುಕೊಳ್ಳುತ್ತಿದೆ. ಕಾಣದ ಕೈಗಳು ಸಿಗಂದೂರುದೇವಾಲಯವನ್ನು ಮುಜರಾಯಿ ಇಲಾಖೆಗೆಸೇರಿಸುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಇದನ್ನುಸಿಗಂದೂರು ಉಳಿಸಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಶೀಘ್ರದಲ್ಲೇ ಹೋರಾಟದ ದಿನಾಂಕವನ್ನು ನಿಗಪಡಿಸಲಾಗುವುದು. ಸಿಗಂದೂರು ಉಳಿಸಿ ಹೋರಾಟಕ್ಕೆ ದೇವಾಂಗ, ಸಾದುಶೆಟ್ಟಿ, ಉಪ್ಪಾರ, ಕುರುಬ, ಒಕ್ಕಲಿಗ, ಯಾದವ, ಮಡಿವಾಳ, ತಮಿಳು ಸಮಾಜ, ಬೋವಿ, ಸವಿತಾ ಸಮಾಜ, ಗಂಗಾಮತ, ವಿಶ್ವಕರ್ಮ ಸಮಾಜಗಳು ಬೆಂಬಲ ನೀಡಿವೆ.ಹೋರಾಟದ ಸಿದ್ಧತೆ ಬಗ್ಗೆ ಈಗಾಗಲೇ ಎಲ್ಲಾ ಸಮಾಜದ ಮುಖಂಡರ ಜೊತೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ. ಮತ್ತೂಂದು ಸುತ್ತಿನ ಸಭೆ ನಡೆಸಿ,ಹೋರಾಟ ದಿನಾಂಕ ನಿಗ ದಿಪಡಿಸಿ ಬೃಹತ್‌ ಹೋರಾಟ ನಡೆಸಲಾಗುತ್ತದೆ ಎಂದರು.

ಯಡಿಯೂರಪ್ಪನವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಿಗಂದೂರು ದೇವಸ್ಥಾನ,ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಈಗ ಅಲ್ಲಿ ಅರಣ್ಯ ಒತ್ತುವರಿಯಾಗಿದೆ ಎಂದು ಹೇಳುತ್ತಿದ್ದಾರೆ.ಅಭಿವೃದ್ಧಿಗೆ ಅನುದಾನ ಕೊಡುವಾಗ ಇದು ಅರಣ್ಯಜಾಗ ಎಂದು ನೆನಪಿರಲಿಲ್ವಾ, ಅಧಿಕಾರಿಗಳು ಏನು ದನ ಕಾಯುತ್ತಿದ್ರಾ ಎಂದು ಪ್ರಶ್ನಿಸಿದರು. ಯಡಿಯೂರಪ್ಪನವರದು ದೈವಭಕ್ತ ಕುಟುಂಬ. ದೇವರನ್ನು ನಂಬುವ ಯಡಿಯೂರಪ್ಪನವರು ಶಕ್ತಿದೇವತೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ವಿಚಾರದಲ್ಲಿ ಕೈ ಹಾಕಿದ್ದಾರೆ. ದೇವಿಯ ಶಾಪ ತಟ್ಟೇ ತಟ್ಟುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಮಾತನಾಡಿ, ಸಿಗಂದೂರು ದೇವಸ್ಥಾನ ಹಿಂದುಳಿದ ವರ್ಗದವರ ದೇವಸ್ಥಾನ. ಎಲ್ಲಾ ಸಮಾಜದವರು ದೇವಿಗೆ ನಡೆದುಕೊಳ್ಳುತ್ತಾರೆ.ನಾನು ಕೂಡ ದೇವಿಯ ಭಕ್ತ. ಸರ್ಕಾರ ಸಿಗಂದೂರುದೇವಸ್ಥಾನದ ವಿಚಾರದಲ್ಲಿ ಯಾಕೆ ಮೂಗುತೂರಿಸುತ್ತಿದೆ ಎಂದು ತಿಳಿಯುತ್ತಿಲ್ಲ. ಸರ್ಕಾರಕೂಡಲೇ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆಸೇರಿಸಬಾರದು. ಜಿಲ್ಲಾಧಿಕಾರಿ ನೇತೃತ್ವದಲ್ಲಿರಚಿಸಿರುವ ಸಲಹಾ ಸಮಿತಿ, ಮೇಲ್ವಿಚಾರಣಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು

Advertisement

ಆಗ್ರಹಿಸಿದರು. ಸಿಗಂದೂರು ಉಳಿಸಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಣೆ ಮಾಡಿದರು. ಪ್ರಗತಿಪರ ಹೋರಾಟಗಾರ ಕೆ.ಪಿ. ಶ್ರೀಪಾಲ್‌ ಮಾತನಾಡಿ, ಜಿಲ್ಲೆಯ ಹಂದಿಗೋಡುಸಮಸ್ಯೆಯ ವಿಚಾರವಾಗಿ ಸಮಿತಿ ರಚನೆ ಮಾಡಿಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಒಪ್ಪದಸರ್ಕಾರ ಸಿಗಂದೂರು ದೇವಾಲಯ ವಿಚಾರವಾಗಿ ಸಮಿತಿ ರಚನೆ ಮಾಡಿರುವುದು ಖಂಡನೀಯ ಎಂದರು.

ಸಿಗಂದೂರು ದೇವಸ್ಥಾನ ಟ್ರಸ್ಟಿನ ಹಣದ ಲೆಕ್ಕ ಕೇಳುವ ಸರ್ಕಾರ, ಮುಖ್ಯಮಂತ್ರಿಗಳ ಕುಟುಂಬದ ಒಡೆತನದ ಪ್ರೇರಣಾ ಟ್ರಸ್ಟಿನ ಲೆಕ್ಕವನ್ನುಕೊಡಿ ಎಂದು ಪ್ರಶ್ನಿಸಿದ ಅವರು, ದೇವಸ್ಥಾನದ ವಿಚಾರವಾಗಿ ಸರ್ಕಾರ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಗಂದೂರು ಉಳಿಸಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್‌. ಶ್ರೀಧರ್‌ ಹುಲ್ತಿಕೊಪ್ಪ, ಉಪಾಧ್ಯಕ್ಷ ಎಂ. ಶ್ರೀಕಾಂತ್‌, ಎಂ. ಗುರುಮೂರ್ತಿ, ಸಂಚಾಲಕ ಎಸ್‌. ರವಿಕುಮಾರ್‌, ಗೀತಾಂಜಲಿ ರತ್ನಾಕರ್‌, ಎನ್‌. ಮಂಜುನಾಥ್‌, ಜಂಟಿ ಕಾರ್ಯದರ್ಶಿ ಜಿ.ಡಿ. ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next