Advertisement
ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ 2015ನೇ ಪ್ರಶಸ್ತಿ ಬಹುಮಾನ ಪ್ರದಾನ ಸಮಾರಂಭದಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ಜಗತ್ತಿನಲ್ಲಿ ಮೌಡ್ಯಚಾರಣೆ ವಿಜೃಂಭಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕರು ಅತ್ಯಂತ ಎಚ್ಚರಿಕೆ ಯಿಂದ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸಬೇಕು ಎಂದರು.
Related Articles
Advertisement
ಪ್ರಶಸ್ತಿ ಪ್ರದಾನ: ಅನ್ವೇಷಣೆ ಪ್ರಕಾಶನ (ಅತ್ಯುತ್ತಮ ಪ್ರಕಾಶನ ಪ್ರಶಸ್ತಿ), ಡಾ.ಬಿ. ಶೇಷಾದ್ರಿ (ಡಾ.ಎಂ.ಎಂ.ಕಲಬರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ), ಶಶಿಕಲಾ ಬೆಳಗಲಿ (ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ), ಡಾ.ಎಸ್.ಪಿ. ಯೋಗಣ್ಣ (ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ), ಎಂ.ಎಂ. ಪಬ್ಲಿಕೇಷನ್ (ಕನ್ನಡ ಪುಸ್ತಕ ಸೊಗಸು ಪ್ರಥಮ ಬಹುಮಾನ), ಪಲ್ಲವ ಪ್ರಕಾಶನ (ದ್ವಿತೀಯ), ಅನಿಕೇತನ (ತೃತೀಯ ಬಹುಮಾನ) ಹಾಗೂ ಅನನ್ಯ ಪ್ರಕಾಶನದ ಮತ್ತೂಂದು ಮಹಾಭಾರತ ಕೃತಿಗೆ (ಮಕ್ಕಳ ಪುಸ್ತಕ) ಬಹುಮಾನ ನೀಡಲಾಯಿತು. ಬಿಡಿಮುತ್ತು ಕೃತಿಯ ಪುಟ ವಿನ್ಯಾಸಕ್ಕೆ ಯು.ಟಿ. ಸುರೇಶ್ ಅವರಿಗೆ ಪ್ರಥಮ ಹಾಗೂ “ಪೇಶಂಟ್ ಪಾರ್ಕಿಂಗ್’ ಕೃತಿಯ ಪುಟ ವಿನ್ಯಾಸಕ್ಕೆ ಸುಧಾಕರ್ ದರ್ಬೆ ಅವರಿಗೆ ದ್ವಿತೀಯ ಬಹುಮಾನ ದೊರಕಿದೆ.24 ಮಂದಿ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ 2015ನೇ ಸಾಲಿನ ಪ್ರೋತ್ಸಾಹಧನ ನೀಡಲಾಯಿತು. ಹಿರಿಯ ಸಂಶೋಧಕ ಡಾ.ಎಂ. ಕಲಬುರ್ಗಿ ಅವರು ಸಂಶೋಧನೆಗಳ ಮೂಲಕ ಸತ್ಯ ಶೋಧನೆಯಲ್ಲಿ ತೊಡಗಿದ್ದ ಮಹಾನ್ ಸಂತ. ಸತ್ಯದ ದಾರಿ ತೋರಲೆಂದೇ ತಮ್ಮ ಬದುಕನ್ನು ಮುಡುಪಾಗಿಟ್ಟ ಮಹಾನ್ ಸಾಧಕ. ಅವರ ಹೆಸರಿನ ಈ “ಡಾ.ಎಂ.ಎಂ. ಕಲಬುರ್ಗಿ’ ಪ್ರಶಸ್ತಿ ಬಂದಿರುವುದು “ನೊಬೆಲ್’ ಪ್ರಶಸ್ತಿ ಬಂದಷ್ಟೇ ಸಂತಸವಾಗಿದೆ.
-ಬಿ.ಶೇಷಾದ್ರಿ, ಅರ್ಥಶಾಸ್ತ್ರಜ್ಞ, ಬಳ್ಳಾರಿ