Advertisement

ಸಾವರಿನ್‌ ಶುಗರ್ ಕಾರ್ಖಾನೆಗೆ ಮುತ್ತಿಗೆ

01:24 PM Jun 06, 2019 | Team Udayavani |

ತೇರದಾಳ: ರೈತರಿಗೆ ಕಬ್ಬಿನ ಬಿಲ್ ಪಾವತಿಸದ ಸಾವರಿನ್‌ ಶುಗರ್ ಕಾರ್ಖಾನೆಯ ಗೇಟ್ ಬಂದ್‌ ಮಾಡಿ ರೈತರು ಪ್ರತಿಭಟನೆ ನಡೆಸಿದರು.

Advertisement

ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹಳಿಂಗಳಿ, ತಮದಡ್ಡಿ, ಹನಗಂಡಿ, ಸಸಾಲಟ್ಟಿ ಸೇರಿದಂತೆ ಮತ್ತಿತರ ಗ್ರಾಮದ ರೈತರು ಸಾವರಿನ್‌ ಶುಗರ್ ಕಾರ್ಖಾನೆಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಐದಾರು ತಿಂಗಳುಗಳಿಂದ ನಮ್ಮ ಬಿಲ್ ಬಾಕಿ ಹಣ ಪಾವತಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಪಾಲ್ಗೊಂಡು ಕಾರ್ಖಾನೆಯಿಂದ ಸರಿಯಾದ ಸಮಯಕ್ಕೆ ಹಣ ಪಾವತಿಯಾಗದೇ ಇರುವುದರಿಂದ ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿದೆ ಎಂದರು. ಕಾರ್ಖಾನೆ ಸಿಬ್ಬಂದಿ ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಸಂಜೆ ನಾಲ್ಕು ಗಂಟೆಯವರೆಗೆ ಗೇಟ್ ತೆಗೆಯದೇ ಇರುವುದರಿಂದ ಒಳಗಿದ್ದ ಸಿಬ್ಬಂದಿಯವರು ಹೈರಾಣಾಾದರು.

ಕಾರ್ಖಾನೆ ಅಧಿಕಾರಿಗಳಾದ ಶಿವಣ್ಣನವರ, ಮಹಾವೀರ ಮುರಗುಂಡಿ ಮಾತನಾಡಿ, ಶೀಘ್ರ ಬಿಲ್ ನೀಡುವ ಭರವಸೆ ನೀಡಿದರು. ರೈತರಾದ ಗಂಭೀರ ಪಾಟೀಲ, ಶಾಂತಿನಾಥ ಖೇಬೋಜಿ, ಆದೇಶ ಕುಳ್ಳಿ, ಅರುಣ ಹನಗಂಡಿ, ಭರತೇಶ ಜಮಖಂಡಿ, ಗಂಗಪ್ಪ ಜಕ್ಕನ್ನವರ, ಆನಂದ ಮುದಕನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next