Advertisement

ರೈತರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ

06:46 PM Dec 30, 2020 | Team Udayavani |

ಹೊಳಲ್ಕೆರೆ: ತೋಟಗಾರಿಕೆ ಕೃಷಿಗೆ ನಿತ್ಯ ಐದು ಗಂಟೆವಿದ್ಯುತ್‌ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ರೈತಸಂಘದ ಸದಸ್ಯರು ಮಂಗಳವಾರ ಪಟ್ಟಣದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ವಿದ್ಯುತ್‌ ಸೌಲಭ್ಯ ಇಲ್ಲದೆ ತೋಟಗಾರಿಕೆಬೆಳೆಗಳು ಸಂಪೂರ್ಣ ಒಣಗುತ್ತಿವೆ. ಅಡಿಕೆ, ತೆಂಗು,ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿನ ಸೌಲಭ್ಯಕಲ್ಪಿಸಲು ಬೇಕಾದ ವಿದ್ಯುತ್‌ ಪೂರೈಕೆಯನ್ನು ಬೆಸ್ಕಾಂಮಾಡುತ್ತಿಲ್ಲ. ಪರಿಣಾಮ ಬೆಳೆ ಇಳುವರಿ ಕುಸಿದು

ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಬೆಸ್ಕಾಂ ಕೇವಲ 3ತಾಸು ವಿದ್ಯುತ್‌ ಸರಬರಾಜು ಮಾಡುತ್ತಿದೆ. ಕಳೆದನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ವಿದ್ಯುತ್‌ ಸಮಸ್ಯೆ ಉಲ್ಬಣಿಸಿದ್ದರೂ ಅಧಿಕಾರಿಗಳು, ಜನಪ್ರತಿನಿಧಿ ಗಳು ರೈತರ ಸಮಸ್ಯೆ ನಿವಾರಿಸಲು ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ನಗರ ಘಟಕದ ಅಧ್ಯಕ್ಷ ಲೋಕೇಶ್‌ಮಾತನಾಡಿ, ಸರಕಾರ 5 ಗಂಟೆ ವಿದ್ಯುತ್‌ ಪೂರೈಕೆಮಾಡಬೇಕೆಂದು ಹೇಳಿಕೆ ನೀಡುತ್ತಿದೆ. ಅದರೆಇಲ್ಲಿ ವಿದ್ಯುತ್‌ ಸೌಲಭ್ಯವಿಲ್ಲ. ರೈತರು ಅನ್ಯಾಯಕ್ಕೆತುತ್ತಾಗುತ್ತಿದ್ದಾರೆ. ಬೆಸ್ಕಾಂ ರಾತ್ರಿ ಹೊತ್ತು ನೀಡುವ

ವಿದ್ಯುತ್‌ ಸೌಲಭ್ಯವನ್ನು ಬೆಳಗಿನ ಹೊತ್ತುಕೂಡ ನೀಡಬೇಕು. ರಾತ್ರಿ ಹೊತ್ತು ವಿದ್ಯುತ್‌ನೀಡುವುದರಿಂದ ಕಾಡುಪ್ರಾಣಿ ಹಾಗೂ ವಿಷಜಂತುಗಳಿಗೆ ರೈತರು ಬಲಿಯಾಗುತ್ತಿದ್ದಾರೆ. ರೈತರಮೇಲೆ ದೌರ್ಜನ್ಯವೆಸಗುವ ಇಂಧನ ಇಲಾಖೆಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ನಗರ ಘಟಕದ ಗೌರವಾಧ್ಯಕ್ಷ ಬಸವನಕೋಟೆ ನಾಗರಾಜ್‌ ಮಾತನಾಡಿದರು. ಕಾರ್ಯದರ್ಶಿಅಜ್ಜಯ್ಯ, ಖಜಾಂಚಿ ಸಿದ್ದರಾಮಣ್ಣ, ಡಿ.ಎಸ್‌.ನಾಗರಾಜ್‌, ಎಚ್‌.ಈ. ವಿಶ್ವನಾಥ, ಕೆ.ಸಿ. ದಿನಕರ್‌,ಕಾಂತರಾಜ್‌, ಹಾಲಯ್ಯ, ಮಂಜುನಾಥ,ತಿಪ್ಪೇಸ್ವಾಮಿ, ಇಫಾನ್‌, ಪರಮೇಶ್ವರಪ್ಪ, ಕೆ.ಆರ್‌. ಮೂರ್ತಿ, ಡಿ.ಈ. ಮಲ್ಲೇಶ್ವರಪ್ಪ, ಶಿವಲಿಂಗಸ್ವಾಮಿ, ಶಿವಣ್ಣ, ಭಂಗಿತಿಪ್ಪೇಸ್ವಾಮಿ, ಗೌಡರ ಮಂಜುನಾಥ, ಕಾಲ್ಕೆರೆ ಕಲ್ಲಪ್ಪ, ಮೂರ್ತಿ ಸೇರಿದಂತೆ ನೂರಾರುರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಹೊಳಲ್ಕೆರೆ, ಚಿತ್ರಹಳ್ಳಿ, ರಾಮಗಿರಿ ಭಾಗದಲ್ಲಿ ತಾಂತ್ರಿಕ ಸೌಲಭ್ಯವಿಲ್ಲದೆ ವಿದ್ಯುತ್‌ ಪೂರೈಕೆ ಸಾಧ್ಯವಾಗುತ್ತಿಲ್ಲ. ಸರಕಾರಕ್ಕೆ ಈ ಬಗ್ಗೆ ಹಲವಾರು ಬಾರಿ ಮಾಹಿತಿ ನೀಡಲಾಗಿದೆ. ತಾಂತ್ರಿಕ ಸೌಲಭ್ಯ ದೊರೆಯುವವರೆಗೂ ಇರುವ ತಾಂತ್ರಿಕ ಸೌಲಭ್ಯದಲ್ಲಿ ವಿದ್ಯುತ್‌ ವಿತರಣೆ ಮಾಡಬೇಕಿದೆ. ಈಗಿರುವ ವ್ಯವಸ್ಥೆಯಲ್ಲಿ 4 ಗಂಟೆ ವಿದ್ಯುತ್‌ ನೀಡಲು ಸಾಧ್ಯವಿದೆ.-ತಿಪ್ಪೇಸ್ವಾಮಿ, ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next