Advertisement

ಬಸ್‌ ಘಟಕಕ್ಕೆ ಮುತ್ತಿಗೆ-ಆಕ್ರೋಶ

11:29 AM Jul 20, 2022 | Team Udayavani |

ಕಾಳಗಿ: ತಾಲೂಕಿನ ಪಸ್ತಪುರ ಗ್ರಾಮಕ್ಕೆ ಶಾಲೆ ಸಮಯಕ್ಕೆ ಸರಿಯಾಗಿ ಬಸ್‌ ಬಾರದೇ ಇರುವುದರಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಪಟ್ಟಣಕ್ಕೆ ಆಗಮಿಸಿ ಬಸ್‌ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿಗಳು, ಪಸ್ತಪುರ ಗ್ರಾಮದಿಂದ ಸುಲೇಪೇಟ ಪಟ್ಟಣಕ್ಕೆ ಶಾಲೆ-ಕಾಲೇಜಿಗೆ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗುತ್ತೇವೆ. ಶಾಲೆ ಸಮಯಕ್ಕೆ ಬಸ್ಸಿನ ಸೌಕರ್ಯ ಇಲ್ಲದಿರುವುದರಿಂದ ಪ್ರತಿದಿನ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ. ವಿದ್ಯಾರ್ಥಿಗಳು ಜೀಪು, ಟೆಂಪೋ ಹಾಗೂ ಇನ್ನಿತರ ಖಾಸಗಿ ವಾಹನಗಳಲ್ಲಿ ಜೋತು ಬಿದ್ದು ಸಂಚರಿಸುತ್ತಿದ್ದೇವೆ. ಖಾಸಗಿ ವಾಹನಗಳು ಇಲ್ಲದಿದ್ದರೆ ಶಾಲೆ ಬಿಟ್ಟು ಮನೆಯಲ್ಲೇ ಕೂಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆನಂತರ ಬಸ್‌ ಘಟಕ ವ್ಯವಸ್ಥಾಪಕ ಯಶವಂತ ಯಾತನೂರ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ದುತ್ತರಗಿ, ಮಾಜಿ ಗ್ರಾಪಂ ಅಧ್ಯಕ್ಷ ವೀರೇಶ ಘಂಟಿ, ವೀರೇಶ ಬಾಲಿ, ಬಸವರಾಜ ಆರ್‌. ಬಾಲಿ, ಅಶೋಕ ಕಂಠಿ, ಗಣಪತಿ ಹರಕಂಚಿ, ಸಂತೋಷ ನಾವದಗಿ, ವೀರೇಶ ಉಳ್ಳಾಗಡ್ಡಿ, ಜಗನ್ನಾಥ ಜಾಧವ, ಈರಪ್ಪ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next