Advertisement

ಸಿದ್ರಾ ಅಮೀನ್‌ ದಾಖಲೆ; ಐರ್ಲೆಂಡ್‌ ವಿರುದ್ಧ ಪಾಕ್‌ ಜಯಭೇರಿ

10:50 PM Nov 05, 2022 | Team Udayavani |

ಲಾಹೋರ್‌: ತವರಿನಲ್ಲಿ ನಡೆಯುತ್ತಿರುವ ಐಸಿಸಿ ವನಿತೆಯರ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ಥಾನದ ಪ್ರಾಬಲ್ಯ ಮುಂದುವರಿದಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಭೇರಿ ಬಾರಿಸಿದೆ.

Advertisement

ಲಾಹೋರ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನವು ಐರ್ಲೆಂಡ್‌ ತಂಡವನ್ನು 128 ರನ್ನುಗ ಳಿಂದ ಸೋಲಿಸಿತ್ತು. ಆರಂಭಿಕ ಆಟಗಾರ್ತಿಯರಾದ ಸಿದ್ರಾ ಅಮೀನ್‌ ಅವರ ವೈಯಕ್ತಿಕ ಗರಿಷ್ಠ ಬ್ಯಾಟಿಂಗ್‌ ಸಾಧನೆ ಮತ್ತು ಅವರ ಮತ್ತು ಮುನೀಬಾ ಅಲಿ ಅವರ ಸೊಗಸಾದ ಶತಕ ಹಾಗೂ ಅವರಿಬ್ಬರು ಮೊದಲ ವಿಕೆಟಿಗೆ ಪೇರಿಸಿದ ದಾಖಲೆಯ 221 ರನ್ನುಗಳ ಜತೆ ಯಾಟದಿಂದಾಗಿ ಪಾಕಿಸ್ಥಾನವು 3 ವಿಕೆಟಿಗೆ 335 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು.

ಇದಕ್ಕುತ್ತರವಾಗಿ ಐರ್ಲೆಂಡ್‌ ತಂಡವು 207 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಸಿದ್ರಾ ಅಮೀನ್‌ ಅವರು ಅಜೇಯ 176 ರನ್‌ ಗಳಿಸಿದರು. ಇದು ಪಾಕಿಸ್ಥಾನ ಪರ ಏಕದಿನ ಪಂದ್ಯದಲ್ಲಿ ಆಟಗಾರ್ತಿಯೊಬ್ಬರ ಗರಿಷ್ಠ ಸಾಧನೆಯಾಗಿದೆ. ಅವರು 107 ರನ್‌ ಗಳಿಸಿದ್ದ ಮುನೀಬಾ ಅಲಿ ಜತೆ ಮೊದಲ ವಿಕೆಟಿಗೆ 221 ರನ್‌ ಪೇರಿಸಿರುವುದು ಪಾಕ್‌ ಪರ ಗರಿಷ್ಠ ಸಾಧನೆಯಾಗಿದೆ. ಇವರಿಬ್ಬರ ಸಾಹಸದ ಬ್ಯಾಟಿಂಗ್‌ನಿಂದ ಪಾಕಿಸ್ಥಾನ ವನಿತಾ ಏಕದಿನ ಪಂದ್ಯದಲ್ಲಿ ಇದೇ ಮೊದಲ ಬಾರಿ 300 ಪ್ಲಸ್‌ (3 ವಿಕೆಟಿಗೆ 335) ರನ್‌ ಪೇರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next