ಹೊಸದಿಲ್ಲಿ: ಇತ್ತೀಚಿಗೆ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರು ಗುಂಡು ಹಾರಿಸಿದ 15 ನಿಮಿಷಗಳಲ್ಲಿ ಸಾವನ್ನಪ್ಪಿದರು ಎಂದು ತಿಳಿಸಿದೆ. ಅಲ್ಲದೆ ದಾಳಿಕೋರರು ಸಿಧು ಮೂಸೆವಾಲಾ ದೇಹಕ್ಕೆ 19 ಗುಂಡುಗಳನ್ನು ಹೊಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಮೇ 29 ರ ಭಾನುವಾರದಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ 28 ವರ್ಷದ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಮೂಸೆವಾಲಾ ಅವರ ದೇಹದ ಬಲಭಾಗದಲ್ಲಿ ಗರಿಷ್ಠ ಗುಂಡಿನ ಗಾಯದ ಗುರುತುಗಳನ್ನು ಹೊಂದಿದೆ ಎಂದು ವರದಿಯು ಹೇಳುತ್ತದೆ. ಗುಂಡುಗಳು ಅವರ ಮೂತ್ರಪಿಂಡಗಳು, ಯಕೃತ್ತು, ಶ್ವಾಸಕೋಶಗಳು ಮತ್ತು ಬೆನ್ನುಮೂಳೆಯನ್ನು ಹೊಡೆದಿವೆ. ಬಹುಶಃ ದಾಳಿಗೊಳಗಾದ 15 ನಿಮಿಷಗಳಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಪ್ರತಿಭಾನ್ವಿತ ನಟ ಉದಯ್ ಹುತ್ತಿನಗದ್ದೆ ಇನ್ನಿಲ್ಲ
Related Articles
ಇಡೀ ದೇಹದ ಎಕ್ಸ್ ರೇ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಗುಂಡಿನ ದಾಳಿಯಿಂದಾಗಿ ಅವರ ದೇಹದಲ್ಲಿ ಅನೇಕ ರಂಧ್ರಗಳಾಗಿದೆ. ಮೂಸೆವಾಲಾ ಅವರ ಟಿ-ಶರ್ಟ್ ಮತ್ತು ಪೈಜಾಮಾಗಳು ರಕ್ತದಲ್ಲಿ ನೆನೆದಿದ್ದವು.
ಪಂಜಾಬ್ ಸರ್ಕಾರವು ಗಾಯಕ-ರಾಜಕಾರಣಿಯ ಭದ್ರತೆಯನ್ನು ಹಿಂತೆಗೆದುಕೊಂಡ ಕೆಲವೇ ದಿನಗಳಲ್ಲಿ, ಅಪರಿಚಿತ ಬಂದೂಕುಧಾರಿಗಳು ಮಾನ್ಸಾದ ಜವರಹರ್ಕೆ ಗ್ರಾಮದಲ್ಲಿ ಸಿಧು ಮೂಸೆವಾಲಾಗೆ ಹೊಂಚು ಹಾಕಿ ಅವರು ಪ್ರಯಾಣಿಸುತ್ತಿದ್ದ ಥಾರ್ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಗೆ ಎಎನ್-94 ಅಸಾಲ್ಟ್ ರೈಫಲ್ ಸೇರಿದಂತೆ ಕನಿಷ್ಠ ಮೂರು ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ. ಮೂವತ್ತು ಖಾಲಿ ಬುಲೆಟ್ ಕೇಸಿಂಗ್ ಗಳನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.