Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ

04:19 PM Jul 06, 2019 | Team Udayavani |

ಸಿಂಧನೂರು: ಅಂಗನವಾಡಿ ಕೇಂದ್ರಗಳನ್ನು ಮತ್ತು ಮಿನಿ ಅಂಗನವಾಡಿ ಕೇಂದ್ರಗಳನ್ನು ಕಿನ್ನರ್‌ ಗಾರ್ಡನ್‌ಗಳನ್ನಾಗಿ ಪರಿವರ್ತಿಸಿ ಇಂಗ್ಲಿಷ್‌ ಕಾನ್ವೆಂಟ್, ನರ್ಸರಿ ಸ್ಕೂಲ್ಗಳಾಗಿ ಪರಿವರ್ತಿಸಿ 2 ವರ್ಷ 6ತಿಂಗಳ ಮಕ್ಕಳನ್ನು ಅಂಗನವಾಡಿ ನರ್ಸರಿ ಸ್ಕೂಲ್ಗೆ ಸೇರಿಸಿಕೊಳ್ಳಲು ಸರ್ಕಾರ ಆದೇಶ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್‌ (ಎಐಟಿಯುಸಿ) ತಾಲೂಕು ಘಟಕದಿಂದ ನಗರದ ಮಿನಿವಿಧಾನಸೌಧ ಕಚೇರಿ ಎದುರು ಶುಕ್ರವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

Advertisement

ರಾಜ್ಯದಲ್ಲಿರುವ 65911 ಅಂಗನವಾಡಿ ಕೇಂದ್ರಗಳನ್ನು ಮತ್ತು 331 ಮಿನಿ ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ನರ್ಸರಿ ಸ್ಕೂಲ್ಗೆ ಸೇರಿಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಬೇಕು. ಮಕ್ಕಳಿಗೆ ಒಂದೇ ತರನಾದ ಉಡುಪು, ಬೂಟು ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿವೃತ್ತಿಯಾಗಿದ್ದು, ಇವರಿಗೆ ಕೊಡಬೇಕಾದ ಇಡಿಗಂಟಿನ ಹಣ 50 ಸಾವಿರ ರೂ. ಹಾಗೂ 30 ಸಾವಿರ ರೂ. ಎನ್‌ಪಿಎಸ್‌ ಹಣ ನೀಡಬೇಕು. ಗೋವಾ ಸರ್ಕಾರದ ಮಾದರಿಯಂತೆ ಸೇವಾವಧಿ ಆಧಾರದ ಮೇಲೆ ವೇತನ ಹೆಚ್ಚಿಸಬೇಕು. ಈ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪಿಂಚಣಿಗಾಗಿ ಒತ್ತಾಯಿಸಿ ಜು.30 ಮತ್ತು 31ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಗಲು ರಾತ್ರಿ ಧರಣಿ ನಡೆಸಲಾಗುವುದು ಎಂದು ಎಐಟಿಯುಸಿ ಮುಖಂಡ ಭಾಷುಮೀಯಾ ಹೇಳಿದರು. ಮುಖಂಡರಾದ ತಿಪ್ಪಯ್ಯಶೆಟ್ಟಿ, ವೆಂಕನಗೌಡ ಗದ್ರಟಗಿ, ಗಿರಿಜಮ್ಮ, ಲಕ್ಷ್ಮೀ ದಢೇಸೂಗುರು, ಗೌರಮ್ಮ ಅಲಬನೂರು, ರತ್ನಾ ದೇವರಗುಡಿ, ಆದಿಲಕ್ಷ್ಮೀ, ದೇವಮ್ಮ ಬಳಗಾನೂರು, ಪವಾಡೆಮ್ಮ ಬಳಗಾನೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next