ಶಿವಮೊಗ್ಗ/ದಾವಣಗೆರೆ: ವಿರೋಧ ಪಕ್ಷದ ನಾಯಕರಾಗಲು ಸಿದ್ದರಾಮಯ್ಯ ಅನ್‌ಫಿಟ್. ಅವರು ಈ ಸ್ಥಾನದಲ್ಲಿ ಶಾಶ್ವತವಾಗಿರಲು ಸಾಧ್ಯವೇ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಶಾಶ್ವತವಾಗಿ ವಿರೋಧ ಪಕ್ಷದ ನಾಯಕರಾಗಿರುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಆದರೆ, ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿದ್ದರೆ ತಾನೇ ವಿರೋಧ ಪಕ್ಷದ ನಾಯಕನಾಗಿ ರುವುದು? ಈಗಾಗಲೇ ಕಾಂಗ್ರೆಸ್‌ನಲ್ಲಿ ಗುಂಪುಗಳು ಆಗಿ ಹೋಗಿವೆ. ಈ ವಿಷಯ ಯಡಿಯೂರಪ್ಪ ನವರಿಗೆ ಗೊತ್ತಿಲ್ಲ. ಹಾಗಾಗಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿ ಪರ್ಮನೆಂಟ್ ಆಗಿ ಇರಲಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯರಿಗೆ ಎಷ್ಟು ಪಾರ್ಟಿ ಆಯ್ತಿಗ. ಬಿಜೆಪಿ ಬಿಟ್ಟು ಎಲ್ಲಾ ಪಾರ್ಟಿ ಆಯ್ತು. ಇನ್ನೆಲ್ಲಿ ಹೋಗ್ತಾರೆ? ಅವರು ಅಧಿಕಾರ ಸಿಕ್ಕ ಪಾರ್ಟಿಯಲ್ಲಿ ಮಾತ್ರ ಇರುತ್ತಾರೆ. ಇಲ್ಲವೇ ಆ ಪಾರ್ಟಿ ಒದ್ದು ಬೇರೆ ಪಕ್ಷಕ್ಕೆ ಹೋಗ್ತಾರೆ ಎಂದು ಟೀಕಿಸಿದರು.
ನೋಬೆಲ್ ಪ್ರಶಸ್ತಿ ಕೊಡಲಿ: ಸಿದ್ದರಾಮಯ್ಯ ತಲೆ ಕೆಟ್ಟಾಗಲೆಲ್ಲಾ ಒಂದೊಂದು ಹೇಳಿಕೆ ನೀಡುತ್ತಾರೆ. ನನಗೆ ಅಚ್ಚರಿ ತಂದಿದ್ದೇನೆಂದರೆ ಸರ್ಕಾರ ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಕೊಟ್ಟೇ ಇಲ್ಲ ಎಂದು ಹೇಳಿರುವುದು. ಇಂಥಾ ಸುಳ್ಳು!
ಯಪ್ಪಾ…ಯಪ್ಪಾ.. ಇದು ಗಿನ್ನಿಸ್ ದಾಖಲೆ. ಸುಳ್ಳುಗಾರ ಯಾರೆಂದರೆ ಸಿದ್ದರಾಮಯ್ಯ. ರಾಜ್ಯ ಸುತ್ತಿಕೊಂಡು ಬಂದಲ್ಲಿ ಸರಕಾರ ಯಾರ್ಯಾರಿಗೆ ಪರಿ ಹಾರದ ಹಣ ನೀಡಿದೆ ಎಂಬುದು ಅವರಿಗೆ ಗೊತ್ತಾಗ ಲಿದೆ. ಮೊದಲು ಇದನ್ನು ತಿಳಿದುಕೊಂಡು ನಂತರ ಮಾತನಾಡಲಿ ಎಂದು ತಾಕೀತು ಮಾಡಿದರು.