ಬನಹಟ್ಟಿ: ಕೋವಿಡ್‌ನಿಂದಾಗಿ ಬೆಡ್ ಹಾಗು ಆಕ್ಸಿಜನ್ ದೊರಕದ ಕಾರಣ ಎಲ್ಲಿಯೂ ಆಸ್ಪತ್ರೆಯೊಳಗೆ ಸೇರದೆ ಕೊನೆಗೂ ೧೨ ಗಂಟೆಯೊಳಗಾಗಿ ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಯಾದ್ಯಂತ ಕಾರ್ ಮೂಲಕ ಪ್ರದಕ್ಷಿಣೆ ಹಾಕಿ ಕೊನೆಗೂ ಕುಟುಂಬಸ್ಥರ ಮಧ್ಯೆ ವಾಹನದಲ್ಲಿಯೇ ಮೃತಪಟ್ಟಿದ್ದ ಕುಟುಂಬದವರು ದೂರವಾಣಿ ಮೂಲಕ ಶಾಸಕರೊಂದಿಗೆ ಮಾತನಾಡುವ ಸಂದರ್ಭ “ಏ ನಾಲಾಯಕ್ ಫೋನ್ ಇಡು, ದೊಡ್ಡ ಕಿಸಾಮತಿ ಮಾಡಿದೆ… ಎಂಬ ಪದಬಳಕೆಯಿಂದ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ನಿಂದಿಸಿದ್ದರ ಬಗ್ಗೆ ಆಡಿಯೋ ವೈರಲ್ ಆಗಿದೆ.
ಕಳೆದ ರವಿವಾರದಂದು ಉಸಿರಾಟ ತೊಂದರೆಯಿಂದ ಆಸಂಗಿ ಗ್ರಾಮದ ಸಂಜು ಗಾಯಕವಾಡ(42) ಎಂಬಾತ ಕೋವಿಡ್ ಸೋಂಕಿನಿಂದ ಅಸುನೀಗಿದ್ದ. ಈ ನಿಮಿತ್ತವಾಗಿ ಸಹೋದರ ಅಶೋಕ ಗಾಯಕವಾಡ ದೂರವಾಣಿಯ ಮೂಲಕ ಶಾಸಕ ಸಿದ್ದು ಸವದಿಗೆ ಕರೆ ಮಾಡಿ, ನಮ್ಮಣ್ಣನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಲಾರದೆ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ತೋರಿಸುವಂತೆ ಪತ್ರ ಬರೆದುಕೊಟ್ಟರು. ಅಲ್ಲಿಯೂ ಕೂಡಾ ಬೆಡ್ ದೊರೆಯದೆ ಮೃತ ಪಟ್ಟರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸವದಿಯವರು ಎಲ್ಲಾರೂ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳಬೇಕು. ಒಂದಿಬ್ಬರಿಗೆ ಬಂದಿದ್ದರೆ ಏನಾದರೂ ಮಾಡಬಹುದಾಗಿತ್ತು. ಲಕ್ಷಾಂತರ ಜನರಿಗೆ ರೋಗ ಬಂದಿದೆ. ಸರ್ಕಾರ ಹಾಗೂ ಮಾಧ್ಯಮಗಳು ಈ ಕುರಿತು ಸಾಕಷ್ಟು ಜಾಗೃತಿ ಕಾರ್ಯಗಳನ್ನು ಮಾಡುತ್ತಿವೆ ಎಂದರು.
ಇದನ್ನೂ ಓದಿ :ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ನೀಡಲು ಮುಂದಾದ ಫಾಲ್ಕನ್ ಕ್ಲಬ್
ಆಗ ಅಶೋಕ ಗಾಯಕವಾಡ ಈಗ ರೋಗ ಬಂದಿದೆ, ‘ನೀವು ಶಾಸಕರು ಹೌದಿಲ್ಲೊ, ನೀವು ಸರ್ಕಾರಿ ದವಾಖಾನೆ ಮುಂದ ಕೂಡ್ರಬೇಕು, ಆಗ ಶಾಸಕರು ಅದನ್ನು ಒಮ್ಮೆಲೆ ಚಾಲೂ ಮಾಡಾಕ ಬರುದಿಲ್ಲ ಎಂದರು. ನಿಮ್ಮನ್ನು ಮನ್ಯಾಗ ಕುಂಡ್ರಾಕ ಆರಿಸಿಕೊಟ್ಟಿಲ್ಲ. ಮೊನ್ನೆ ಕೋಟಿಗಟ್ಟಲೆ ಹಣ ಖರ್ಚ ಮಾಡಿ ಮದುವಿ ಮಾಡಿದೆ’ ಎಂದಾಗ.
ಆಗ ಶಾಸಕ ಸವದಿ ಅದನ್ನು ಒಮ್ಮೆಲೆ ಚಾಲೂ ಮಾಡಾಕ ಬರುದಿಲ್ಲ “ಏ ನಾಲಾಯಕ ಫೋನ್ ಇಡು, ದೊಡ್ಡ ಕಿಸಾಮತಿ ಮಾಡಿದೆ ಎಂದು ಫೋನ್ ಇಟ್ಟರು. ಈ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.