Advertisement
ಹೀಗಾಗಿ ಜಿಲ್ಲೆಯ ಮಹಿಳಾ ಸಂಘಟನೆಗಳು ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮಹಾಲಿಂಗಪುರ ಪುರಸಭೆಯವಾರ್ಡ್ ನಂ.4ರ ಬಿಜೆಪಿ ಸದಸ್ಯೆ ಚಾಂದಿನಿ ನಾಯಕ ಅವರಿಗೆ ಗರ್ಭಪಾತವಾಗಿದ್ದು, ಇಡೀ ಕುಟುಂಬ ದುಃಖದಲ್ಲಿ ಮುಳುಗಿದೆ.
10 ವರ್ಷದ ಗಂಡು ಮತ್ತು 8 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಆ ಬಳಿಕ ಅವರಿಗೆ ಮಕ್ಕಳಾಗಿರಲಿಲ್ಲ. ಏಳು ವರ್ಷಗಳ ಬಳಿಕ ಮೂರು ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿ ಅವರ ಕುಟುಂಬ ಖುಷಿಯಲ್ಲಿತ್ತು. ನ. 9ರಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ತಮ್ಮ ನಾಯಕರಾದ ಶಾಸಕರು ಅವಕಾಶ ಕೊಡಲಿಲ್ಲ ಎಂದು ಅಸಮಾಧಾನಗೊಂಡು
ಕಾಂಗ್ರೆಸ್ಗೆ ಬೆಂಬಲಿಸಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ಶಾಸಕರು ಮತ್ತು ಬೆಂಬಲಿಗರು, ಚಾಂದಿನಿ ನಾಯಕ ಸಹಿತ ಇತರ ಮೂವರು ತಮ್ಮದೇ ಪಕ್ಷದ ಸದಸ್ಯರು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಪುರಸಭೆ ಕಚೇರಿ ಆವರಣದಲ್ಲೇ ತಡೆಯುವ ಪ್ರಯತ್ನ ಮಾಡಿದ್ದರು.
ಮಾಡದಂತೆ ಗೇಟ್ನಲ್ಲಿ ತಡೆದರು. ಈ ವೇಳೆ ತೀವ್ರ ನೂಕಾಟ, ತಳ್ಳಾಟ ನಡೆದಿದ್ದು, ಸ್ವತಃ ಶಾಸಕ ಸವದಿ ಅವರು ಮಹಿಳಾ ಸದಸ್ಯೆ
ಚಾಂದಿನಿ ಅವರನ್ನು ಪುರಸಭೆ ಕಚೇರಿಯ ಮೆಟ್ಟಿಲುಗಳ ಮೇಲಿಂದ ತಳ್ಳಿದ್ದರು. ಆಗ ನಾಯಕ ಅವರು ಮೂರು ಮೆಟ್ಟಿಲುಗಳಿಂದ
ಕೆಳಗೆ ಬಿದ್ದು, ಸಣ್ಣ-ಪುಟ್ಟ ಗಾಯಗೊಂಡಿದ್ದರು. ಇದನ್ನೂ ಓದಿ:ಕೋವಿಡ್ ಔಷಧ ನಿಧಿಗಾಗಿ ಯುವಕರ ಬೈಕ್ ಯಾತ್ರೆ : 3 ಕೋಟಿ ರೂ. ಸಂಗ್ರಹದ ಗುರಿ
Related Articles
ಅವರ ಪತಿ ನಾಗೇಶ ನಾಯಕ ತಿಳಿಸಿದ್ದಾರೆ.
Advertisement
ಗರ್ಭಪಾತವೇ ಸುಳ್ಳು ಎಂಬ ಮಾಹಿತಿ; ಶಾಸಕ ಸವದಿಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆಯ ಸದಸ್ಯೆ ಚಾಂದಿನಿ ನಾಗೇಶ ನಾಯಕ ಅವರಿಗೆ ಗರ್ಭಪಾತ ಸುಳ್ಳು ಎಂಬ ಮಾಹಿತಿ ಇದೆ. ಈ ಕುರಿತು ತನಿಖೆಯಾಗಲಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ. ಘಟನೆಯ ಕುರಿತು
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಬಂದ ಮಾಹಿತಿ ಪ್ರಕಾರ, ಚಾಂದಿನಿ ಅವರಿಗೆ ಆರು ವರ್ಷಗಳ ಹಿಂದೆಯೇ ಆಪರೇಶನ್ ಆಗಿದೆ. ನಿಖರವಾಗಿ ಗೊತ್ತಿಲ್ಲ. ಈ ಬಗ್ಗೆ ಸತ್ಯಾಸತ್ಯತೆ ಹೊರ ಬರಬೇಕು. ನೂಕುನುಗ್ಗಲಿನಲ್ಲಿ ಶೇ. 90ರಷ್ಟು ಕಾಂಗ್ರೆಸ್ನವರು ಇದ್ದರು. ನಾನು ಭಾವನಾತ್ಮಕವಾಗಿ, ಸೋದರ ಭಾವದಿಂದ ಅವರನ್ನು ಮುಟ್ಟಿದ್ದು ನಿಜ. ಅವರು ನನ್ನ
ಮಗಳ ಸಮಾನ. ಆ ಬಗ್ಗೆ ನಾನು ಕ್ಷಮೆ ಕೇಳಿದ್ದೇನೆ. ಕಾಂಗ್ರೆಸ್ನವರಿಗೆ ಬೇರೆ ಕೆಲಸವಿಲ್ಲ. ಇದು ನೀಚ ರಾಜಕಾರಣ. ಇಂತಹ ರಾಜಕೀಯ ಸರಿಯಲ್ಲ ಎಂದು ಹೇಳಿದ್ದಾರೆ. ರಾತ್ರೋರಾತ್ರಿ ನಮ್ಮ ಸದಸ್ಯರನ್ನು ಕಿಡ್ನಾಪ್ ಮಾಡಿದ್ದರು. ಎಲ್ಲ ಅಂಶಗಳ ಕುರಿತು ತನಿಖೆಯಾಗಲಿ. ಪ್ರಕರಣ ಮುಗಿದು 20 ದಿನಗಳ ನಂತರ ಈಗ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ತನಿಖೆಗೆ ನಾನು ಸಿದ್ಧನಿಸಿದ್ದೇನೆ ಎಂದು ಶಾಸಕ ಸವದಿ ಹೇಳಿದ್ದಾರೆ. ಪತ್ನಿಯ ಗರ್ಭಪಾತದಿಂದ ತೀವ್ರ ನೋವುಂಟಾಗಿದೆ: ನಾಗೇಶ ನಾಯಕ
ಮಹಾಲಿಂಗಪುರ: ನ. 9ರಂದು ನಡೆದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಾಲ್ಕನೇಯ ವಾರ್ಡ್ನ
ಚುನಾಯಿತ ಸದಸ್ಯೆ ನನ್ನ ಪತ್ನಿ ಚಾಂದನಿ ನಾಯಕ ಮತದಾನಕ್ಕಾಗಿ ಪುರಸಭೆಗೆ ಪ್ರವೇಶಿಸುವ ಸಂದರ್ಭದಲ್ಲಿ ಶಾಸಕ ಸಿದ್ದು
ಸವದಿ, ಬೆಂಬಲಿಗರು, ಪುರಸಭೆ ಸದಸ್ಯರು ಎಳೆದಾಡಿ, ತಳ್ಳಾಡುವ ಮೂಲಕ ದೌರ್ಜನ್ಯ ಮೆರೆದಿದ್ದಾರೆ. ಅವರೆಲ್ಲರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಪುರಸಭೆ ಸದಸ್ಯೆ ಚಾಂದಿನಿ ನಾಯಕ ಪತಿ ನಾಗೇಶ ನಾಯಕ ಹೇಳಿದರು. ಸೋಮವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದಾಗಿ ನನ್ನ ಪತ್ನಿ ಮಾನಸಿಕ
ಮತ್ತು ದೈಹಿಕವಾಗಿ ತೀವ್ರ ನೋವು ಅನುಭವಿಸಿದ್ದಾಳೆ. ಸುಮಾರು 7 ವರ್ಷಗಳ ನಂತರ ಗರ್ಭಿಣಿಯಾಗಿದ್ದ ಪತ್ನಿಗೆ ಶನಿವಾರ
ಗರ್ಭಪಾತವಾಗಿದೆ. ಇದರಿಂದಾಗಿ ತೀವ್ರ ಮಾನಸಿಕ ತೊಳಲಾಟದಲ್ಲಿರುವ ಪತ್ನಿಯ ಆರೋಗ್ಯ ದೃಷ್ಟಿಯಿಂದ ಸಂಬಂಧಿಕರ ಊರಿಗೆ ಕಳುಹಿಸಿದ್ದೇನೆ. ಈ ಘಟನೆಯು ಕೇವಲ ನನ್ನ ಪತ್ನಿಗೆ ಮಾಡಿದ ಅವಮಾನವಲ್ಲ, ಇದು ರಾಜ್ಯದ ಸಮಸ್ತ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಕಾನೂನು ಹೋರಾಟ: ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಅಲ್ಲದೇ ಏಳು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದ ತನ್ನ ಪತ್ನಿಗೆ ಗರ್ಭಪಾತವಾಗಿದ್ದರಿಂದ ತೀವ್ರ ನೋವಿನಲ್ಲಿರುವ ದಂಪತಿಗೆ ಸಾಂತ್ವನ ಹೇಳುವ ಕಾರ್ಯ ಜಿಲ್ಲೆಯ ಮಹಿಳಾ ಸಂಘಟನೆಗಳು, ಮಹಿಳಾ ರಾಜಕಾರಣಿಗಳು ಮಾಡುತ್ತಿದ್ದಾರೆ. ಪತ್ನಿಗೆ ಗರ್ಭಪಾತವಾಗಿದ್ದು, ಇದಕ್ಕೆ ನ. 9ರಂದು ನಡೆದ ಚುನಾವಣೆಯಲ್ಲಿ ಮತದಾನ ಮಾಡದಂತೆ ತಡೆಯಲು ತಳ್ಳಿ-ನೂಕಿದ್ದೆ ಕಾರಣ. ಈ ಕುರಿತು ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಚಾಂದಿನಿ ಅವರ ಪತಿ ನಾಗೇಶ ತಿಳಿಸಿದ್ದಾರೆ.