Advertisement
ಅವರು ಭಾನುವಾರ ಜಗದಾಳದ ಕಿರಣ ಸಿಂಗಾಡಿ, ನಾವಲಗಿಯ ಕಿರಣ ಸವದಿ, ರಬಕವಿ ನಗರದ ಅಶ್ವತ ಗುರವ ವಿದ್ಯಾರ್ಥಿಗಳ ಮನೆಗೆ ಭೇಟ್ಟಿ ನೀಡಿ ಪಾಲಕರ ಜೊತೆ ಮಾತನಾಡಿ, ಶೀಘ್ರದಲ್ಲೇ ಕೇಂದ್ರ ಸಚಿವರು ಹಾಗೂ ಭಾರತ ಸರಕಾರದ ಜೊತೆ ಮಾತನಾಡಿ ಅವರನ್ನು ಸುರಕ್ಷಿತವಾಗಿ ಮರಳಿ ತರುವ ವ್ಯವಸ್ಥೆ ಮಾಡಲಾಗುವುದು ತಾವೆಲ್ಲರು ಧೈರ್ಯದಿಂದ ಇರಬೇಕು ಎಂದರು.
Related Articles
Advertisement
ಈ ಸಂದರ್ಭದಲ್ಲಿ ಸುಬಾಸ ಉಳ್ಳಾಗಡ್ಡಿ, ಆನಂದ ಕಂಪು, ಯಲ್ಲಪ್ಪ ಕಟಗಿ, ಪಿ. ಜಿ. ಕಾಖಂಡಕಿ, ಲಕ್ಷ್ಮಣ ಸವದಿ ಸೇರಿದಂತೆ ಅನೇಕರು ಇದ್ದರು.
ತಾಲೂಕಿನ ಐದು ಜನ : ರಬಕವಿ-ಬನಹಟ್ಟಿ ತಾಲೂಕಿನ ಜಗದಾಳದ ಕಿರಣ ಸಿಂಗಾಡಿ, ನಾವಲಗಿ ಗ್ರಾಮದ ಕಿರಣ ಸವದಿ, ಹಳಿಂಗಳಿ ಗ್ರಾಮದ ಪ್ರಜ್ವಲ ಹಿಪ್ಪರಗಿ, ಮದಬಾವಿ ಗ್ರಾಮದ ಪ್ರಜ್ವಲಕುಮಾರ ತಿಮ್ಮಾಪುರ ಹಾಗು ರಬಕವಿಯ ಅಶ್ವಥಕುಮಾರ ಗುರವ ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳಾಗಿದ್ದಾರೆ. ಎಲ್ಲ ಐವರು ಕುಟುಂಬಸ್ಥರು ತಮ್ಮ ತಮ್ಮ ಮಕ್ಕಳೊಂದಿಗೆ ಮೊಬೈಲ್ ಸಂಪರ್ಕದಲ್ಲಿದ್ದಾರೆ. ಕೆಲ ಹೊತ್ತು ಸಂಪರ್ಕಕ್ಕೆ ಸಿಕ್ಕರೆ, ಮತ್ತೊಂದು ಹೊತ್ತು ದೊರಕುತ್ತಿಲ್ಲ. ಹೀಗಾಗಿ ಕುಟುಂಬಸ್ಥರಲ್ಲಿ ಭಯ ಹೆಚ್ಚಾಗಿದೆ.
ರಾಯಭಾರಿ ಸಂಪರ್ಕವಿಲ್ಲ; ಕಳೆದ ಮೂರು ದಿನಗಳಾದರೂ ಭಾರತೀಯ ರಾಯಭಾರಿ ಕಚೇರಿಯಿಂದ ಯಾವದೇ ಸಂಪರ್ಕವಾಗುತ್ತಿಲ್ಲ. ಕೆಲವರು ಬಂಕರ್‌ನಲ್ಲಿ ಇನ್ನೂ ಕೆಲವರು ಮೆಟ್ರೋ ನಿಲ್ದಾಣದಲ್ಲಿದ್ದು, ಇದೀಗ ಊಟ, ನೀರಿನ ಕೊರತೆ ಹೆಚ್ಚಾಗಿದ್ದು, ಎಲ್ಲಿಂದಲೂ ಆಹಾರ ದೊರಕುತ್ತಿಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.