Advertisement

ತೇರದಾಳ Congress ಅಭ್ಯರ್ಥಿಯಾಗಿ ಸಿದ್ದು ಕೊಣ್ಣೂರ; ಉಮಾಶ್ರೀ ಅಭಿಮಾನಿಗಳಿಗೆ ಆಘಾತ

10:55 PM Apr 15, 2023 | Team Udayavani |

ರಬಕವಿ-ಬನಹಟ್ಟಿ : ಕಳೆದ ಹಲವಾರು ದಿನಗಳಿಂದ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಅಯ್ಕೆ ಕಗ್ಗಂಟಾಗಿತ್ತು. ಶನಿವಾರ ತೇರದಾಳ ಟಿಕೆಟ್ ಘೋಷನೆಯಾಗಿದ್ದು ಅಚ್ಚರಿ ಎಂಬಂತೆ ಸಿದ್ದು ಕೊಣ್ಣೂರ ಆಯ್ಕೆಯಾಗಿದ್ದಾರೆ.

Advertisement

ತೇರದಾಳ ಮತಕ್ಷೇತ್ರದ ಮೂಲಕ ತಮ್ಮ ಅಧಿಕೃತ ರಾಜಕಾರಣವನ್ನು ಆರಂಭಿಸಿದ್ದ ಮಾಜಿ ಸಚಿವೆ, ಶಾಸಕಿ ಉಮಾಶ್ರೀ ಅವರಿಗೆ ಟಿಕೆಟ್ ತಪ್ಪಿರುವುದು ಅವರ ಅಭಿಮಾನಿಗಳು ಹಾಗೂ ತೇರದಾಳ ಮತಕ್ಷೇತ್ರದ ಅವರ ಬೆಂಬಲಿಗರಿಗೆ ಬಾರಿ ಆಘಾತವನ್ನುಂಟು ಮಾಡಿದೆ.

ಕಳೆದ15 ವರ್ಷಗಳ ಕಾಲ ತೇರದಾಳ ವಿಧಾನಸಭಾ ಕ್ಷೇತ್ರದ ಆರಂಭದಿಂದ ಸತತವಾಗಿ ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು, ಈ ಭಾಗದ ಅಭಿಮಾನಿಗಳಿಗೆ ಸಾಕವ್ವ `ಅಮ್ಮ’ ಎಂದೇ ಪರಿಚಿತರಾಗಿದ್ದರು. ಆದರೆ ಈ ಭಾರಿ ಸ್ಥಳೀಯ ಮತ್ತು ನೇಕಾರರಿಗೆ ಟಿಕೆಟ್ ನೀಡುವ ಮಧ್ಯದಲ್ಲಿ ಮಹಾಲಿಂಗಪುರದ ಯುವ ಧುರೀಣ ಸಿದ್ದಣ್ಣ ಕೊಣ್ಣೂರ ಅವರಿಗೆ ಹೈಕಮಾಂಡ ಮಣೆ ಹಾಕಿರುವುದು ಕಾರ್ಯಕರ್ತರಲ್ಲಿ ದಿಗ್ಭ್ರಮೆ ಮೂಡಿದೆ.

2008 ರಲ್ಲಿ ಮತಕ್ಷೇತ್ರವಾಗಿ ರೂಪಗೊಂಡ ನಂತರ ನಡೆದ ಮೊದಲ ಚುನಾವಣೆಯಲ್ಲಿ ಉಮಾಶ್ರೀ ಸ್ಪರ್ಧೆಯಿಂದ ರಾಜ್ಯದಲ್ಲಿ ಕ್ಷೇತ್ರ ಗಮನ ಸೆಳೆದಿತ್ತು. ಆದರೆ ಕ್ಷೇತ್ರದಲ್ಲಿ ಉಮಾಶ್ರೀ ಹೊರಗಿನವರು ಎಂಬ ಕಾರಣಕ್ಕೆ ಬಿಜೆಪಿಯ ಸಿದ್ದು ಸವದಿ ವಿರುದ್ಧ ಸೋಲು ಅನುಭವಿಸಬೇಕಾಯಿತು. ಉಮಾಶ್ರೀ ಸೋತರೂ ಕ್ಷೇತ್ರದಲ್ಲಿ ಉಳಿದುಕೊಂಡು ನಾನು ನೇಕಾರನ ಮಗಳು, ನಾನು ನಿಮ್ಮವಳು ಎಂದು , ಪ್ರಚಾರ ಮಾಡುತ್ತಾ ಇಲ್ಲಿಯೇ ಉಳಿದರು. 2013 ರ ಚುನಾವಣೆಯಲ್ಲಿ ನೇಕಾರರು ಅವರ ಕೈ ಹಿಡಿದರು. ನಂತರ 2018ರಲ್ಲಿ ಮತ್ತೊಮ್ಮೆ ಮೂರನೇ ಬಾರಿ ಕಣಕ್ಕಿಳಿದಿದ್ದ ಮಾಜಿ ಸಚಿವೆ ಭಾರಿ ಅಂತರದಲ್ಲಿ ಹಾಲಿ ಶಾಸಕ ಸಿದ್ದು ಸವದಿ ವಿರುದ್ಧ ಸೋಲ ಬೇಕಾಯಿತು.

ಡಾ. ಪದ್ಮಜಿತ ನಾಡಗೌಡ ಪಾಟೀಲ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ. ಎ.ಆರ್. ಬೆಳಗಲಿ, ನೇಕಾರ ಸಮುದಾಯದ ಡಾ. ಎಂ.ಎಸ್. ದಡ್ಡೇನವರ ಸ್ಥಳೀಯ ಅಭ್ಯರ್ಥಿ ಆಕಾಂಕ್ಷಿಗಳಾಗಿ ಶತಾಯ-ಗತಾಯ ಪೈಪೋಟಿ ನಡೆಸಿದ್ದರು.

Advertisement

ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಕೂಡಾ ಪಂಚಮಸಾಲಿಯಾಗಿರುವುದರಿಂದ ಮತಗಳನ್ನು ವಿಭಜನೆ ಮಾಡುವ ಉದ್ದೇಶದಿಂದ ಹೈಕಮಾಂಡ್ ಪಂಚಮಸಾಲಿ ಮುಖಂಡ ಸಿದ್ದು ಕೊಣ್ಣೂರ ಅವರಿಗೆ ಮಣೆಹಾಕಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಹೈಕಮಾಂಡ್‌ನ ಈ ನಿರ್ಧಾರದಿಂದ ಸ್ಥಳೀಯ ಆಕಾಂಕ್ಷಿಗಳಾಗಿದ್ದ ಡಾ. ಪದ್ಮಜೀತ ನಾಡಗೌಡ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಮಹಾಲಿಂಗಪುರದ ಡಾ. ಎ. ಆರ್. ಬೆಳಗಲಿ ಈಗಾಗಲೇ ತಮ್ಮ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅಲ್ಲದೇ ಇನ್ನುಳಿದವರ ನಡೆ ನಿಗೂಢವಾಗಿದ್ದು, ಬೆಂಬಲಿಗರ ಸೂಚನೆಯಂತೆ ಮುನ್ನಡೆಯುವುದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next