Advertisement

Start-up Sector; ನವ‌ ಕರ್ನಾಟಕ ನಿರ್ಮಾಣಕ್ಕೆ ಸಿದ್ದು ಸ್ಟಾರ್ಟ್‌ ಅಪ್‌

11:33 PM Feb 16, 2024 | Team Udayavani |

ರಾಜ್ಯ ಈಗಾಗಲೇ ಸ್ಟಾರ್ಟ್‌ ಅಪ್‌ ವಲಯದಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯವಾಗಿದ್ದು, ಬೆಂಗಳೂರಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ಟ್‌ ಅಪ್‌ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ ಇದನ್ನು ಕಾಪಿಟ್ಟುಕೊಳ್ಳುವುದು ಈಗ ರಾಜ್ಯ ಸರ್ಕಾರದ ಅತಿ ದೊಡ್ಡ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ಹೊಸ ಕಾರ್ಯಕ್ರಮಗಳನ್ನು ಘೋಷಿಸಿದೆ.

Advertisement

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೀತಿ ನಿರೂಪಣೆ, ಉತ್ಕೃಷ್ಟತಾ ಕೇಂದ್ರ ಮತ್ತು ನವೀನ ಪ್ರಯತ್ನಗಳನ್ನು ಹುರಿದುಂಬಿಸುವ ಕಾರ್ಯಕ್ರಮ ಗಳಿಗೆ ಬಜೆಟ್‌ನಲ್ಲಿ ಮನ್ನಣೆ ನೀಡಲಾಗಿದೆ. ನೀತಿ ಗಳನ್ನು ಜಾರಿಗೊಳಿಸುವ ಮೂಲಕ ಬಂಡವಾಳ ಆಕರ್ಷಿಸುವ ಇಂಗಿತ ಬಜೆಟ್‌ನಲ್ಲಿ ವ್ಯಕ್ತವಾಗಿದೆ.

ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ಸ್ಟಾರ್ಟ್‌ ಅಪ್‌ಗಳಿಗೆ ಉತ್ತೇಜನ ನೀಡಲು ರಾಜೀವ್‌ ಗಾಂಧಿ ವಾಣಿಜ್ಯೋದ್ಯಮ ಕಾರ್ಯಕ್ರಮಗಳು, ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಮಹಿಳಾ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆಯ ಬೆಂಬಲ ಕಾರ್ಯಕ್ರಮ, ಕೃಷಿ ನಾವೀನ್ಯ ನವೋದ್ಯಮ ಸ್ಥಾಪನೆಗೆ ಸಿ-ಕ್ಯಾಂಪ್‌ನ ಅಗ್ರಿ ಇನ್ನೋವೇಶನ್‌ ಪಾರ್ಕ್‌ಗೆ 5 ಎಕರೆ ಭೂಮಿಯನ್ನು ಮೀಸಲಿಡುವುದಾಗಿ ಪ್ರಕಟಿಸಲಾಗಿದೆ.

ಉದಯೋನ್ಮುಖ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಫಿನ್‌ಟೆಕ್‌, ಸ್ಪೇಸ್‌ಟೆಕ್‌ ಮತ್ತು ಆಟೋಮೋಟಿವ್‌ ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಮುಂದಿನ ಐದು ವರ್ಷದಲ್ಲಿ ಉದ್ಯಮಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ಹತ್ತು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವುದನ್ನು ಘೋಷಿಸಲಾಗಿದೆ. ಉದ ಯೋನ್ಮುಖ ತಂತ್ರಜ್ಞಾನಗಳಲ್ಲಿ ಯುವಕರ ಕೌಶಲ್ಯಾಭಿವೃ ದ್ಧಿಗಾಗಿ ಕಲಬುರಗಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ತುಮಕೂರಿನಲ್ಲಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಮತ್ತು ಕಿಯೋನಿಕ್ಸ್‌ ಸಹ ಯೋಗದೊಂದಿಗೆ ಒಟ್ಟಾರೆ 12 ಕೋಟಿ ರೂ. ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲಿದೆ.

ಆರೋಗ್ಯ, ಕೃಷಿ ಮತ್ತು ಜೀವ ವಿಜ್ಞಾನದ ಇತರ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆಗಾಗಿ ಜಿನೋಮ್‌ ಎಡಿಟಿಂಗ್‌, ಜೀನ್‌ ಥೆರಪಿ ಕೇಂದ್ರ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳಿಗೆ 170 ಕೋಟಿ ರೂ: ಚಾಮರಾಜನಗರ, ಹಾಸನ, ಮಡಿಕೇರಿ, ಶಿರಸಿ, ಬೆಳಗಾವಿ, ವಿಜಯಪುರ, ಬಾಗ ಲಕೋಟೆ, ಗದಗ, ಧಾರವಾಡದಲ್ಲಿ ವಿಜ್ಞಾನ ಕೇಂದ್ರ /ತಾರಾಲಯಗಳನ್ನು ಕಾರ್ಯಾರಂಭ ಗೊಳಿಸಲಾಗುವುದು. ಉಡುಪಿ, ಹಾವೇರಿ, ಚಿತ್ತಾಪುರ, ಆದಿಚುಂಚನಗಿರಿ, ತುಮಕೂರಿನಲ್ಲಿ ವಿಜ್ಞಾನ ಕೇಂದ್ರಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು. ಶಿವ ಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು. ಇದಕ್ಕೆ ಪ್ರಸಕ್ತ ಸಾಲಿನಲ್ಲಿ 170 ಕೋಟಿ ರೂ. ಮೀಸಲಿಡಲಾಗಿದೆ.

ವಿದ್ಯಾರ್ಥಿಗಳಿಗೆ ರಾತ್ರಿ ಆಕಾಶ ವೀಕ್ಷಣೆ ಮತ್ತು ಆಕಾಶ ಕಾಯಗಳ ಕುರಿತು ಆಸಕ್ತಿ ಮೂಡಿಸಲು ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 833 ವಸತಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗ ಳಿಗೆ ಒಟ್ಟಾರೆ 3 ಕೋಟಿ ರೂ. ವೆಚ್ಚದಲ್ಲಿ ತಲಾ ಒಂದು ದೂರದರ್ಶಕ ಒದಗಿಸಲಾಗುವುದು.

ವಿಜ್ಞಾನ ನಗರಿಯ ಸ್ಥಾಪನೆ
ಬೆಂಗಳೂರಿನಲ್ಲಿ ಕೇಂದ್ರದ ಸಹಭಾಗಿ ತ್ವ ದಲ್ಲಿ ಒಟ್ಟು 233 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ನಗರಿಯ ಸ್ಥಾಪನೆ.

ಬೆಂಗಳೂರು ಇಂಡಿಯಾ ನ್ಯಾನೋ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆ.

12 ಕೋಟಿ ರೂ. ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ್ಯ, ನಾವೀನ್ಯತಾ ಕೇಂದ್ರಗಳ ಸ್ಥಾಪನೆ

ಗೇಮಿಂಗ್‌ ಸಂಬಂಧಿಸಿದ ಉತðಷ್ಟತಾ ಕೇಂದ್ರ ಸ್ಥಾಪನೆ

ಹೂಡಿಕೆ ಆಕರ್ಷಣೆಗೆ ಒತ್ತು
ಬೆಂಗಳೂರು ನಗರದಲ್ಲಿ 400ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳಿರುವ ಹಿನ್ನೆಲೆಯಲ್ಲಿ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ ನೀತಿಯನ್ನು ಜಾರಿಗೊಳಿಸಿ ಹೂಡಿಕೆ ಆಕರ್ಷಿಸಲು ಒತ್ತು ನೀಡಲಾಗುವುದು. ಅನಿ ಮೇಷನ್‌, ವಿಷುವಲ್‌ ಎಫೆಕ್ಟ್$Õ, ಗ್ರಾಫಿಕ್ಸ್‌, ಕಾಮಿಕ್ಸ್‌ ಕ್ಷೇತ್ರದ ಉದ್ದಿಮೆಗಳನ್ನು ಸೆಳೆ ಯಲು ಎವಿಜಿಸಿ-ಎಕ್ಸ್‌ಆರ್‌ 3.0 ನೀತಿ ಯನ್ನು ಪ್ರಕಟಿಸಿರುವ ಸರ್ಕಾರ 2024-29ರ ಅವಧಿಯಲ್ಲಿ ಈ ನೀತಿಯನ್ನು 150 ಕೋಟಿ ರೂ. ಬದ್ಧತಾ ವೆಚ್ಚದೊಂದಿಗೆ ಜಾರಿಗೆ ತರುವ ಪ್ರಸ್ತಾಪ ಮಾಡಿದೆ. ಗೇಮಿಂಗ್‌ ಸಂಬಂಧಿಸಿದ ಉತðಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next