Advertisement

ಸಿದ್ದು ಸಂಪುಟ ಸಂಪೂರ್ಣ

07:53 AM Sep 02, 2017 | Team Udayavani |

ಬೆಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆರನೇ ಬಾರಿಯ ಸಂಪುಟ ವಿಸ್ತರಣೆಯಲ್ಲಿ ನಿರೀಕ್ಷೆಯಂತೆ ವಿಧಾನ ಪರಿಷತ್‌ ಸದಸ್ಯರಾದ ಎಚ್‌.ಎಂ.ರೇವಣ್ಣ, ಆರ್‌.ಬಿ.ತಿಮ್ಮಾಪುರ ಹಾಗೂ ಗೀತಾ ಮಹದೇವ ಪ್ರಸಾದ್‌ (ಎಂ.ಸಿ.ಮೋಹನ್‌ ಕುಮಾರಿ) ಸಚಿವರಾಗಿ ಸೇರ್ಪಡೆ ಯಾಗಿದ್ದಾರೆ. ಈ ಮೂಲಕ ರಾಜ್ಯ ಸಚಿವ ಸಂಪುಟ ಸಂಪೂರ್ಣ ಭರ್ತಿಯಾಗಿದೆ. ಶುಕ್ರವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಎಚ್‌.ಎಂ.ರೇವಣ್ಣ ಹಾಗೂ ತಿಮ್ಮಾಪುರ್‌ ಸಂಪುಟ ದರ್ಜೆ ಸಚಿವರಾಗಿ ಹಾಗೂ ಗೀತಾ ಮಹದೇವ ಪ್ರಸಾದ್‌ ರಾಜ್ಯ ಸಚಿವೆಯಾಗಿ ಪ್ರಮಾಣ ಸ್ವೀಕರಿಸಿದರು. ರಾಜ್ಯಪಾಲ ವಜೂಭಾಯ್‌ವಾಲಾ ನೂತನ ಸಚಿವರಿಗೆ ಪ್ರಮಾಣ ಬೋಧಿಸಿದರು. 

Advertisement

ಎಚ್‌.ಎಂ.ರೇವಣ್ಣ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಆರ್‌.ಬಿ. ತಿಮ್ಮಾಪುರ ಶ್ರದ್ದಾಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಮಾತ್ರ ಹೇಳಿದರು. ಎಂ.ಸಿ. ಮೋಹನ್‌ಕುಮಾರಿ ಮಲೆ ಮಹದೇಶ್ವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಿಗೆ ಖಾತೆ ಹಂಚಲಾ ಗಿದ್ದು, ರೇವಣ್ಣರಿಗೆ ಸಾರಿಗೆ, ತಿಮ್ಮಾಪುರ್‌ಗೆ ಅಬಕಾರಿ, ಗೀತಾ ಮಹದೇವ ಪ್ರಸಾದ್‌ ಅವರಿಗೆ ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಹೊಣೆಗಾರಿಕೆ ನೀಡಲಾಗಿದೆ. ಇದರೊಂದಿಗೆ ಕೆಲವು ಸಚಿವರ ಖಾತೆಗಳೂ ಬದಲಾಗಿದ್ದು, ಸಾರಿಗೆ ಇಲಾಖೆ ರೇವಣ್ಣ ಅವರಿಗೆ ನೀಡಿರುವುದರಿಂದ ರಾಮ ಲಿಂಗಾರೆಡ್ಡಿ ಅವರಿಗೆ ಗೃಹಖಾತೆ ಜವಾಬ್ದಾರಿ ನೀಡಲಾಗಿದೆ. ಸಣ್ಣ ಕೈಗಾರಿಕೆ ಖಾತೆಯನ್ನು ಗೀತಾ ಮಹದೇ ವ ಪ್ರಸಾದ್‌ಗೆ ನೀಡಿರುವುದರಿಂದ ರಮೇಶ್‌ ಜಾರಕಿಹೊಳಿ ಅವರಿಗೆ ಸಹಕಾರ ಖಾತೆ ನೀಡಲಾಗಿದೆ. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಳಿಯಿದ್ದ ಕೌಶಲ್ಯಾಭಿವೃದ್ಧಿ ಇಲಾಖೆ ಹೆಚ್ಚುವರಿಯಾಗಿ ನೀಡಲಾಗಿದೆ.

ಸಂಭ್ರಮ: ಪ್ರಮಾಣ ವಚನ ಸಮಾರಂಭದಲ್ಲಿ ನೂತನ ಸಚಿವರ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಜಭವನದ ಒಳಗೆ ಮತ್ತು ಹೊರಗೆ ಜಮಾಯಿಸಿದ್ದ ಬೆಂಬಲಿಗರು ತಮ್ಮ ನಾಯಕರು ಪ್ರಮಾಣ ವಚನ ಸ್ವೀಕರಿಸುವಾಗ ಘೋಷಣೆಗಳ ಮೂಲಕ ಸಂಭ್ರಮಿಸಿದರು. ರಾಜಭವನದ ಹೊರಗೆ ಬೃಹತ್‌ ಪರದೆಯ ಟಿವಿ ಅಳವಡಿಸಲಾಗಿತ್ತು.

ಕ್ಯಾಬಿನೆಟ್‌ ಗ್ರೇಡ್‌
ಇದೇ ವೇಳೆ ರಾಜ್ಯ ಖಾತೆ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ, ರುದ್ರಪ್ಪ ಲಮಾಣಿ, ಈಶ್ವರ್‌ ಖಂಡ್ರೆ, ಪ್ರಮೋದ್‌ ಮದ್ವರಾಜ್‌ಗೆ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ.

ಒಬ್ಬ ದಲಿತ ಸಚಿವನಾಗುವುದನ್ನು ಸಹಿಸದೆ ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನಾನು ಕಾನೂನು ರೀತಿ 
ನಡೆದುಕೊಂಡಿದ್ದೇನೆ. ಕಾನೂನು ರೀತಿಯೇ ಅವರಿಗೆ ಉತ್ತರ ಕೊಡುತ್ತೇನೆ.
 ಆರ್‌.ಬಿ. ತಿಮ್ಮಾಪುರ 

Advertisement

ಐದು ವರ್ಷದಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ಇದೂ ಒಂದು. ಈ ಹಿಂದೆಯೇ ಸಂಪುಟದಲ್ಲಿ ಸ್ಥಾನ ಸಿಗಬೇಕೆಂದಿಲ್ಲ. ಸಿಎಂ ಈಗ ಸಚಿವನನ್ನಾಗಿ ಮಾಡಿದ್ದಾರೆ. ಈ ಹಿಂದೆಯೂ ಸಚಿವನಾಗಿದ್ದೆ. ಯಾವ ಖಾತೆ ವಹಿಸಿದರೂ ನಿರ್ವಹಿಸುತ್ತೇನೆ.
 ಎಚ್‌.ಎಂ. ರೇವಣ್ಣ

ನನಗೆ ಸಚಿವ ಸ್ಥಾನ ಸಿಕ್ಕಿರು ವುದರಿಂದ ಮನೆಯನ್ನು ಮಿಸ್‌ ಮಾಡ್ಕೊàಳ್ತೀನಿ ಎಂಬ  ನೋವಿದೆ. ಈ ಸಂದರ್ಭದಲ್ಲಿ ನನ್ನ ಪತಿಯ ನೆನಪು
ಕಾಡುತ್ತಿದೆ. ಅವರು ಮಾಡಬೇಕಿದ್ದ ಕೆಲಸವನ್ನು ನಾನು ಈಡೇರಿ ಸುತ್ತೇನೆ. 
 ಗೀತಾ ಎಂ. ಪ್ರಸಾದ್‌

ಗೃಹ ಖಾತೆ ಬಗ್ಗೆ ನನ್ನ ಹಾಗೂ ರಮಾನಾಥ ರೈ ನಡುವೆ ಯಾವುದೇ ಪೈಪೋಟಿ ಇರಲಿಲ್ಲ. ಗೃಹ ಖಾತೆ ವಹಿಸಿಕೊಳ್ಳುವಂತೆ ಮುಖ್ಯಮಂತ್ರಿ ಅವರು ವಾರದ ಹಿಂದೆಯೇ ಹೇಳಿದ್ದರು. ಖಾತೆ ನಿಭಾಯಿ ಸುವ ವಿಶ್ವಾಸವಿದೆ.
 ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿಗೃಹ ಖಾತೆ
ಆರ್‌.ಬಿ. ತಿಮ್ಮಾಪುರ– ಅಬಕಾರಿ
ರಮೇಶ್‌ ಜಾರಕಿಹೊಳಿಸಹಕಾರ 
ಎಚ್‌.ಎಂ. ರೇವಣ್ಣ- ಸಾರಿಗೆ
ಗೀತಾ ಮಹದೇವ ಪ್ರಸಾದ್‌ –ಸಕ್ಕರೆ, ಸಣ್ಣ ಕೈಗಾರಿಕೆ
ಸಂತೋಷ ಲಾಡ್‌ ಕಾರ್ಮಿಕ -ಕೌಶಲ್ಯಾಭಿವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next