Advertisement

ಸಿದ್ಧಾರೂಢ ಸಾಹಿತ್ಯ ಸೌರಭ ಕವಿಗೋಷ್ಠಿ

04:42 PM May 27, 2019 | Suhan S |

ಹುಬ್ಬಳ್ಳಿ: ಸದ್ಗುರು ಶ್ರೀ ಸಿದ್ಧಾರೂಢರು, ಶ್ರೀ ಗುರುನಾಥಾರೂಢರು ಹಾಗೂ ಅದ್ವೈತ ಸಿದ್ಧಾಂತಕ್ಕೆ ಸಂಬಂಧಿಸಿ ಶ್ರೀ ಸಿದ್ಧಾರೂಢ ಸಾಹಿತ್ಯ ಸೌರಭ ಕವಿಗೋಷ್ಠಿಯನ್ನು ಜೂ. 9ರಂದು ಸಂಜೆ 4 ಗಂಟೆಗೆ ಇಲ್ಲಿನ ಶ್ರೀ ಸಿದ್ಧಾರೂಢ ಮಠ ಆವರಣದ ನಿರಂಜನ ಭವನದಲ್ಲಿ ಆಯೋಜಿಸಲಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಸಿದ್ಧಾರೂಢ ಸಾಹಿತ್ಯ ಸೌರಭದ ಕಾರ್ಯಾಧ್ಯಕ್ಷ ಡಾ| ಗೋವಿಂದ ಮಣ್ಣೂರ, ಸದ್ಗುರು ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಜೀವನ ಚರಿತ್ರೆ ಕೆಲವರಿಗೆ ಮಾತ್ರ ಗೊತ್ತಿದ್ದು, ಅದನ್ನು ಎಲ್ಲರಿಗೂ ತಲುಪಿಸಲು ಯತ್ನಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕವಿಗೋಷ್ಠಿ ಆಯೋಜಿಸಲಾಗಿದೆ. ಅತಿಥಿಯಾಗಿ ಸಾಹಿತಿ ರಂಜಾನ್‌ ದರ್ಗಾ ಆಗಮಿಸಲಿದ್ದಾರೆ. ಸಾಹಿತಿ ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಿದ್ಧಾರೂಢ, ಗುರುನಾಥಾರೂಢರ ಕುರಿತು ಸಂಶೋಧನೆ, ಚಟುವಟಿಕೆಗಳು ಇನ್ನಷ್ಟು ಹೆಚ್ಚಿಸಲು ಸಾಹಿತ್ಯ ಚಿಂತಕರಿಗೆ ಅವಕಾಶ ನೀಡಲಾಗುವುದು. ಕವಿಗೋಷ್ಠಿಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು. ಸ್ವತಂತ್ರ ಸಾಹಿತ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ‘ಶ್ರೀಮದ್‌ ಜಗದ್ಗುರು ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢರ ಬಗೆಗೆ, ಅದ್ವೈತ ಸಿದ್ಧಾಂತ’ಕ್ಕೆ ಸಂಬಂಧಿಸಿದ ವಿಷಯವಾಗಿ ಇಲ್ಲವೆ ಯಾವುದೇ ಆಧ್ಯಾತ್ಮಿಕ ತಾತ್ವಿಕ ನೆಲೆಗಟ್ಟಿನ ಮೇಲೆ ರಚಿತವಾಗಿರುವ ತಮ್ಮ ಎರಡು ಸ್ವರಚಿತ ಕವನಗಳನ್ನು ಜೂ. 5ರೊಳಗೆ ಶ್ರೀಮಠದ ಟ್ರಸ್ಟ್‌ ಕಮಿಟಿಯಲ್ಲಿ ಕೊಟ್ಟು, ಇಲ್ಲವೆ ಇ-ಮೇಲ್: ssmath1836@gmail.com ವೆಬ್‌ಸೈಟ್: www.srisiddharoodhaswamiji.comಗೆ ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳ‌ಬಹುದು. ಯಾವುದೇ ಶುಲ್ಕ ಇಲ್ಲ. ಮಾಹಿತಿಗಾಗಿ ಮೊ: 9448116616, 9886371303 ಸಂಪರ್ಕಿಸಬೇಕು ಎಂದರು.

ನಾರಾಯಣಪ್ರಸಾದ ಪಾಠಕ, ಧರಣೇಂದ್ರ ಜವಳಿ, ಬಸವರಾಜ ಸಂಕನಗೌಡರ, ವಿಜಯಲಕ್ಷ್ಮೀ ಪಾಟೀಲ, ಈರಣ್ಣ ತುಪ್ಪದ ಇನ್ನಿತರರಿದ್ದರು.

Advertisement

ಸದ್ಗುರು ಜೀವನ ಚರಿತ್ರೆ ಸಂಶೋಧನೆಗೆ ಅವಕಾಶ: ಮಾಳಗಿ

ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಗಳ ಜೀವನ ಚರಿತ್ರೆ ಹಾಗೂ ತತ್ವ ಸಿದ್ಧಾಂತಗಳನ್ನು ಇನ್ನಷ್ಟು ಸಂಶೋಧನೆ, ಪ್ರಬಂಧ ಮಂಡಿಸುವ ಸಲುವಾಗಿ ಧಾರವಾಡದ ಕರ್ನಾಟಕ ವಿವಿ ಕನ್ನಡ ಅಧ್ಯಯನ ವಿಭಾಗವು ಪ್ರಸಕ್ತ ಶೈಕ್ಷಣಿಕ ಅಕಾಡೆಮಿಯಿಂದ ಈ ವಿಷಯಗಳಲ್ಲಿ ಪಿಎಚ್‌ಡಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಶ್ರೀ ಸಿದ್ಧಾರೂಢ ಮಠ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ಹೇಳಿದರು. ಸಿದ್ಧಾರೂಢರ ಜೀವನ ಚರಿತ್ರೆ ಹಾಗೂ ಅವರ ತತ್ವ-ಸಿದ್ಧಾಂತಗಳ ಬಗ್ಗೆ ಇದುವರೆಗೆ 16 ಗ್ರಂಥಗಳು ಬಂದಿವೆ. ಮೂರು ಪಿಎಚ್‌ಡಿ, ಒಂದು ಎಂಫಿಲ್ ಸಂದಿವೆ. ಆದರೂ ಅವು ಸಿದ್ಧಾರೂಢಸ್ವಾಮಿಗಳ ಕುರಿತು ಸಂಶೋಧನಾತ್ಮಕವಾಗಿ ಅಭಿವ್ಯಕ್ತವಾಗಿಲ್ಲ. ಆದ್ದರಿಂದ ಆಸಕ್ತರು, ವಿದ್ಯಾರ್ಥಿಗಳು ಸದ್ಗುರುವಿನ ಕುರಿತು ಇನ್ನಷ್ಟು ಉತ್ತಮವಾಗಿ ಸಂಶೋಧನೆ ಮಾಡುವ ನಿಟ್ಟಿನಲ್ಲಿ ಕೆಯುಡಿಯ ಡಾ| ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ನಾಗಯ್ಯ, ಆರ್‌.ಸಿ. ಹಿರೇಮಠ ಅವರನ್ನು ಸಂಪರ್ಕಿಸಲಾಗಿದೆ. ಅದಕ್ಕೆ ಅವರು ಸ್ಪಂದಿಸಿದ್ದು, ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುವುದು ಎಂದಿದ್ದಾರೆ. ಸದ್ಗುರುವಿನ ವಿಷಯವಾಗಿ ಪಿಎಚ್.ಡಿ ಅಧ್ಯಯನ ಮಾಡಲು ವಚನ ಸಾಹಿತ್ಯದಲ್ಲಿ ಅದ್ವೈತ, ಸಿದ್ಧಾರೂಢರು ಮತ್ತು ಅವರ ಸಮಕಾಲೀನ ಮಹಾತ್ಮರು, ಸಿದ್ಧಾರೂಢರು ಮತ್ತು ಅವರ ಶಿಷ್ಯವೃಂದ ಹಾಗೂ ಸಿದ್ಧಾರೂಢರ ದರ್ಶನಕ್ಕೆ ಬಂದ ಮಹಾತ್ಮರು ಎಂಬ ನಾಲ್ಕು ವಿಷಯ ಆಯ್ಕೆ ಮಾಡಿ ಕನ್ನಡ ಅಧ್ಯಯನ ವಿಭಾಗಕ್ಕೆ ನೀಡಲಾಗಿದೆ. ಈ ವಿಷಯಗಳಲ್ಲಿ ಪಿಎಚ್‌ಡಿಯಲ್ಲಿ ಸಂಶೋಧನೆ ಮಾಡಲು 3-4 ವಿದ್ಯಾರ್ಥಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅದಕ್ಕೆ ಅವರು ಆಸಕ್ತಿ ತೋರಿದ್ದಾರೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next