ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಮೈಸೂರಿಗೂ ಬಂದಿದ್ದಾರೆ ಎಲೆಕ್ಷನ್ ಕಿಂಗ್ ಖ್ಯಾತಿಯ
ತಮಿಳುನಾಡಿನ ಡಾ.ಕೆ.ಪದ್ಮರಾಜನ್.
ಮೊದಲ ದಿನವೇ ಬಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿಹೋಗಿದ್ದಾರೆ. ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ತಾಲೂಕು ರಾಮನ್ ನಗರದ ನಿವಾಸಿ, ಹೋಮಿ ಯೋಪತಿ ವೈದ್ಯರಾದ 59 ವರ್ಷ ವಯಸ್ಸಿನ ಪದ್ಮರಾಜನ್, ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದೇ ತಿಳಿದವರು. ಅದಕ್ಕಾಗಿಯೇ ಜನ ಸಾಮಾನ್ಯರೂ ಕೂಡ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು ಎಂಬ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿಯೇ ಪಂಚಾಯ್ತಿಯಿಂದ ರಾಷ್ಟ್ರಪತಿ ಚುನಾವಣೆವರೆಗೆ ತಮಿಳುನಾಡು, ಆಂಧ್ರಪ್ರದೇಶ,
ಕೇರಳ, ದೆಹಲಿ, ಕರ್ನಾಟಕ ಸೇರಿದಂತೆ 1988 ರಿಂದ ಈವರೆಗೆ 170ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.
ನಾಲ್ವರು ಪ್ರಧಾನಮಂತ್ರಿಗಳು, 11 ಜನ ಮುಖ್ಯಮಂತ್ರಿಗಳು, 15 ಜನ ಕೇಂದ್ರ ಸಚಿವರು,11 ರಾಜ್ಯ ಸಚಿವರ ವಿರುದಟಛಿ ಸ್ಪರ್ಧಿಸಿರುವುದಲ್ಲದೆ,ಎಂಟಕ್ಕೂ ಹೆಚ್ಚು ಬಾರಿ ರಾಷ್ಟ್ರಪತಿ ಚುನಾವಣೆ,ಲೋಕಸಭಾ ಚುನಾವಣೆ ಯಲ್ಲಿ 28 ಬಾರಿ,ರಾಜ್ಯಸಭೆ ಚುನಾವಣೆಗೆ 35 ಬಾರಿ, 51 ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಯಾವುದೇ ಚುನಾವಣೆಯಲ್ಲೂ ಜಿದ್ದಾಜಿದ್ದಿನ ಕ್ಷೇತ್ರಗಳನ್ನು ಗುರುತಿಸಿ ಸ್ಪರ್ಧೆ ಮಾಡುವ ಪದ್ಮರಾಜನ್, ಕ್ಷೇತ್ರದಲ್ಲಿ ಯಾವತ್ತೂ ಪ್ರಚಾರ ಮಾಡುವುದಿಲ್ಲ. ಸಾಂಕೇತಿಕ ಸ್ಪರ್ಧೆಗಷ್ಟೇ ತಮ್ಮ ಉಮೇದುವಾರಿಕೆಯನ್ನು ಸೀಮಿತಗೊಳಿಸಿಕೊಂಡು ಚುನಾವಣೆಗೆ ಅತೀ ಹೆಚ್ಚು ಬಾರಿ ಸ್ಪರ್ಧೆ ಮಾಡುವುದರಲ್ಲೇ ತಮ್ಮ ಹೆಸರನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಬರೆದಿದ್ದಾರೆ.